ಈ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಅವಕಾಶಗಳ ಸುರಿಮಳೆ, ಸದುಪಯೋಗ ಪಡಿಸಿಕೊಳ್ಳಿ

ದ್ವಾದಶ ರಾಶಿಚಕ್ರಗಳ ಅಂತಿಮ ರಾಶಿಯಾದ ಮೀನ ರಾಶಿಯವರಿಗೆ ಮಾರ್ಚ್16 ರಿಂದ ಮೀನ ಸಂಕ್ರಮಣ ಆಗುತ್ತದೆ ಎಂದು ಹೇಳಬಹುದು. ಇವರಿಗೆ ಮಾರ್ಚ್ ತಿಂಗಳಿನಿಂದ ಮಣ್ಣು ಮುಟ್ಟಿದರು ಕೂಡ ಬಂಗಾರವಾಗುವಂತಹ ಅದೃಷ್ಟ ಇವರದ್ದಾಗಿರುತ್ತದೆ. ಆದರೆ ದ್ವಿತೀಯ ಸ್ಥಾನದಲ್ಲಿ ಕುಜಗ್ರಹ ಇರುವುದರಿಂದ ಅನಾವಶ್ಯಕ ಖರ್ಚು ಆಗುವ ಸಾಧ್ಯತೆ ಇರುತ್ತದೆ. ಜೊತೆಗೆ ಅನಾರೋಗ್ಯದ ಸಮಸ್ಯೆಗಳು ಕಾಡುತ್ತದೆ.ಪರಿಹಾರಕ್ಕಾಗಿ ಭಿಕ್ಷುಕರಿಗೆ ವಸ್ತ್ರ, ಅಥವಾ ನಿಮ್ಮ ಕೈಲಾದಷ್ಟು ಹಣವನ್ನು ದಾನ ಮಾಡಿ. ಸೂರ್ಯಾಸ್ತವಾದ ನಂತರ ದೇವರ ಕೋಣೆಯಲ್ಲಿ ದೀಪ ಹಚ್ಚಿ. ಓಂ ನಮಃ ಶಿವಾಯ ಮಂತ್ರವನ್ನು ಪಠಿಸುವುದರಿಂದ ಪರಮೆಶ್ವರನಿಗೆ ಕೃಪೆಗೆ ಪಾತ್ರರಾಗುತ್ತೀರಿ. ಮೀನ ರಾಶಿಯವರಿಗೆ ಗುರುಬಲ ವಿರುತ್ತದೆ. ಮಾಧ್ಯಮ, ಹೋಟೇಲ್, ದಿನಸಿ, ಶಿಕ್ಷಕರಿಗೆ, ವ್ಯಾಪಾರಸ್ಥರಿಗೆ ಉತ್ತಮವಾದ ದಿನಗಳಾಗಿವೆ.

ಮಹಿಳೆಯರು ಸ್ವಯಂ ಉದ್ಯೋಗ ಮಾಡಲು ಈ ವರ್ಷ ಸೂಕ್ತ ಸಮಯವಾಗಿದೆ. ನೂತನ ವ್ಯಾಪಾರವು ನಿಮ್ಮ ಜೀವನದ ದಿಕ್ಕನ್ನು ಬದಲಾಯಿಸಬಹುದಾಗಿದೆ. ಈ ಮೀನರಾಶಿಯವರಾಗೆ ವರ್ಷಪೂರ್ತಿ ಒಳ್ಳೆಯ ದಿನಗಳಾಗಿದ್ದು, ಹೆಚ್ಚು ಶುಭ ಫಲಗಳನ್ನು ಪಡೆಯುತ್ತಾರೆ. ಇವರಿಗೆ ಹಳದಿ ಮಿಶ್ರಿತ ಬಿಳಿ ಬಣ್ಣಅದೃಷ್ಟ ಯೋಗ ತರುತ್ತದೆ. ನಿಮ್ಮ ಗುರು, ಅಥವಾ ಗುರು ಸಮಾನದವರಿಗೆ ವಸ್ತ್ರದಾನ ಅಥವಾ ಹಣ್ಣುಗಳನ್ನು ಕೊಡುಗೆಯಾಗಿ ನೀಡಿ. ಇದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಸಂಪೂರ್ಣ ಶ್ರೀರಕ್ಷೆ ಇರುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಸಲಾಗಿದೆ.

%d bloggers like this: