ಈ ರಾಶಿಯವರಿಗೆ ಈ ವರ್ಷದ ಸಂಕ್ರಾಂತಿ ತರಲಿದೆ ಶುಭ

ವರ್ಷದ ಆರಂಭದ ಪ್ರಥಮ ಹಬ್ಬವಾಗಿರುವ ಮಕರ ಸಂಕ್ರಾಂತಿ ಹಬ್ಬ ಎಲ್ಲರ ಬದುಕಲ್ಲಿ ಸಕರಾತ್ಮಕತೆಯ ಬದಲಾವಣೆ ಗಾಳಿಯನ್ನ ಬೀಸುತ್ತದೆ. ಕೆಲವರಿಗೆ ಶುಭ ಸಂಗತಿಗಳು ಗತಿಸಿದರೆ ಇನ್ನೂ ಕೆಲವರಿಗೆ ಅಶುಭ ಸಂಗತಿಗಳು ನಡೆಯುತ್ತವೆ. ಮಕರ ಸಂಕ್ರಮಣ ದಿನದ ನಂತರ ದ್ವಾದಶ ರಾಶಿ ಚಕ್ರಗಳಲ್ಲಿ ಮಹತ್ತರವಾದ ಬದಲಾವಣೆಗಳು ನಡೆಯುತ್ತವೆ. ಎಲ್ಲಾ ರಾಶಿಗಳ ಮೇಲೆ ಗ್ರಹಗತಿಗಳು ನೇರವಾಗಿ ಪ್ರಭಾವ ಬೀರುತ್ತವೆ. ಈ ಗ್ರಹಗತಿಗಳ ದೃಷ್ಟಿಯಿಂದಾಗಿಯೆ ಸಕರಾತ್ಮಕತೆ ಮತ್ತು ನಕರಾತ್ಮಕತೆ ಉಂಟಾಗುತ್ತದೆ ಎಂದು ಜ್ಯೋತಿಷ್ಯದಲ್ಲಿ ತಿಳಿಸುತ್ತಾರೆ. 2022ರ ಮಕರ ಸಂಕ್ರಮಣದಲ್ಲಿ ಸೂರ್ಯನು ತನ್ನ ಪುತ್ರ ಶನಿಯ ಮನೆಗೆ ಪ್ರವೇಶ ಮಾಡಲಿದ್ದಾನೆ‌. ಇದೇ ಜನವರಿ 14ರಂದು ಮೂರು ಗ್ರಹಗಳು ಮಕರ ರಾಶಿಯಲ್ಲಿ ಸಂಯೋಜನೆ ಆಗಲಿದೆ. ಸೂರ್ಯನು ಮಕರ ರಾಶಿಗೆ ಪ್ರವೇಶ ಮಾಡಿದಾಗ ಈ ಐದು ರಾಶಿಯವರ ಜೀವನದಲ್ಲಿ ಶುಭ ಸೂಚನೆಗಳು ಹೆಚ್ಚಾಗಿರುತ್ತದೆ.

2022ರ ಹೊಸ ವರ್ಷದಲ್ಲಿ ಮಕರ ಸಂಕ್ರಮಣದ ಪ್ರಭಾವ ಬೀರುವುದರಿಂದ ವೃಷಭ ರಾಶಿಯ ವ್ಯಕ್ತಿಗಳಿಗೆ ಈ ಬಾರಿ ಒಂದಷ್ಟು ಶುಭ ಸುದ್ದಿಗಳು ಹೊರ ಬೀಳಲಿವೆ. ಶನಿಗ್ರಹವು ಒಂಭತ್ತನೇಯ ಮನೆಯಲ್ಲಿ ಇರುವುದರಿಂದ ಈ ವೃಷಭ ರಾಶಿಯ ವ್ಯಕ್ತಿಗಳಿಗೆ ಸಕರಾತ್ಮಕವಾಗಿ ಬದುಕಿನಲ್ಲಿ ಭಾರಿ ಬದಲಾವಣೆ ಆಗಲಿದೆ. ಹಣಕಾಸಿನ ವಿಚಾರದಲ್ಲಿ ಜಾಗೃತವಾಗಿ ಇರಬೇಕು. ಇಲ್ಲವಾದರೆ ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸಬೇಕಾದೀತು. ಆದರೆ ಜೂನ್ ತಿಂಗಳಿಂದ ಸೆಪ್ಟೆಂಬರ್ ವರೆಗೆ ಗುರುಗ್ರಹ ನಿಮ್ಮ ರಾಶಿ ಮನೆಯಲ್ಲಿ ಸಂಚಾರ ಮಾಡುವುದರಿಂದ ನಿಮ್ಮ ಜೀವನದಲ್ಲಿ ಶುಭಫಲಗಳು ಲಭಿಸುತ್ತದೆ. ದೇವರಲ್ಲಿ ನಂಬಿಕೆ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಅವಕಾಶವಿದೆ. ಇನ್ನು ವೃತ್ತಿ ಜೀವನದಲ್ಲಿ ವೃಷಭ ರಾಶಿಯವರು ಮಹತ್ತರವಾದ ಬದಲಾವಣೆಗಳಾಗುತ್ತವೆ. ಕೆಲಸದಲ್ಲಿ ನಿಮಗೆ ಅನಿರೀಕ್ಷಿತ ಬಡ್ತಿ, ವೇತನದಲ್ಲಿ ಹೆಚ್ಚಳ, ಉದ್ಯೋಗದಲ್ಲಿ ಉನ್ನತ ಅಧಿಕಾರ ಸಿಗುತ್ತದೆ. ಆದರೆ ಅಧಿಕ ಖರ್ಚು ಆಗುವಂತದ್ದು, ಆದ್ದರಿಂದ ಇತಿಮಿತಿಯಿಂದ ಹಣ ಬಳಸಿ.

ಮೇಷ ರಾಶಿಯವರಿಗೆ ಈ ಸಂಕ್ರಾಂತಿ ಹಬ್ಬದ ನಂತರ ವೈಯಕ್ತಿಕ ಜೀವನದಲ್ಲಿ ಅನನ್ಯವಾದ ಅನುಭವ ಆಗುತ್ತದೆ. ಮನಸ್ಸಿನ ದುಗುಡ, ದುಮ್ಮಾನಗಳು ದೂರವಾಗಿ, ಆಂತರ್ಯದಲ್ಲಿ ಸಂತೋಷ ಉಂಟಾಗುತ್ತದೆ. ಆರೋಗ್ಯದಲ್ಲಿ, ಐಶ್ವರ್ಯ ನಿರೀಕ್ಷೆಗೂ ಮೀರಿ ಉತ್ತಮವಾಗಿರುತ್ತದೆ. ಇನ್ನು ವ್ಯಾಪಾರ, ವ್ಯವಹಾರಗಳಲ್ಲಿ ಪ್ರಗತಿ ಕಾಣುತ್ತದೆ. ಮಕ್ಕಳ ವಿಧ್ಯಾಭ್ಯಾಸದಲ್ಲಿ ಪ್ರಗತಿ ಕಾಣುತ್ತಾರೆ.

ಕನ್ಯಾ: ಕನ್ಯಾ ರಾಶಿಯವರಿಗೆ ಈ ಸಂಕ್ರಮಣ ದಿನದಿಂದ ರಾಜಯೋಗ, ಕುಭೇರರಾಗುವ ಯೋಗ ಲಭಿಸಲಿದೆ. ಇವರ ಜೀವನದಲ್ಲಿ ಈ ವರ್ಷ ಹಂತ ಹಂತವಾಗಿ ಪ್ರಗತಿ ಕಾಣುತ್ತಾರೆ. ಉನ್ನತ ಮಟ್ಟದ ಅಧಿಕಾರ ಸ್ಥಾನ, ಮಾನ ದೊರಕುತ್ತದೆ. ನಿಮ್ಮ ಉದ್ಯೋಗದಲ್ಲಿ ನಿಮಗೆ ಹೊಸ ಜವಬ್ಧಾರಿ ನಿರ್ವಹಿಸಬೇಕಾಗುತ್ತದೆ. ನಿಮ್ಮ ಮೇಲಾಧಿಕಾರಿಗಳಿಂದ ಪ್ರಶಂಸಿಸುತ್ತಾರೆ. ಆರ್ಥಿಕ ಜೀವನ ಉತ್ತಮವಾಗಿರುತ್ತದೆ.

ವೃಶ್ಚಿಕ ರಾಶಿಯವರಿಗೆ ಈ ವರ್ಷದಿಂದ ವೃತ್ತಿಪರ ಜೀವನದಲ್ಲಿ ಅಮೋಘವಾದ ಯಶಸ್ಸು ದೊರೆಯುತ್ತದೆ. ಇನ್ನು ವ್ಯಾಪಾರ ವ್ಯವಹಾರಗಳಲ್ಲಿ ಅತ್ಯಧಿಕ ಲಾಭವಾಗುತ್ತದೆ. ಆದರೆ ಬೃಹತ್ ಮೊತ್ತದ ಹೂಡಿಕೆಯನ್ನು ಮಾಡಲು ನಿರ್ಧಾರ ತೆಗೆದುಕೊಳ್ಳಬೇಡಿ, ಇದರಿಂದ ನಿಮಗೆ ಅಪಾಯ ಹೆಚ್ಚಾಗಿರುತ್ತದೆ, ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಉದ್ಯೋಗ ಪಡೆದು ತಮ್ಮ ಕನಸನ್ನು ಸಾಕಾರ ಮಾಡಿಕೊಳ್ಳಬಹುದಾಗಿದೆ. ಮಕ್ಕಳಿಗೆ ಪೋಷಕರಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ಜೊತೆಗೆ ಮಕ್ಕಳಿಂದಲೂ ಸಹ ವೃದ್ಧರಿಗೆ ಉತ್ತಮವಾದ ಸಹಕಾರ ದೊರೆಯುತ್ತದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಮಾಡುವ ಅವಕಾಶವಿರುತ್ತದೆ.

ಮೀನ ರಾಶಿಯವರಿಗೆ ಉದ್ಯೋಗದಲ್ಲಿ ಹಿರಿಯ ಸಹೋದ್ಯೋಗಿಗಳಿಂದ ಸಹಕಾರ ದೊರೆತು ನಿಮ್ಮ ಕೆಲಸ ಕಾರ್ಯಗಳು ಸುಗಮವಾಗಿ ಸಾಗುತ್ತದೆ. ಇನ್ನು ಆರ್ಥಿಕ ಜೀವನ ಚೇತರಿಕೆ ಕಂಡು ಲಕ್ಷ್ಮಿ ಕೃಪಾಕಟಾಕ್ಷ ವಾಗಿ ಧನ ಪ್ರಾಪ್ತಿಯಾಗುತ್ತದೆ. ನಿಮ್ಮಲ್ಲಿ ಆತ್ಮವಿಶ್ವಾಸ ಮೂಡಿ ವೃತ್ತಿಯಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತೇನೆ. ಜೊತೆಗೆ ನಿಮ್ಮ ದಾಂಪತ್ಯ ಜೀವನವು ಸಹ ಸುಖ.ಸಂತೋಷದಿಂದ ಕೂಡಿರುತ್ತದೆ. ಆರಂಭಿಸಿದ ನೂತನ ಎಲ್ಲಾ ಕೆಲಸ ಕಾರ್ಯಗಳು ಜಯವಾಗುತ್ತದೆ‌. ಇನ್ನು ಕೌಟುಂಬಿಕ ಕಲಹಗಳು ದೂರವಾಗಿ ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ. ವ್ಯಾಪಾರ ವ್ಯವಹಾರಗಳು ಕೂಡ ಲಾಭದಾಯಕವಾಗಿ ನಡೆಯುತ್ತವೆ. ಆದರೆ ಇತರರನ್ನು ಬಹುಬೇಗ ನಂಬಲು ಹೋಗಬೇಡಿ, ಇದರಿಂದ ಅನಾವಶ್ಯಕ ಸಮಸ್ಯೆಗಳಿಗೆ ಸಿಲುಕಬಹುದು. ಇನ್ನು ಬಿಡುವಿನ ವೇಳೆಯಲ್ಲಿ ಪುಣ್ಯಕ್ಷೇತ್ರಗಳ ಭೇಟಿ ಮಾಡುವುದರಿಂದ ಭಗವಂತನ ಅನುಗ್ರಹ ನಿಮ್ಮದಾಗಿರುತ್ತದೆ.

%d bloggers like this: