2021ರ ವರ್ಷಭವಿಷ್ಯದಲ್ಲಿ ಈ ಕುಂಭ ರಾಶಿಯವರು ಬಹಳ ಎಚ್ಚರದಿಂದ ಇರಬೇಕು. ಶನಿಗ್ರಹವು ಅಧಿಪತಿ ಗ್ರಹವಾಗಿದ್ದು ಕಂಟಕಗಳು ಎದುರಾಗಲಿವೆ. 12ನೇ ಮನೆಯಲ್ಲಿ ಗುರು ಇರುವುದರಿಂದ ಅತ್ಯಧಿಕ ಖರ್ಚು, ಎಷ್ಟೇ ಆದಾಯ ಬಂದರು ಕೂಡ ನೀರಿನಂತೆ ನಿಮ್ಮ ಹಣ ಹರಿದು ಹೋಗುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ಸಂಬಂಧಿಗಳಿಗೆ ಅಥವಾ ಇನ್ನಿತರಿಗೆ ಸಾಲ ನೀಡಲು ಹೋಗಬೇಡಿ. ಏಕೆಂದರೆ ಕೊಟ್ಟ ಹಣ ಹಿಂದಿರುಗಿ ಬರುವುದಿಲ್ಲ. ಪರಿಹಾರಕ್ಕಾಗಿ ಪ್ರತಿ ಶನಿವಾರ ಶನಿದೇವರ ದರ್ಶನ ಪಡೆದು ಕಪ್ಪು ಎಳ್ಳನ್ನು ದೇವಸ್ಥಾನಕ್ಕೆ ನೀಡುವುದದರಿಂದ ಒಳಿತಾಗುವುದು.

ಇನ್ನು ಶುಭಫಲಗಳನ್ನು ನೋಡುವುದಾದರೆ ಮಾರ್ಚ್ ಅಂತ್ಯದ ವೇಳೆಗೆ ಈ ಕುಂಭ ರಾಶಿಯವರಿಗೆ ಒಂದಷ್ಟು ಶುಭಫಲಗಳು ದೊರೆಯಲಿದೆ ಎನ್ನಬಹುದು. ಹೌದು ನೀವು ದಕ್ಷಿಣ ದಿಕ್ಕಿನೆಡೆಗೆ ಪಯಣ ಬೆಳೆಸುವುದರಿಂದ ನಿಮಗೆ ಧನಪ್ರಾಪ್ತಿ ಉಂಟಾಗುತ್ತದೆ. ಈ ರಾಶಿಯವರು ನೀಲಮಣಿ ಧಾರಣೆ ಮಾಡಿದರೆ ಅದೃಷ್ಟ ಲಭಿಸುವ ಅವಕಾಶವಿದೆ. ಮನೆ ನಿರ್ಮಾಣ ಮಾಡುವ ಯೋಗವು ಕೂಡ ಇದೆ. ಆದರೆ ಚತುಷ್ಪದಲ್ಲಿರುವ ರಾಹುವಿಂದಾಗಿ ತಂದೆ ತಾಯಿಗಳ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚಾಗಿದೆ.



ಆದ್ದರಿಂದ ಅವರ ಆರೋಗ್ಯದ ಕಡೆ ಗಮನ ಕೊಡಿ. ಇನ್ನು ಹತ್ತನೇಯ ಮನೆಯಲ್ಲಿ ಕೇತು ಸ್ಥಾನ ಅಲಂಕರಿಸುವುದರಿಂದ ಒಂದಷ್ಟು ಶುಭ ಸುದ್ದಿ ಸಿಗಲಿದೆ. ಉಧ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕಂತೆ ಬಡ್ತಿ ದೊರೆತು, ನೀವು ಬಯಸಿದ ಸ್ಥಳಕ್ಕೆ ವರ್ಗಾವಣೆ ಆಗುತ್ತದೆ. ಮತ್ತೆ ಏಪ್ರಿಲ್ ತಿಂಗಳಿನಲ್ಲಿ ನಿಮ್ಮ ರಾಶಿಯಲ್ಲಿ ಜನ್ಮ ಗುರು ಆಗಮನವಾಗಿ ಕೊಂಚ ವ್ಯಾಪಾರ, ವ್ಯವಹರಾಗಳಲ್ಲಿ ಹಣಕಾಸು ವಿಳಂಬವಾಗುವ ಸಾಧ್ಯತೆ ಇರುತ್ತದೆ. ಆದ್ದರಂದ ಕಾಲಭೈರವೇಶ್ವರನ ದರ್ಶನ ಪಡೆದು ಮೂರುಬಗೆಯ ಎಣ್ಣೆಯನ್ನು ಮಿಶ್ರಣ ಮಾಡಿ ದೇವರಿಗೆ ದೀಪ ಹಚ್ಚಿ ಪೂಜಿಸುವುದರಿಂದ ನಿಮಗೆ ಶುಭವಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ತಿಳಿಸಿದ್ದಾರೆ.