ಈ ರಾಶಿಯವರು 2021 ರಲ್ಲಿ ಬಹುದೊಡ್ಡ ಪ್ರಗತಿ ಕಾಣುವಿರಿ

2021ರ ವರ್ಷದಲ್ಲಿ ಧನುರಾಶಿಯವರಿಗೆ ರಾಶಿಚಕ್ರಗಳಲ್ಲಿರುವ ಇತರೆ ರಾಶಿಗಳಿಗಿಂತ ಹೆಚ್ಚು ಶುಭಫಲಗಳನ್ನು ಪಡೆಯುತ್ತಾರೆ. ಈ ಧನಸ್ಸು ರಾಶಿಯು ಮೂಲ ನಕ್ಷತ್ರ, ಮೃಗಶಿರ, ಉತ್ತರಾಷಢ ನಕ್ಷತ್ರದ ಒಂದನೇ ಪಾದವನ್ನು ಒಳಗೊಂಡಿರುವುದಾಗಿದೆ. ಇವರಿಗೆ ಈ ವರ್ಷ ಅದೃಷ್ಟದ ಜೊತೆಗೆ ಹೆಚ್ಚು ಆತ್ಮವಿಶ್ವಾಸ ಹೊಂದಿ ಜೀವನದ ಎಲ್ಲಾ ಸ್ಥರಗಳಲ್ಲಿಯೂ ಯಶಸ್ಸು ಸಾಧಿಸುತ್ತಾರೆ. ಇನ್ನು ಈ ಧನಸ್ಸು ರಾಶಿಯವರ ವಿಧ್ಯಾರ್ಥಿಗಳಿಗೆ ವಿಧ್ಯಾಭ್ಯಾಸದಲ್ಲಿ ಅಭೂತಪೂರ್ವ ಪ್ರಗತಿ ಕಾಣುತ್ತಾರೆ. ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಆಗುವ ಸಾಧ್ಯತೆ ಇರುವುದರಿಂದ ನಿಮ್ಮ ಚಾಣಾಕ್ಷತನ, ಬುದ್ದಿವಂತಿಕೆಯನ್ನು ಬಳಸಬೇಕಾಗುತ್ತದೆ. ಸಾರ್ವಜನಿಕ ಕ್ಷೇತ್ರಗಳಲ್ಲಿ ಉನ್ನತ ಹುದ್ದೆ ಅಥವಾ ಸರ್ಕಾರಿ ಉದ್ಯೋಗ ಪಡೆಯುವ ಅವಕಾಶವಿದೆ. ಕೆಲವರಿಗೆ ನಿಮ್ಮ ಸ್ನೇಹಿತರೊಂದಿಗೆ ಮಾಡುತ್ತಿರುವ ಪಾಲುದಾರಿಕೆ ವ್ಯವಹಾರದಿಂದ ಮೋಸಹೋಗುವ ಸಾಧ್ಯತೆಯಿದೆ.

ಆದ್ದರಿಂದ ಕೊಂಚ ಜಾಗೃತಿಯಿಂದ ಇರಬೇಕಾಗುತ್ತದೆ. ಇನ್ನು ದಾಂಪತ್ಯ ಜೀವನದಲ್ಲಿ ಸುಖ,ಸಂತೋಷ ನೆಮ್ಮದಿ ದೊರೆಯುತ್ತದೆ. ಆರ್ಥಿಕ ವಿಚಾರದಲ್ಲಿ ಅನಿರೀಕ್ಷಿತವಾಗಿ ಧನಲಾಭ ಆಗುತ್ತದೆ. ಇನ್ನು ನೀವು ಮುಟ್ಟಿದ್ದೆಲ್ಲಾ ಬಂಗಾರವಾಗುವ ಸಮಯ ಈ ವರ್ಷವಾಗಲಿದ್ದು, ವಾಹನ ಖರೀದಿಯ ಯೋಗವಿದೆ. ಒಟ್ಟಾರೆ ಈ ಧನಸ್ಸು ರಾಶಿಯವರಿಗೆ ವಿಶೇಷ ಯೋಗವಿದೆ. ಸಂಪೂರ್ಣವಾಗಿ ಈ ವರ್ಷ ಶುಭಕರವಾಗಿರುತ್ತದೆ. ಇವರಿಗೆ ಕನಕಪುಷ್ಯಾರಾಗ, ಮಾಣಿಕ್ಯ ಶುಭ ರತ್ನಗಳಾಗಿದ್ದು, ಕೆಂಪು ಮತ್ತು ಹಳದಿ ಶುಭತರುವ ಬಣ್ಣಗಳಾಗಿವೆ. ಇವರಿಗೆ ಅದೃಷ್ಟ ತರುವ ಶುಭ ಸಂಖ್ಯೆಗಳು 1,2,5,9 ಸಂಖ್ಯೆಗಳಾಗಿದ್ದು ಧನಸ್ಸು ರಾಶಿಯವರ ಕೆಲವು ಸಣ್ಣ ಪುಟ್ಟ ಸಮಸ್ಯೆಗಳ ನಿವಾರಣೆಗಾಗಿ ಶ್ರೀವಿಷ್ಣು ಅಷ್ಞೋತ್ತರ ಮಂತ್ರ ಪಠನೆ ಮಾಡುವುದರಿಂದ ಶುಭವಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ತಿಳಿಸುತ್ತಾರೆ.

%d bloggers like this: