ಈ ರಾಶಿಯವರು ಎಲ್ಲರಿಗೂ ಮಾದರಿಯಾಗಿ ಬದುಕುವ ವ್ಯಕ್ತಿಗಳು, ಆದರೆ

ಸಿಂಹ ರಾಶಿಯವರ ನಿಗೂಢ ವಿಚಾರಗಳು ಯಾರಿಗೂ ತಿಳಿಯುವುದಿಲ್ಲ, ಇವರು ಎಲ್ಲರಿಗೂ ಮಾದರಿಯಾಗಿ ಬದುಕುವ ವ್ಯಕ್ತಿಗಳಾಗಿದ್ದರು ಕೂಡ ಅನೇಕ ಸಂಕಷ್ಠ, ಸಮಸ್ಯೆಗಳು ಇವರ ಸ್ವಂತದವರಿಂದಲೇ ಬರುತ್ತವೆ ಎಂಬುದು ವಿಷಾದಕರ ಸಂಗತಿಯಾಗಿದೆ. ಸಿಂಹ ರಾಶಿಯವರು ಸಾಮಾನ್ಯವಾಗಿ ತಮ್ಮ ವೈಯಕ್ತಿಕ ವಿಚಾರಗಳನ್ನು, ತಮ್ಮ ಕಷ್ಟಗಳನ್ನು ಇತರರೊಂದಿಗೆ ಮುಕ್ತವಾಗಿ ಹಂಚಿಕೊಳ್ಹುವುದಿಲ್ಲ. ಸಿಂಹ ರಾಶಿಯವರಿಗೆ ಶತ್ರುಗಳ ಕಾಟ ಹೆಚ್ಚಾಗಲು ಕಾರಣವೇನು? ಇವರಿಗೆ ತನ್ನಿಂದ ಸಹಾಯ ಪಡೆದವರೇ ಇವರಿಗೆ ದ್ರೋಹ ಮಾಡುತ್ತಾರೆ. ಇವರ ಜೊತೆ ಚೆನ್ನಾಗಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕುತ್ತಾರೆ. ಇವರಿಂದ ಸಹಾಯ ಪಡೆದು ಇವರಿಗೆ ಮೋಸ ಮಾಡುತ್ತಾರೆ. ಇವರಿಗೆ ಸದಾ ಕಾಡುವ ಕೊರಗು ಅಂದರೆ ತಾನು ಯಾರಿಗೂ ಮೋಸ ಮಾಡದಿದ್ದರೂ ಸಹ ತಮಗೆ ಸಮಸ್ಯೆ ತಂದೊಡ್ಡುತ್ತಾರೆ ಎಂಬ ನೋವು ಇವರನ್ನು ಕಾಡುತ್ತದೆ.

ಇಂತಹ ಹಿತಶತ್ರುಗಳ ಭಾದೆ ಕಾಡುವುದಕ್ಕೆ ಪ್ರಮುಖ ಕಾರಣ, ಸಿಂಹರಾಶಿಯವರ ಜಾತಕದಲ್ಲಿ ಷಷ್ಟಾದಿಪತಿಯೇ ಶನಿ ಆಗಿರುವುದರಿಂದ ಶತ್ರುಪೀಡೆ ಸಂಕಷ್ಟ ಎದುರಾಗುತ್ತದೆ. ಶನಿಗ್ರಹವು ಮತ್ತು ಶುಕ್ರಗ್ರಹವು ಪರಸ್ಪರ ವೈರುತ್ವ ಹೊಂದಿರುವುದರಿಂದ ನಿಮಗೆ ನಿಮ್ಮ ಸ್ವಂತ ಸಹೋದರ, ಸಹೋದರಿ ಅವರಿಂದಲೇ ಮೋಸ, ದ್ರೋಹ ಆಗಬಹುದು. ಶನಿ ಗ್ರಹವು ಪ್ರತಿ ಮನೆಯಲ್ಲಿ ಬದಲಾವಣೆ ಆದಾಗಲೆಲ್ಲಾ ಸಿಂಹ ರಾಶಿಯವರ ಗಂಭೀರ ಪರಿಣಾಮ ಉಂಟುಮಾಡುತ್ತಾನೆ. ಶನಿ ಏನಾದರು ತುಲಾ ರಾಶಿಯಲ್ಲಿ ಸ್ದಾನ ಅಲಂಕರಿಸಿದರೆ ನಿಮಗೆ ಸಂಕಷ್ಟಗಳು ಕಟ್ಟಿಟ್ಟ ಬುತ್ತಿ ಎನ್ನಬಹುದು. ಅಥವಾ ವೃಶ್ಚಿಕ ರಾಶಿಮನೆಯಲ್ಲಿ ಶನಿ ಪ್ರವೇಶ ಮಾಡಿದರೆ ನಿಮ್ಮ ತಾಯಿಯು ಸಹ ನಿಮ್ಮ ಬೆಂಬಲಕ್ಕೆ ಬರುವುದಿಲ್ಲ.

ಮೀನ ರಾಶಿಯಲ್ಲಿ ಶನಿಗ್ರಹ ಸ್ದಾನವೊಂದಿದರೆ ನಿಮ್ಮ ಆರೋಗ್ಯವೇ ನಿಮಗೆ ಪರಮಶತ್ರುವಾಗಿ ಕಾಡುತ್ತದೆ. ಅನಾರೋಗ್ಯ ಸಮಸ್ಯೆ ನಿಮಗೆ ನಿರಂತರವಾಗಿ ಕಾಡುತ್ತದೆ. ಕುಂಭರಾಶಿಗೆ ಶನಿಯು ಸಂಚರಿಸಿದರೆ ಸಿಂಹ ರಾಶಿಯವರಿಗೆ ಬಾಳ ಸಂಗಾತಿಯೇ ಶತ್ರುವಾಗಿ ಕಾಡುತ್ತಾಳೆ, ವಿಚ್ಛೇದನಕ್ಕೆ ಅರ್ಜಿಹಾಕಿ ಕೋರ್ಟು ಕಛೇರಿ ಅಲೆಯುವ ಹಾಗೆ ಸಂಧರ್ಭ ಎದುರಾಗುತ್ತದೆ. ಒಟ್ಟಾರೆಯಾಗಿ ಸಿಂಹ ರಾಶಿಯವರಿಗೆ ತನ್ನ ಸ್ವಂತದವರಿಂದಲೇ ಅಣ್ಣ, ತಮ್ಮ, ತಂಗಿ, ಅಕ್ಕ ರಕ್ತ ಸಂಬಂಧಿಗಳಿಂದ ದ್ರೋಹ, ವಂಚನೆ ಮೋಸ ತಪ್ಪಿದ್ದಲ್ಲ ಹಾಗಾಗಿ ಸಿಂಹ ರಾಶಿಯವರು ಕಡ್ಡಾಯವಾಗಿ ತಪ್ಪದೇ ಅಮವಾಸ್ಯೆ ಹಾಗೂ ಹುಣ್ಣಿಮೆಯ ದಿನಗಳಲ್ಲಿ ನೇಮ ನಿಯಮಗಳನ್ನು ಆಚರಿಸಿ ಶನಿಶಾಂತಿ ಮತ್ತು ನವಗ್ರಹ ಶಾಂತಿ ಮಾಡಿಸಬೇಕು. ಇದರಿಂದ ನಿಮ್ಮ ದೋಷ ಸಮಸ್ಯೆಗಳಿಂದ ಮುಕ್ತವಾಗಬಹುದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರ ತಿಳಿಸುತ್ತಾರೆ.

%d bloggers like this: