ಈ ರಾಶಿಯವರದ್ದು ಪ್ರೀತಿಯಲ್ಲಿ ಮೇಲುಗೈ, ನಿಮಗಿಷ್ಟದ ವ್ಯಕ್ತಿಗಳು ಸಿಗುತ್ತಾರೆ

ಈ ಕುಂಭ ರಾಶಿಯವರಲ್ಲಿ ಪ್ರೀತಿ ಪ್ರೇಮದ ಮೊಳಕೆ ಚಿಗುರೊಡಿದಿದ್ದರೆ ಯಾವ ರೀತಿಯಾದ ವ್ಯಕ್ತಿತ್ವವುಳ್ಳ ವ್ಯಕ್ತಿ, ಯಾವ ರಾಶಿಯ ವ್ಯಕ್ತಿಗಳು ನಿಮ್ಮ ಜಾತಕರಾಶಿಗೆ ಹೊಂದಾಣಿಕೆ ಆಗುವಂತಹ ಹುಡುಗ ಅಥವಾ ಹುಡುಗಿ ಸಿಗುತ್ತಾರೆ ಎಂಬುದನ್ನು ವಿಸ್ತಾರವಾಗಿ ತಿಳಿಯಬಹುದು. ಕುಂಭ ರಾಶಿಯವರಿಗೆ ಸುಂದರವಾದ ನೋಟ, ಸ್ಪುರದ್ರೂಪಿಯಾಗಿರುವಂತಹ ವ್ಯಕ್ತಿಗಳು ನಿಮ್ಮ ಜೀವನದಲ್ಲಿ ಬಾಳ ಸಂಗಾತಿಯಾಗಿ ಬರುತ್ತಾರೆ. ನಿಮಗೆ ಮೇಷ ರಾಶಿಯವರು ಹೆಚ್ಚು ಹೊಂದಾಣಿಕೆ ಆಗುತ್ತಾರೆ. ನಿಮಗೆ ಅರ್ಥವಾಗುವಂತಹ ವ್ಯಕ್ತಿತ್ವ ವುಳ್ಳವರಾಗಿರುತ್ತಾರೆ. ಕೆಲವೊಮ್ಮೆ ಆ ವ್ಯಕ್ತಿ ನಿಮಗೆ ಇಷ್ಟವಾಗಿದ್ದು ಮಾತನಾಡಲು ಭಯ ಪಡುತ್ತಿದ್ದರೆ ಹೇಗಾದರೂ ಮಾಡಿ ಆ ವ್ಯಕ್ತಿ ನಿಮ್ಮ ಬಗ್ಗೆ ವಿಚಾರಿಸುವ ಸಂಧರ್ಭ ಸೃಷ್ಠಿ ಮಾಡುತ್ತೀರಿ.

ನೀವು ಪ್ರೀತಿ ಮಾಡುವ ಹುಡುಗ ಅಥವಾ ಹುಡುಗಿಯ ಬಗ್ಗೆ ನಿರ್ಧಾರ ತೆಗೆದು ಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ನಿಮ್ಮ ಸಂಗಾತಿಯ ಆಯ್ಕೆ ನಿಮ್ಮ ಅನಿಸಿಕೆ ಅಭಿಪ್ರಾಯಗಳ ಆಧಾರದ ಮೇಲೆ ಅವಲಂಬಿಸಿರುತ್ತದೆ, ನೀವು ಇನ್ನೊಬ್ಬರ ಒತ್ತಾಯದ ಮೇರೆಗೆ ಮದುವೆ ಆಗಲು ಇಷ್ಟಪಡುವುದಿಲ್ಲ. ನಿಮಗೆ ಸರಿ ಅನಿಸಿದ್ದನ್ನು ನ್ಯಾಯಸಮ್ಮತವಾಗಿದೆ ಎಂದು ಅರಿವಾದರೆ ಮಾತ್ರ ನೀವು ಅದಕ್ಕೆ ಒಪ್ಪಿಗೆ ನೀಡುತ್ತೀರಿ.

ಈ ಕುಂಭರಾಶಿಯವರು ಎಚ್ಚರವಾಗಿ ಇರಬೇಕಾದ್ದು ಸಂತಾನಯೋಗದಲ್ಲಿ ಕೆಲವರಿಗೆ ವಿವಾಹಪೂರ್ವದಲ್ಲಿ ಮಕ್ಕಳಾಗುವ ಸಾಧ್ಯತೆ ಇರುತ್ತದೆ, ಆದ್ದರಿಂದ ನಿಮ್ಮ ಬುದ್ದಿಮಟ್ಟ ನಿಮ್ಮ ಹಿಡಿತದಲ್ಲಿ ಇರಬೇಕಾಗಿರುತ್ತದೆ. ವಿವಾಹಿತರಿಗೆ ಸಂತಾನವಿಲ್ಲದೆ ವರ್ಷಾನುವರ್ಷಗಳಿಂದ ನೋವನ್ನು ಅನುಭವಿಸುತ್ತಿದ್ದ ದಂಪತಿಗಳಿಗೆ ಸಂತಾನ ಪ್ರಾಪ್ತಿಯಾಗುತ್ತದೆ. ನಿಮ್ಮ ಜೀವನದಲ್ಲಿ ಸಿಂಹ ರಾಶಿಯವರ ಪ್ರವೇಶವಾಗುತ್ತದೆ. ನೀವು ಅವರನ್ನು ಇಷ್ಟಪಟ್ಟರು ಸಹ ಭಯ, ಮುಜುಗರ, ನಾಚಿಕೆಯಿಂದ ಪರಸ್ಪರ ಹೇಳಿಕೊಳ್ಳಲಾಗದೆ ಮೌನದಲ್ಲಿಯೇ ನಿಮ್ಮ ಪ್ರೀತಿ ಆರಂಭವಾಗಿ ಮೌನದಲ್ಲಿಯೇ ಉಳಿಯುತ್ತದೆ.

ನೀವು ನಿಮ್ಮ ಕೆಲಸದಲ್ಲಿ ಮಾತ್ರ ನಿರತರಾಗಿ ನಿಮ್ಮ ಪ್ರೀತಿ ಪಾತ್ರರನ್ನು ನಿರ್ಲಕ್ಷ್ಯ ಮಾಡಬೇಡಿ, ಇದರಿಂದ ನೀವು ಅಮೂಲ್ಯವಾದ ವ್ಯಕ್ತಿಗಳನ್ನು ಕಳೆದುಕೊಳ್ಳಬಹುದು‌. ಎಷ್ಟೇ ಒತ್ತಡ, ಆತಂಕ ಇದ್ದರೂ ಸಹ ನಿಮ್ಮನ್ನು ಪ್ರೀತಿಸುವ ಕುಟುಂಬ ಮತ್ತು ನಿಮ್ಮ ಸಂಗಾತಿಗೆ ಒಂದಷ್ಟು ಸಮಯವನ್ನು ಮೀಸಲಿಡಿ. ನಿಮ್ಮ ವೃತ್ತಿ ಬದುಕಿನಲ್ಲಿ ನೀವು ಹೆಸರು, ಕೀರ್ತಿ ಅಧಿಕಾರಕ್ಕಾಗಿ ನೀವು ಪಡುತ್ತಿರುವ ಶ್ರಮ ಅಂತಿಮವಾಗಿ ಉತ್ತಮ ಫಲ ನೀಡುತ್ತದೆ.

ಕುಂಭ ರಾಶಿಯವರ ಜೀವನದಲ್ಲಿ ನಿಮ್ಮ ಕನಸಿನ ರಾಜಕುಮಾರ ಅಥವಾ ರಾಜಕುಮಾರಿ ನಿಮ್ಮ ಬದುಕಿಗೆ ಹೆಜ್ಜೆ ಇಡುತ್ತಾರೆ, ಅವರು ಸುಂದರವಾಗಿ ಆಕರ್ಷಕವಾಗಿದ್ದು ಅವರ ಒಂದೊಂದು ಮಾತು ಕೂಡ ನಿಮ್ಮನ್ನು ತಲೆದೂಗಿಸುವಂತೆ ಮಾಡುತ್ತದೆ. ಸದಾ ಅವರ ಜೊತೆಯಲ್ಲಿಯೇ ಇರಬೇಕು ಅವರ ಮಾತನ್ನು ಕೇಳುತ್ತ ಇರಬೇಕು ಎಂಬ ಅನುಭವ ನೀಡುವಂತಹ ವ್ಯಕ್ತಿ ಬಂದು ಅವರ ಜೊತೆಯಲ್ಲಿ ಏಕಾಂತವಾಗಿ ಸಾಗುವ ಪ್ರಯಾಣಿಸುವ ಅವಕಾಶ ನಿಮ್ಮದಾಗಿರುತ್ತದೆ.

ಸಂಗಾತಿಯ ಆಯ್ಕೆಯಲ್ಲಿ ನಿಮಗೆ ಭಾರಿಗೊಂದಲ ಉಂಟಾಗುತ್ತದೆ, ಕೆಲವೊಮ್ಮೆ ಅವರ ಜ್ಞಾನ ತಿಳಿವಳಿಕೆ ವ್ಯಕ್ತಿತ್ವ ಸದ್ಗುಣ ನೋಡಿ ಅವರನ್ನು ವರಿಸಬೇಕೆ ಅಥವಾ ಅವರು ಸಧೃಡಕಾಯ ಹೊಂದಿದ್ದು ತುಂಬ ಸುಂದರವಾಗಿದ್ದಾರೆ ಎಂದು ಅವರನ್ನು ಸಂಗಾತಿಯಾಗಿ ಸ್ವೀಕರಿಸಲೇ ಎಂಬ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮತ್ತೊಂದೆಡೆ ಅವರ ಕುಟುಂಬ, ಆರ್ಥಿಕ ಹಿನ್ನೆಲೆ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಈ ಕುಂಭ ರಾಶಿಯವರು ಕುಟುಂಬದಲ್ಲಿ ನೋಡಿದ ವಧು, ವರ ನನ್ನು ನೋಡಿ ಮದುವೆ ಆಗಿ ಸುಖ ಸಂತೋಷದಿಂದ ಆದರ್ಶ ದಂಪತಿಗಳಾಗಿ ಜೀವನ ನಡೆಸುತ್ತಾರೆ ಎಂದು ಜಾತಕರಾಶಿಗಳ ಫಲಾಫಲಗಳ ಆಧಾರಿಸಿ ತಿಳಿಸಲಾಗಿದೆ.

%d bloggers like this: