ಈ ರಾಶಿಯವರಿಗೆ ಡಿಸೆಂಬರ್ ತಿಂಗಳು ದೊಡ್ಡ ಶುಭ ಲಾಭ ತರುತ್ತದೆ

ಸಿಂಹ ರಾಶಿಯವರಿಗೆ ಡಿಸೆಂಬರ್ ತಿಂಗಳಿಂದ ಉತ್ತಮವಾದ ಭವಿಷ್ಯ ರೂಪುಗೊಳ್ಳಲಿದೆ. ಜಾತಕ ರಾಶಗಳ ಪ್ರಕಾರ 2020 ತನ್ನ ನಿರ್ಗಮನದಿಂದ ವಿವಿಧ ರಾಶಿಗಳಿಗೆ ಯಾವ ರೀತಿಯಲ್ಲಿ ಪ್ರಯೋಜನವಿದೆ ಅನಾನುಕೂಲವಿದೆ ಎಂದು ತಿಳಿಯಬಹುದಾಗಿದೆ. ವಿಶೇಷವಾಗಿ ಗ್ರಹ ನಕ್ಷತ್ರಗಳ ಆಧಾರದ ಮೇಲೆ ಯಾವ ರಾಶಿಗಳು ಎಚ್ಚರದಿಂದ ಇರಬೇಕು ಎಂಬುದನ್ನು ತಿಳಿದುಕೊಳ್ಳುವುದು ಉತ್ತಮವಾಗಿದೆ. ಸಿಂಹ ರಾಶಿಯ ಸ್ವಾಮಿ ಗ್ರಹ ವಾಗಿರುವ ಸೂರ್ಯದೇವರು ಡಿಸೆಂಬರ್ ತಿಂಗಳು ವೃಶ್ಚಿಕ ರಾಶಿ ಮತ್ತು ಧನಸ್ಸು ರಾಶಿಗಳಲ್ಲಿ ಗೋಚರಿಸಲ್ಪಟ್ಟಿತ್ತು. ಸೂರ್ಯ ಗ್ರಹ ಗೋಚರಿಸುವುದರಿಂದ ಬುಧಾದಿತ್ಯ ಯೋಗ ಲಭಿಸುತ್ತದೆ.

ಈ ಬುಧಾದಿತ್ಯ ಯೋಗವು ಸಂಪೂರ್ಣವಾಗಿ 2020ರ ಡಿಸೆಂಬರ್ ತಿಂಗಳಿನಿಂದ ಸಿಂಹ ರಾಶಿಯ ಮೇಲೆ ಪ್ರಭಾವ ಬೀರುತ್ತಿದ್ದಾನೆ. ಇದರ ಜೊತೆಗೆ ಲಕ್ಷ್ಮಿ ನಾರಾಯಣ ಯೋಗವು ಸಹ ಲಭಿಸುತ್ತದೆ. ಸಿಂಹ ರಾಶಿಯವರು ಡಿಸೆಂಬರ್ ತಿಂಗಳಿಂದ ಬುಧಾದಿತ್ಯ ಯೋಗಕ್ಕೆ ಒಳಗಾದರೂ ಸಹ ಕೆಲವೊಂದು ಎಚ್ಚರಿಕೆ ಮತ್ತು ಸಂಕಷ್ಠಗಳನ್ನು ಎದುರಿಸಲೇಬೇಕಾಗಿದೆ. ತಂದೆಯ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದ್ದು ಮನೆಯ ಹಿರಿಯರ ಆರೋಗ್ಯದ ಕಡೆ ಗಮನಹರಿಸ ಬೇಕಾಗಿರುವುದು ಅಗತ್ಯವಾಗಿದೆ. ಸಂತಾನ ಭಾಗ್ಯದಲ್ಲಿ ತೊಡಕುಗಳಿದ್ದು ಗರ್ಭಿಣಿ ಮಹಿಳೆಯರು ಹೆಚ್ಚು ಜಾಗೃತಿಯಿಂದ ಇರಬೇಕಾಗಿದೆ. ಜೊತೆಗೆ ಪ್ರೇಮಿಗಳು ಕುಟುಂಬಸ್ಥರ ಎಲ್ಲರ ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಕಾಲಿಡುವ ಅವಕಾಶವಿದೆ.

ಇನ್ನು ಸಿಂಹ ರಾಶಿಯ ಮಹಿಳೆಯರು ಸ್ವಯಂ ಉದ್ಯೋಗ ಮಾಡಬೇಕು ಎಂದು ಯೋಜನೆವುಳ್ಳವರಿಗೆ ಈ ಸಮಯ ಶುಭಾರಂಭವಾಗಿದೆ. ವ್ಯಾಪಾರ ವ್ಯವಹರಗಳಲ್ಲಿ ಉತ್ತಮವಾದ ಧನಲಾಭ ಆಗಮನವಾಗುತ್ತದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ಸಮಯ ಇದಾಗಿದ್ದು. ಧೀರ್ಘಕಾಲದ ನಿರಂತರ ಪ್ರಯತ್ನಕ್ಕೆ ಜಯ ಸಿಗುತ್ತದೆ. ನಿಮ್ಮ ಜೀವನದ ಸಂಗಾತಿ ನಿಮ್ಮ ಬೆಂಬಲಕ್ಕೆ ನಿಲ್ಲುವುದು ನಿಮ್ಮ ಉತ್ಸಾಹ ಇನ್ನಷ್ಟು ಹೆಚ್ಚಾಗಿ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಅವಕಾಶವಿದೆ. ನೀವು ಆರಂಭಿಸುವ ಎಲ್ಲಾ ಕಾರ್ಯಗಳು ಸಹ ಉತ್ತಮವಾಗಿ ನಡೆಯುವಂತದ್ದು ಭಾಗ್ಯದ ಬಾಗಿಲು ನಿಮಗೆ ಸದಾ ತೆರೆದಿರುತ್ತದೆ.

ಆದರೆ ನೀವು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಎಚ್ಚರವಿರಲಿ ಆ ನಿರ್ಣಯಗಳು ಕೆಲವೊಮ್ಮೆ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಬಹುದು. ನಿಮ್ಮ ಹಿತೈಷಿಗಳ ಸಲಹೆ ಸೂಚನೆ ಪಡೆಯುತ್ತಿರುತ್ತೀರಿ ಇದು ನಿಮಗೆ ಉಪಯುಕ್ತವಾಗುತ್ತದೆ. ಇನ್ನು ಈ ಸಿಂಹ ಲಗ್ನದಲ್ಲಿ ಬರುವ ಮತ್ತು ಸಿಂಹ ರಾಶಿಯ ವ್ಯಕ್ತಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಗಳಿಸುವ ಅವಕಾಶವಿದೆ. ಸರ್ಕಾರಿ ಉದ್ಯೋಗದಲ್ಲಿ ರುವವರಿಗೆ ಬಡ್ತಿ ದೊರೆಯುತ್ತದೆ. ನಿಮ್ಮ ಧೀರ್ಘಕಾಲದ ಸಮಸ್ಯೆಗಳು ಪರಿಹಾರವಾಗುತ್ತದೆ. ಅದಕ್ಕಾಗಿ ನೀವು ಅರಳೀಮರಕ್ಕೆ ಆದಷ್ಟು ನೀರನ್ನು ಪೋಷಿಸುವ ಕಾರ್ಯ ಮಾಡಿದರೆ ನಿಮ್ಮ ಜೀವನದಲ್ಲಿ ಮಸತ್ತರ ಬದಲಾವಣೆಗಳು ನಡೆಯುತ್ತದೆ ಎಂದು ಖ್ಯಾತ ಜ್ಯೋತಿಷ್ಯರು ತಿಳಿಸುತ್ತಾರೆ.

%d bloggers like this: