ಈ ರಾಶಿಯವರಿಗೆ ಕೋಪ ಹೆಚ್ಚು ಆದರೆ ಅಷ್ಟೇ ಬೇಗ ಶಾಂತರಾಗುತ್ತಾರೆ

2021ರ ತುಲಾ ರಾಶಿಯ ಫಲಾಫಲಗಳು ಹೀಗಿವೆ, ತುಲಾ ರಾಶಿಯ ಜನ್ಮನಕ್ಷತ್ರಗಳಾಗಿ ಚಿತ್ರ ನಕ್ಷತ್ರದ ಎರಡು ಪಾದ, ಸ್ವಾತಿ ನಕ್ಷತ್ರದ ನಾಲ್ಕು ಪಾದ ಮತ್ತು ವಿಶಾಖ ನಕ್ಷತ್ರದ ಮೂರು ಪಾದಗಳು ಕೂಡಿ ತುಲಾ ರಾಶಿಯಾಗಿದೆ. ಈ ರಾಶಿಯವರುವಾಯು ತತ್ವರಾಶಿ ಯಾಗಿದ್ದು ಸಹಾಯ ಮಾಡುವಂತಹ ಉದಾತ್ತ ಗುಣಗಳನ್ನು ಉಳ್ಳವರಾಗಿರುತ್ತಾರೆ. ಇವರ ಅದೃಷ್ಟದ ಬಣ್ಣವಾಗಿ ನೀಲಿ ಮತ್ತು ಬಿಳಿ ಬಣ್ಣದ್ದಾದರೆ ತುಲಾ ರಾಶಿಯ ಅಧಿಪತಿಯಾಗಿ ಶುಕ್ರಗ್ರಹವು ಪ್ರಭಾವ ಬೀರುತ್ತದೆ. ಇವರಿಗೆ ಅದೃಷ್ಟದ ದಿನ ಶುಕ್ರವಾರ ಮತ್ತು ಸೋಮವಾರ ವಾಗಿವೆ, ತುಲಾ ರಾಶಿಯವರಿಗೆ ಅದೃಷ್ಟದ ರತ್ನ ವಜ್ರ. ಅದೃಷ್ಟದ ಸಂಖ್ಯೆ 6, 4,7,9 ಜೊತೆಗೆ ಇನ್ನು ಅದೃಷ್ಟದ ದಿನಾಂಕಗಳು 6,15,24 ಆಗಿದೆ.

ತುಲಾ ರಾಶಿಯವರಿಗೆ ಹೊಂದಾಣಿಕೆ ಆಗುವ ರಾಶಿಗಳು ಮಿಥುನ ರಾಶಿ, ಕುಂಭ ರಾಶಿ ಮತ್ತು ಕಟಕ ರಾಶಿಯಾಗಿದ್ದರೆ ಸಿಂಹ ರಾಶಿ ಶತ್ರು ರಾಶಿಯಾಗಿ ಕಂಡು ಬರುತ್ತದೆ. ಇವರು ಸದಾ ಸಂತೋಷದಿಂದ ಇರಲು ಬಯಸುತ್ತಾರೆ. ತನ್ನ ಸುತ್ತಮುತ್ತಲಿರುವ ಜನರನ್ನು ಇಷ್ಟಪಡುತ್ತಾರೆ ಎಲ್ಲರನ್ನೂ ಮೆಚ್ಚಿಸಲು ಖುಷಿಯಿಂದ ಇರಿಸಲು ಇಷ್ಟಪಡುತ್ತಾರೆ.

ತುಲಾ ರಾಶಿಯವರಿಗೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಹೆಚ್ಚು ಪ್ರಕಾಶಮಾನವಾದ ಭವಿಷ್ಯವಿದೆ. ಇವರಿಗೆ ಎಷ್ಟು ಬೇಗ ಕೋಪ ಬರುತ್ತದೋ ಅಷ್ಟು ಬೇಗ ಶಾಂತ ರಾಗುತ್ತಾರೆ, ವ್ಯಾಪಾರ ವ್ಯವಹಾರಗಳಲ್ಲಿ ಎಲ್ಲಾ ರೀತಿಯ ತಂತ್ರಗಳು ಇವರಿಗೆ ಕರಗತವಾಗಿರುತ್ತದೆ. ಉದ್ಯೋಗಗಳಲ್ಲಿ ಹೆಚ್ಚು ಬದಲಾವಣೆ ಮಾಡುತ್ತಾರೆ ಕಾರಣ ಇವರ ಮನಸ್ಸು ಸದಾ ಚಂಚಲದಿಂದ ಕೂಡಿರುತ್ತದೆ, ಇವರು ಪ್ರಾಪಂಚಿಕ ಸುಖವನ್ನು ಹೆಚ್ಚು ಇಷ್ಟಪಡುತ್ತಾರೆ. ವಿದ್ಯಾವಂತರ ಸಮೂಹದಲ್ಲಿ ಇರಲು ಇಚ್ಛಿಸುತ್ತಾರೆ. ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡಲು ಮುಂದೆ ಬರುತ್ತಾರೆ. ವಿಚಾರವಂತರಾಗಿದ್ದರು ಕೂಡ ಇವರಿಗೆ ಅನಾವಶ್ಯಕ ವಿವಾದಗಳು ಸುತ್ತಿಕೊಳ್ಳುತ್ತದೆ.

ತುಲಾ ರಾಶಿಯವರು ತಾವು ಹಿಡಿದ ಯಾವುದೇ ಕೆಲಸವನ್ನು ಸಂಪೂರ್ಣವಾಗಿ ಮುಗಿಸುವಂತಹ ಹಟವಾದಿಗಳು, 2021ರಲ್ಲಿ ಗುರು ಗ್ರಹವು ಮಕರ ರಾಶಿಯಲ್ಲಿ ಸಂಚರಿಸುವುದರಿಂದ ತುಲಾ ರಾಶಿಯವರಿಗೆ ಗುರು ನಾಲ್ಕನೇ ಸ್ಥಾನ ಅಲಂಕರಿಸುವುದರಿಂದ ಇವರು ಬಂಧುಗಳ ಮೂಲಕ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮನೆಯ ಹಿರಿಯ ಸದಸ್ಯರನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಗುರು ಗ್ರಹ ಕುಂಭರಾಶಿಯ ಮೂಲಕ ಐದನೇ ಮನೆಗೆ ಸಂಚರಿಸಿದಾಗ ನಿಮಗೆ ಅದೃಷ್ಟ ಪ್ರಾಪ್ತಿಯಾಗುತ್ತದೆ. ಕೀರ್ತಿ ಸಂತಾನ, ವ್ಯಾಪಾರ ಅಭಿವೃದ್ಧಿ ಆಗುತ್ತದೆ ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿ ಬರುತ್ತದೆ.

ವಿದೇಶಿ ಪ್ರಯಾಣ ಅವಕಾಶವಿದೆ ಜೊತೆಗೆ ಐಶ್ವರ್ಯ ವೃದ್ಧಿಯಾಗುತ್ತದೆ. ಇನ್ನೂ ನಾಲ್ಕನೇ ಸ್ಥಾನದಲ್ಲಿ ಗುರು ಬಂದಾಗ ಕುಟುಂಬದಲ್ಲಿ ಗೊಂದಲ ತೊಂದರೆಗಳು, ಅನಾವಶ್ಯಕ ಖರ್ಚು ಹೆಚ್ಚಾಗುತ್ತದೆ‌. ಕೆಟ್ಟ ಚಟಗಳಿಗೆ ದಾಸರಾಗುವ ಸಾಧ್ಯತೆ ಇರುತ್ತದೆ. ಏಕಾಏಕಿ ಅನಿರೀಕ್ಷಿತವಾಗಿ ವ್ಯಾಪಾರದಲ್ಲಿ ಏರಿಳಿತ ಕಂಡು ಬರುತ್ತದೆ. ತುಲಾ ರಾಶಿಯವರು ರಾಹು ಕೇತು ಶಾಂತಿ ಮಾಡಿಸಬೇಕಾಗಿದೆ. ಸಮಸ್ಯೆಗಳ ಪರಿಹಾರಕ್ಕಾಗಿ ಹುಣ್ಣಿಮೆಯ ದಿನ ನಾರಾಯಣ ದರ್ಶನವನ್ನು ಪಡೆಯಬೇಕು. ಶಿವನ ಸ್ತೋತ್ರ ಪಠನೆ ಮಾಡುವುದು, ವಿಷ್ಣುಸಹಸ್ರನಾಮ ಒಳ್ಳೆಯದು. ಬೆಳ್ಗಿಗಿನ ಸಮಯದಲ್ಲಿ ಪಕ್ಷಿಗಳಿಗೆ ಆಹಾರವನ್ನು ಹಾಕಿ ಒಳ್ಳೆಯದಾಗುತ್ತದೆ, ಬೆಳ್ಳಿಯ ವಸ್ತುವನ್ನು ನಿಮ್ಮ ಮೇಲ್ಭಾಗದ ಜೇಬಿನಲ್ಲಿ ಇಟ್ಟುಕೊಳ್ಳುವುದುದರಿಂದ ಆದೃಷ್ಠ ಲಭಿಸುತ್ತದೆ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ತಿಳಿಸುತ್ತಾರೆ.

%d bloggers like this: