ಈ ರಾಶಿಯವರಿಗೆ ಡಿಸೆಂಬರ್ ಅಲ್ಲಿ ಜೊತೆಗಿರಲಿದೆ ಅದೃಷ್ಟ, ಅಂದುಕೊಂಡ ಕೆಲಸಗಳು ನೆರವೇರುತ್ತವೆ

ಜ್ಯೋತಿಷ್ಯದ ಹನ್ನೆರಡು ರಾಶಿಗಳಲ್ಲಿ ಒಂಭತ್ತನೆಯ ರಾಶಿಚಕ್ರವಾಗಿರುವ ಧನಸ್ಸು ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಉತ್ತಮವಾದ ಅವಕಾಶಗಳಿವೆ. ಮೂಲನಕ್ಷತ್ರದ ನಾಲ್ಕು ಪಾದಗಳು ಹಾಗೂ ಉತ್ತರಾಷಡದ ಒಂದನೆಯ ಪಾದಗಳ ಅಡಿಯಲ್ಲಿ ಬರುವ ಈ ಧನಸ್ಸು ರಾಶಿಯ ಅಧಿಪತಿ ಗುರು. ಈ ರಾಶಿಯ ಮಹಿಳೆಯರು ಈ ಭಾರಿ ಸ್ವಯಂ ಉದ್ಯೋಗ ಆರಂಭಿಸಲು ಸೂಕ್ತ ಸಮಯವಾಗಿರುತ್ತದೆ. ಇವರಿಗೆ ಆರೋಗ್ಯ ವಿಚಾರದಲ್ಲಿ ಇಲ್ಲಿಯವರೆಗೆ ಇದ್ದ ಸಮಸ್ಯೆಗಳು ದೂರವಾಗಿ ಆರೋಗ್ಯದಿಂದಿರುತ್ತಾರೆ ಆದರೆ ವಯೋವೃದ್ದರು ಈ ರಕ್ತದೊತ್ತಡ, ಮಧುಮೇಹ ಕಾಯಿಲೆ ಬಗ್ಗೆ ಎಚ್ಚರ ವಹಿಸಬೇಕಾಗಬಹುದು. ಈ ರಾಶಿಯವರು ಈ ತಿಂಗಳು ಕೆಲವೊಮ್ಮೆ ಅನಿರೀಕ್ಷಿತ ದೂರದ ಪ್ರಯಾಣ ಮಾಡಬಹುದಾಗಿರುತ್ತದೆ.

ಉದ್ಯೋಗಸ್ಥರಿಗೆ ಬಡ್ತಿ ಸಿಗುವ ಅವಕಾಶವಿರುತ್ತದೆ ಮತ್ತು ಸ್ಥಾನ ಪಲ್ಲಟ ವಾಗುವ ಸಾಧ್ಯತೆಯಿದೆ. ನೀವು ಮಾತನಾಡುವಾಗ ಆದಷ್ಟು ಅವಶ್ಯಕತೆಯನ್ನು ಅರಿತು ಮಾತನ್ನು ಮುಂದುವರಿಸಿ ಇಲ್ಲವಾದಲ್ಲಾ ನೀವು ಆಡಿದ ಮಾತಾನಿಂದ ಸಮಸ್ಯೆಗೆ ಸಿಲುಕಬಹುದಾಗಿದೆ. ಜಮೀನು ವಿವಾದ ಅಂತ್ಯ ಕಾಣಬಹುದು ಜೊತೆಗೆ ನೀವು ಯಾವುದೇ ರೀತಿಯ ಸಾಲ ಪಡೆಯುವುದು, ಕೊಡುವುದು ಮಾಡಲು ಹೋಗಬಾರದು ಇದರಿಂದ ನಷ್ಟ, ಅನಾಹುತ ಆಗುವ ಸಂಭವಯಿದೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮವಾದ ಲಾಭ ದೊರುಕುವಂತಾಗಿ ಈ ಡಿಸೆಂಬರ್ ತಿಂಗಳಿಂದ ನಿಮ್ಮ ಆರ್ಥಿಕ ಸ್ಥಿತಿ ಚೇತರಿಕೆ ಕಂಡು ನಿಮ್ಮ ಜೀವನದ ಪಥ ಮತ್ತೊಂದು ದಿಕ್ಕಿಗೆ ಬದಲಾಗಬಹುದಾಗಿದೆ.

%d bloggers like this: