ಈ ರಾಶಿಯವರಿಗೆ ಹೊಸ ವರ್ಷದ ಆರಂಭದಲ್ಲಿ ಸಾಕಷ್ಟು ಅದೃಷ್ಟ ಹಾಗೂ ಯಶಸ್ಸು

ಹೊಸ ವರ್ಷದಿಂದ ಮೇಷ ರಾಶಿಯವರಿಗೆ ಆರಂಭದಲ್ಲಿ ಎಲ್ಲವು ಒಳಿತಾದರೆ ನಂತರದ ದಿನಗಳಲ್ಲಿ ಕಟ್ಟೆಚ್ಚರವಾಗಿದೆ, ಆದಷ್ಟು ತಮ್ಮ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ನಿಮ್ಮಲ್ಲಿರುವಅತಿಯಾದ ಉತ್ಸಾಹ ಕೆಲಸದಲ್ಲಿನ ಬದ್ದತೆ ನಿಮಗೆ ಮುಳುವಾಗಲಿದೆ. ಇತರರೊಂದಿಗೆ ರಾಜಿ ಮಾಡಿಕೊಳ್ಳಲೇ ಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ನಿಮ್ಮ ಗಮನಕ್ಕೆ ಬಾರದ ರೀತಿಯಲ್ಲಿ ಹಿತ ಶತ್ರುಗಳು ಹೆಚ್ಚಾಗಲಿದ್ದಾರೆ. ಹೌದು ವರ್ಷದಿಂದ ಹಲವು ರಾಶಿಗಳಿಗೆ ರಾಹು ಕೇತುಗಳು ನೇರದೃಷ್ಠಿಯ ಪ್ರಭಾವ ಬೀರುತ್ತಿರುವುದರಿಂದ ಮೇಷ ರಾಶಿಯವರಿಗೂ ಕೂಡ ಕಂಟಕ ಎದುರಾಗಲಿದೆ. ನೀವು ಬದಲಾಯಿಸಿಕೊಳ್ಳಬೇಕಾದ ವ್ಯಕ್ತಿತ್ವ ಮತ್ತು ಪರಿಹಾರಗಳು ಈ ರೀತಿಯಿವೆ.

ಮೇಷ ರಾಶಿಯ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಸಂಶಯ ಪಡುವಂತಹ ಗುಣ ಇರುವುದಿಲ್ಲ ಆದರೆ ಕೆಲವು ವ್ಯಕ್ತಿಗಳು ಅನುಮಾನ ಸಂಶಯದ ಭೂತ ಆವರಿಸಿಕೊಂಡಿರುತ್ತದೆ, ಕೆಲವರಿಗೆ ತಮ್ಮ ಸಂಗಾತಿಯ ಮೇಲೆ ಅನುಮಾನವಾಗಿ ದಾಂಪತ್ಯದಲ್ಲಿ ಕಲಹ ಉಂಟಾಗಿ ವಿಚ್ಛೇದನ ನೀಡುವ ಹಂತಕ್ಕೆ ತಲುಪಬಹುದು. ಇನ್ನು ಕೆಲವರಿಗೆ ತನ್ನ ಉದ್ಯೋಗಿಗಳ ಮೇಲೆ, ತನ್ನ ಸ್ನೇಹಿತರ ಮೇಲೆ ಅನುಮಾನ ಸಂಶಯ ಏರ್ಪಟ್ಟು ಎಲ್ಲರನ್ನು ಕಳೆದುಕೊಳ್ಳುವ ಸಂಧರ್ಭ ಬರುತ್ತದೆ. ಆದ್ದರಿಂದ ನಿಮ್ಮಲ್ಲಿ ಏನಾದರು ಅನುಮಾನದಂತಹ ಗುಣಗಳಿದ್ದರೆ ತಕ್ಷಣ ಅದನ್ನು ಬಿಟ್ಟು ಬಿಡಿ. ಇದರಿಂದ ನೀವು ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೆ ಹೆಚ್ಚಾಗಿದೆ.

ನೀವು ಸಾಮಾಜಿಕ ಕಳಕಳಿ, ಜವಬ್ದಾರಿ ಹೊಂದಿರುವಂತಹ ವ್ಯಕ್ತಿಗಳಾಗಿದ್ದು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮುಂದಿರುತ್ತೀರಿ. ಆದರೆ ಕೆಲವು ದಿನಗಳ ಕಾಲ ಪರೋಪಕಾರಿ ಕೆಲಸಗಳಿಂದ ದೂರವಿರಿ. ನೀವು ಒಳಿತು ಮಾಡಲು ಹೋದಷ್ಟು ಅಪವಾದಕ್ಕೆ ಅನುಮಾನಕ್ಕೆ ಗುರಿಯಾಗುತ್ತೀರಿ. ಇಲ್ಲ ಸಲ್ಲದ ಆರೋಪಗಳು ನಿಮ್ಮ ಮೇಲೆ ಬರುತ್ತವೆ ತಕ್ಷಣಕ್ಕೆ ಪ್ರತಿಕ್ರಿಯಿಸದೇ ತಾಳ್ಮೆಯಿಂದ ವರ್ತಿಸಬೇಕಾಗಿದೆ, ಇದು ನಿಮ್ಮ ತಾಳ್ಮೆಯನ್ನು ಪರೀಕ್ಷಿಸುವ ಸಮಯವಾಗಿದೆ. ಜೀವನದ ಮಹತ್ವದ ನಿರ್ಧಾರಗಳನ್ನು ತಕ್ಷಣಕ್ಕೆ ಆತುರದಲ್ಲಿ ತೆಗೆದುಕೊಳ್ಳಬೇಡಿ. ಜವಬ್ದಾರಿಯುತವಾದ ಕೆಲಸ ಕಾರ್ಯಗಳು ನಿಮ್ಮಿಂದ ನೆರೆವೇರುತ್ತಿರುವುದಿರಂದ ಇತರರ ಸಲಹೆ ಪಡೆಯಬೇಡಿ.

ನಿಮಗೆ ಸ್ಪಷ್ಟತೆ ಇದ್ದರೆ ಮಾತ್ರ ನಿಮ್ಮ ನಿರ್ಧಾರಕ್ಕೆ ಬದ್ದರಾಗಿ ಕಾರ್ಯಶೀಲರಾಗಿ ಕೆಲಸ ನಿರ್ವಹಿಸಿ, ಹಿತ ಶತ್ರುಗಳು ಹೆಚ್ಚಾಗಿರುವುದಿರಂದ ನಿಮ್ಮ ಹೆಸರನ್ನು ಹಾಳು ಮಾಡುವುದಕ್ಕೆ ಕಾಯುತ್ತಿದ್ದು, ನಿಮ್ಮನ್ನು ಇಕ್ಕಟ್ಟಿಗೆ ಸಿಲುಕುವ ಪ್ರಯತ್ನ ಹೆಚ್ಚಾಗಿದೆ. ಮೇಷ ರಾಶಿಯವರು ರಾಹು ಕೇತು ಗ್ರಹಗಳಿಗೆ ಶಾಂತಿ ಮಾಡಿಸಬೇಕಾಗಿದೆ. ಇದರಿಂದ ನಿಮ್ಮ ಆಸಕ್ತಿ ಕ್ಷೇತ್ರಗಳಾದ ಸಂಗೀತ, ಕಲೆ, ನಾಟಕ, ಸಿನಿಮಾ ಕ್ಷೇತ್ರಗಳಲ್ಲಿ ಪ್ರಗತಿ ಕಾಣುತ್ತೀರಿ. ನಿಮ್ಮ ಮೇಲೆ ಬಿದ್ದಿರುವ ದುಷ್ಟ ಶಕ್ತಿಗಳಿಂದ ಮುಕ್ತರಾಗುತ್ತೀರಿ. ಪ್ರತಿ ಸೋಮವಾರ ಶಿವನಿಗೆ ಬಿಲ್ಪತ್ರೆ, ತುಳಸಿ ಹಾರ ಅರ್ಪಿಸಿ ಪೂಜೆ ಸಲ್ಲಿಸುವುದಿರಿಂದ ಸ್ವಾಮಿಯ ಅನುಗ್ರಹವಾಗುತ್ತದೆ ಪರಮೇಶ್ವರ ಪ್ರಾರ್ಥನೆಯಿಂದ ಒಳಿತಾಗುತ್ತದೆ.

%d bloggers like this: