ಈ ರಾಶಿಯವರಿಗೆ ಎಪ್ರಿಲ್ ಇಂದ ಸಾಡೆಸಾತಿ ಪ್ರಭಾವ, ಸ್ವಲ್ಪ ಎಚ್ಚರದಿಂದ ಮುನ್ನಡೆಯಿರಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸುವ ವಿಚಾರಗಳು ಕೆಲವರ ಬದುಕಿನಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿದೆ. ಈ ಜ್ಯೋತಿಷ್ಯ ಶಾಸ್ತ್ರವನ್ನು ನಂಬುವುದು ಬಿಡುವುದು ಅವರವರ ವೈಯಕ್ತಿಕ ಅಭಿಪ್ರಾಯ. ಆದರೆ ಈ ಜಾತಕ ರಾಶಿ ಫಲಾಫಲಗಳು ಅನೇಕ ಜನರ ಜೀವನದಲ್ಲಿ ಗತಿಸುತ್ತದೆ. ಇದೀಗ ಬಹು ಮುಖ್ಯವಾಗಿ ಈ 2022 ವರ್ಷದ ಏಪ್ರಿಲ್ ತಿಂಗಳಿನಲ್ಲಿ ಮಹತ್ತರವಾದ ಬದಲಾವಣೆಯೊಂದು ಗತಿಸುತ್ತಿದೆ. ಸಾಮಾನ್ಯವಾಗಿ ಶನಿಗ್ರಹವನ್ನು ಕೆಡಕು, ಅಪಾಯದ ಸೂಚನೆ ನೀಡುವ ಗ್ರಹವೆಂದೇ ಹೇಳಲಾಗುತ್ತದೆ. ಹಾಗಂತ ಶನಿ ಗ್ರಹವು ಎಲ್ಲಾ ಸಂಧರ್ಭದಲ್ಲಿಯೂ ಎಲ್ಲಾ ವ್ಯಕ್ತಿಗಳಿಗೂ ಕೆಡುಕನ್ನೇ ಉಂಟು ಮಾಡುವುದಿಲ್ಲ. ಆದರೆ ಈ ಶನಿಗ್ರಹವು ಒಮ್ಮೆ ಯಾವುದೇ ರಾಶಿಗೆ ಪ್ರವೇಶ ಮಾಡಿದರೆ ಸರಿ ಸುಮಾರು ಏಳು ವರ್ಷಗಳ ಕಾಲ ಆ ರಾಶಿಯ ವ್ಯಕ್ತಿಗಳ ಬದುಕಿನಲ್ಲಿ ಗಂಭೀರ ಪರಿಣಾಮ ಬೀರುವಂತೆ ಮಾಡುತ್ತದೆ.

ಇದು ಸಕರಾತ್ಮಕ ಅಥವಾ ನಕರಾತ್ಮಕ ಪರಿಣಾಮವನ್ನುಂಟು ಮಾಡಬಹುದು‌. ಹಾಗಾಗಿಯೇ ಶನಿ ಗ್ರಹ ಅಂದಾಕ್ಷಣ ಸಾಮಾನ್ಯವಾಗಿ ಎಲ್ಲರು ಕೊಂಚ ಅಳುಕುನಿಂದಾನೇ ನೋಡುತ್ತಾರೆ. ಇದನ್ನೇ ಸಾಡೇಸಾತಿ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಕರೆಯುತ್ತಾರೆ. ಈ ಶನಿ ಸಾಡೇಸಾತಿಯು ಬರೋಬ್ಬರಿ ಇಪ್ಪತ್ತೈದು ವರ್ಷಗಳಿಗೆ ಒಮ್ಮೆ ಪುನರಾವರ್ತನೆ ಆಗುತ್ತದೆಯಂತೆ.

ಇದೇ 2022ರ ಏಪ್ರಿಲ್ ತಿಂಗಳ 29ರಂದು ಶನಿಯು ತನ್ನ ಸ್ಥಾನದಿಂದ ಮತ್ತೊಂದು ರಾಶಿ ಅಂದರೆ ಈ ಬಾರಿ ಶನಿಗ್ರಹವು ಕುಂಭ ರಾಶಿಗೆ ತನ್ನ ಸ್ಥಾನ ಅಲಂಕರಿಸುತ್ತಾನೆ. ಇದರಿಂದಾಗಿ ಶನಿ ಪ್ರಭಾವಕ್ಕೆ ಒಳಗಾಗುವ ರಾಶಿಗಳು ಅಂದರೆ ಕುಂಭ,ಮಕರ, ವೃಶ್ಚಿಕ ಮತ್ತು ಮೀನ. ಮೀನ ರಾಶಿಯ ವ್ಯಕ್ತಿಗಳಿಗೆ ಈ ಶನಿ ಸಾಡೇಸಾತಿಯ ಪರಿಣಾಮ ದಿಂದಾಗಿ ಮಾನಸಿಕ ಹಿಂಸೆ, ಒತ್ತಡ ಇರಲಿದೆ. ಜೊತೆಗೆ ಅನಾವಶ್ಯಕವಾಗಿ ಇಲ್ಲ ಸಲ್ಲದ ಕಾರಣಗಳಿಗಾಗಿ ಆತಂಕ ಪಡುವಂತಹ ಸಂಧರ್ಭ ಸನ್ನಿವೇಶ ಸೃಷ್ಟಿಯಾಗಲಿದೆಯಂತೆ. ಅಂದುಕೊಂಡ ಕೆಲಸ ಕಾರ್ಯಗಳು ನಿಗದಿತ ಸಮಯದೊಳಗೆ ಕೈಗೂಡದೇ ವಿಳಂಬವಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ನಿಮ್ಮ ಪ್ರಯತ್ನವನ್ನು ಅರ್ಧದಲ್ಲೇ ನಿಲ್ಲಿಸಬಾರದು. ನಿಮ್ಮ ಶ್ರಮ ಪ್ರಯತ್ನಕ್ಕೆ ಉತ್ತಮ ಪ್ರತಿಫಲ ದೊರೆಯುತ್ತದೆ.

ಇನ್ನು ವೃಶ್ಚಿಕ ರಾಶಿಯ ಜನರಿಗೆ ಆಲಸ್ಯತನ ಹೆಚ್ಚಾಗಿ ಕಂಡು ಬರುತ್ತದೆ‌. ಯಾವುದೇ ಕಾರ್ಯದಲ್ಲಿ ಏಕಾಗ್ರತೆ ಒಮ್ಮತ ಮನಸ್ಸಿನಿಂದ ಕೆಲಸ ಮಾಡುವಂತಹ ಮನಸ್ಸಿಲ್ಲದೆ ಗೊಂದಲದಲ್ಲಿಯೇ ಇರುವಂತಹ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಏಪ್ರಿಲ್ ನಿಂದ ಜುಲೈ ವರೆಗೆ ನಿಮಗೆ ಉತ್ತಮವಾಗಿರುತ್ತದೆ. ಪ್ರಮುಖವಾಗಿ ಯಾವುದೇ ಕಾರಣಕ್ಕೂ ಅನಗತ್ಯ ಮಾತು, ಆತುರದ ನಿರ್ಧಾರದಿಂದಾಗಿ ಅನಗತ್ಯ ಸಮಸ್ಯೆಗಳನ್ನ ಮೈಮೇಲೆ ಎಳೆದುಕೊಳ್ಳಬೇಡಿ. ಆದಷ್ಟು ಮೌನ ತಾಳ್ಮೆ ನಿಮ್ಮನ್ನ ರಕ್ಷಣೆ ಮಾಡುತ್ತದೆ.

ಇನ್ನು ಶನಿ ಸಾಡೇಸಾತಿಯು ಕುಂಭ ರಾಶಿಯವರ ಮೇಲೆ ಕೋಪ ನಿಗ್ರಹವುಂಟು ಮಾಡುತ್ತದೆ. ಈ ಏಪ್ರಿಲ್ ತಿಂಗಳನಿಂದ ಕುಂಭ ರಾಶಿಯ ವ್ಯಕ್ತಿಗಳು ಯಾವುದೇ ನೂತನ ವ್ಯಾಪಾರ ವ್ಯವಹಾರಗಳಿಗೆ ಮುಂದಾಗಬೇಡಿ. ಆದಷ್ಟು ತಾಳ್ಮೆಯಿಂದಿರಿ. ಬರುವ ಅವಕಾಶಗಳೆಲ್ಲವು ನಿಮ್ಮನ್ನ ಪ್ರಗತಿಯತ್ತ ಕೊಂಡ್ಯೊವುದಿಲ್ಲ. ಹಾಗಾಗಿ ಬಹಳ ಎಚ್ಚರದಿಂದ ಹೆಜ್ಜೆಯಿಡಿ. ನಿಮ್ಮ ಕೋಪ ನಿಮ್ಮ ಜೀವನದ ದಿಕ್ಕನ್ನೇ ಬದಲಾಯಿಸಬಹುದು. ಆದ್ದರಿಂದ ಸಾಧ್ಯವಾದಷ್ಟು ಕೋಪ ನಿಯಂತ್ರಣದಲ್ಲಿಟ್ಟುಕೊಂಡರೆ ಉತ್ತಮವಾಗಿರುತ್ತದೆ.

ಮಕರ ರಾಶಿಯ ವ್ಯಕ್ತಿಗಳಿಗೆ ಶನಿ ಸಾಡೇಸಾತಿಯು ಅಷ್ಟಾಗಿ ಕೆಡುಕನ್ನ ಉಂಟು ಮಾಡದೇ ಹೋದರು ಕೂಡ ಕೆಲವು ನಕರಾತ್ಮಕ ಪ್ರಭಾವವನ್ನು ಬೀರುತ್ತದೆ. ಈ ರಾಶಿಯ ಜನರ ಎಲ್ಲಾ ಕೆಲಸಗಳು ವೇಗವಾಗಿಯೇ ನಡೆಯುತ್ತವೆ. ನಿಮ್ಮ ಕನಸುಗಳು ಕೈಗೂಡಬೇಕಾದರೆ ಅವಿರತ ಶ್ರಮ ಅತ್ಯಗತ್ಯ.ಆಲಸ್ಯತನ ಮಾಡಿದರೆ ಕನಸುಗಳು ಕನಸಾಗಿಯೇ ಉಳಿದು ಬಿಡುತ್ತವೆ.

%d bloggers like this: