ಈ ರಾಶಿಯವರು ಬಲು ಬಲಶಾಲಿಗಳು, ಯಾವುದೇ ವಿಷಯದಲ್ಲೂ ಸೋಲುವುದಿಲ್ಲ

ಈ ವೃಶ್ಚಿಕ ರಾಶಿಯವರ ಸ್ವಭಾವ ಹೆಚ್ಚು ಜನರಿಗೆ ಇಷ್ಟವಾಗುವುದಿಲ್ಲ. ಇವರ ನಡವಳಿಕೆ, ಮನಸ್ಥಿತಿ ಮತ್ತು ಮಾತಿನ ವೈಖರಿ ಕೆಲವರಿಗೆ ಕಿರಿಕಿರಿ ಉಂಟುಮಾಡುತ್ತದೆ. ಹಾಗಾದರೆ ಈ ವೃಶ್ಚಿಕ ರಾಶಿಯವರ ಸ್ವಭಾವ ಏನಿರಬಹುದು ಏಕೆ ಇತರರಿಗೆ ಕಿರಿ ಕಿರಿ ಆಗುತ್ತದೆ ಎಂದು ನೋಡುವುದಾದರೆ. ಇವರು ಜಲತತ್ವ ರಾಶಿಯಾಗಿದ್ದು ಇವರ ಆಧಿಪತ್ಯ ಗುರು ಮಂಗಳ ಗ್ರಹವಾಗಿದೆ. ಇವರ ವ್ಯಕ್ತಿತ್ವ ಸುಂದರವಾಗಿದ್ದರು ಸಹ ಕೆಲವೊಂದು ನಡವಳಿಕೆಗಳು ಮಾತ್ರ ವಿಭಿನ್ನವಾಗಿರುತ್ತವೆ. ಇವರು ಯಾವುದೇ ಕೆಲಸ ಕಾರ್ಯಗಳನ್ನು ಹಠದಿಂದ ಮಾಡುತ್ತಾರೆ. ಜಯಿಸಲೇಬೇಕು ಎಂಬ ಮನೋಭಾವ ಇವರದ್ದಾಗಿರುತ್ತದೆ‌. ಇವರು ಸಾಹಸಿಮಯ ವ್ಯಕ್ತಿತ್ವ ಹೊಂದಿರುತ್ತಾರೆ.

ಇವರು ಯಾರ ಹಸ್ತಕ್ಷೇಪಕ್ಕೂ ಬಗ್ಗುವುದಿಲ್ಲ ತಮಗೆ ಇಷ್ಟ ಬಂದ ಹಾಗೆ ತಮಗೆ ಯಾವುದು ಸರಿ ಎನಿಸುತ್ತದೆಯೋ ಅದನ್ನು ಮಾಡುತ್ತಾರೆ. ವೃಶ್ಚಿಕ ರಾಶಿಯವರು ಹೆಚ್ಚು ಪರಿಶ್ರಮ ಪಡುವಂತಹವರು, ಮಾಡುವ ಕೆಲಸದಲ್ಲಿ ಬದ್ದತೆ ಜೊತೆಗೆ ಯಾವುದೇ ಕೆಲಸವನ್ನು ವೇಗವಾಗಿ ಮಾಡಬಲ್ಲ ವ್ಯಕ್ತಿತ್ವ. ಇವರ ಮಾತು ಕಠೋರವಾಗಿದ್ದರೂ ಸಹ ಮನಸ್ಸಲ್ಲಿ ದ್ವೇಷ ಇರುವುದಿಲ್ಲ ನೇರ ನುಡಿ ವ್ಯಕ್ತಿತ್ವ ಮೋಸ ಮಾಡುವ ಸಲುವಾಗಿ ನಾಜೂಕತೆಯ ಮಾತು ಇವರದ್ದಾಗಿರುವುದಿಲ್ಲ. ಹಾಗೆ ಇವರು ಯಾರನ್ನು ಸಹ ಬೇಗ ನಂಬುವುದಿಲ್ಲ, ಅದು ಸ್ನೇಹಿತರಾಗಲಿ ಬಂಧುಗಳಾಗಲಿ ಅನುಮಾನದಿಂದ ನೋಡುತ್ತಾರೆ.

ಅಷ್ಟರ ಮಟ್ಟಿಗೆ ಸದಾ ಜಾಗೃತಿಯಿಂದ ಎಚ್ಚರ ವಹಿಸುತ್ತಾರೆ. ಇನ್ನು ಧಾರ್ಮಿಕ ವಿಚಾರಗಳಲ್ಲಿ ಅಪಾರ ಭಕ್ತಿ ನಂಬಿಕೆ ವುಳ್ಳವರಾಗಿರುತ್ತಾರೆ. ಇವರು ಹೆಚ್ಚು ಏಕಾಂತವಾಗಿ ಇರಲು ಬಯಸುತ್ತಾರೆ ಇವರು ಒಳ್ಳೆಯ ಸಂಗಾತಿಯಾಗಿ ಇರುತ್ತಾರೆ. ಪ್ರೇಮ, ಪ್ರೀತಿಯ ವಿಚಾರಗಳಲ್ಲಿ ಭಾವನಾತ್ಮಕ ಸಂಬಂಧಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ. ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದರಲ್ಲಿ ಇವರು ನಿಸ್ಸೀಮರು ಆದ್ದರಿಂದ ಇವರು ಕೆಲವರಿಗೆ ಇಷ್ಟವಾದರೆ ಇವರ ನೇರ ನುಡಿ, ಇವರ ಜ್ಞಾನ ಬುದ್ದಿವಂತಿಕೆ, ಇತರರನ್ನು ನೋಡಿ ಹೊಟ್ಟೆಕಿಚ್ಚು ಪಡುವಂತಹ ವ್ಯಕ್ತಿತ್ವ ಕೆಲವರಿಗೆ ಇಷ್ಟವಾಗುವುದಿಲ್ಲ.

%d bloggers like this: