ಈ ಏಳು ರಾಶಿಯ ವ್ಯಕ್ತಿಗಳ ಪ್ರೀತಿ ನಿಮಗೆ ಸಿಕ್ಕಿದ್ದೇ ಆದಲ್ಲಿ ನಿಮಗಿಂತ ಅದೃಷ್ಟವಂತರು ಮತ್ತ್ಯಾರು ಇಲ್ಲ. ಹೌದು ಪ್ರೀತಿ ಅಂದರೆ ಕೇವಲ ನೋಟದಲ್ಲಿ ಸೆಳೆಯುವಂತಹ ಸೌಂದರ್ಯವಲ್ಲ. ಅದು ಕೇವಲ ಬಾಹ್ಯ ಸೌಂದರ್ಯದ ಆಕರ್ಷಣೆ ಮಾತ್ರ ಆಗಿರುತ್ತದೆ. ಆದರೆ ನಿಜವಾಗಿ ಪ್ರೀತಿ ಎಂಬುದಕ್ಕೆ ವ್ಯಾಖ್ಯಾನ ಅಥವಾ ದೃಷ್ಟಿಕೋನದಲ್ಲಿ ಹೇಳುವುದಾದರೆ ಅದು ನಂಬಿಕೆ, ವಿಶ್ವಾಸ, ಕಾಳಜಿ ಪರಸ್ಪರ ಒಬ್ಬರ ಮೇಲೆ ಇನ್ನೊಬ್ಬರು ತೋರುವ ಅನುರಾಗದ ಸಂಗಮವಾಗಿರುತ್ತದೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಈ ಪ್ರೀತಿ ಎಂಬುದು ಬೇಕೇ ಬೇಕಾಗಿರುತ್ತದೆ. ಅದು ಯಾವ ರೂಪದಲ್ಲಿ ಆದರೂ ಆಗಿರಬಹುದು. ಗಂಡ ಹೆಂಡತಿ, ತಂದೆ ಮಕ್ಕಳು, ಅಜ್ಜ ಅಜ್ಜಿ ಮೊಮ್ಮಕಳು, ಬಂಧುಗಳು ಇವರುಗಳ ಪ್ರೀತಿ ಸೇರಿದಂತೆ ಹೆಚ್ಚು ಪ್ರೀತಿ ಅಂದಾಕ್ಷಣ ತಕ್ಷಣ ಕಣ್ಮುಂದೆ ಬರುವ ಹುಡುಗ ಹುಡುಗಿರ ಪ್ರೀತಿ ಆಗಿರಬಹುದು.

ಆದರೆ ಈ ಪ್ರೀತಿ ಎಂಬುದು ಎಲ್ಲರಿಗೂ ಸಿಗುತ್ತದೆಯೇ. ಇಲ್ಲ ಅದನ್ನ ಕಂಡುಕೊಳ್ಳುವಲ್ಲಿ ಅವರು ಎಡವಿರುತ್ತಾರೆಯೇ ಎಂಬುದನ್ನ ಮಾತ್ರ ಅವರವರೇ ಅವಲೋಕಿಸಿಕೊಳ್ಳಬೇಕು. ಇನ್ನು ಮನುಷ್ಯರ ಜೀವನದ ಮೇಲೆ ಈ ಜ್ಯೋತಿಷ್ಯ ಶಾಸ್ತ್ರ ಎಂಬುದು ಪ್ರಭಾವ ಬೀರುತ್ತದೆ. ಗ್ರಹಗತಿಗಳ ಆಧಾರದ ಮೇಲೆಯೂ ಕೂಡ ಆಯಾ ವ್ಯಕ್ತಿಗಳ ಜೀವನದಲ್ಲಿ ಸಕರಾತ್ಮಕ-ನಕರಾತ್ಮಕ ಪರಿಣಾಮಗಳು ಎದುರಾಗುತ್ತವೆ ಎಂದು ಹೇಳುತ್ತಾರೆ. ಅಂತೆಯೇ ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ದ್ವಾದಶ ರಾಶಿ ಚಕ್ರಗಳಲ್ಲಿ ಈ ಏಳು ರಾಶಿಯ ವ್ಯಕ್ತಿಗಳು ಮಾತ್ರ ಜೀವನದಲ್ಲಿ ವಿಶೇಷವಾದ ಪ್ರೀತಿಯನ್ನ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.
ಹಾಗಾದರೆ ಆ ಏಳು ಯಾವ ರಾಶಿಯ ವ್ಯಕ್ತಿಗಳು ಎಂದು ತಿಳಿಯುವುದಾದರೆ ಮೊದಲಿಗೆ ಭಾವನಾತ್ಮಕ ರಾಶಿ ಅಂತಾನೇ ಕರೆಯುವ ಮೀನ ರಾಶಿಯ ವ್ಯಕ್ತಿಗಳು ತುಂಬಾ ಭಾವುಕತೆಯ ವ್ಯಕ್ತಿಗಳಾಗಿದ್ದು, ತಮ್ಮ ಪ್ರೀತಿ ಪಾತ್ರರನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಾರಂತೆ. ಅವರ ಎಲ್ಲಾ ಕಷ್ಟ ಸುಖಗಳಲ್ಲಿ ಸಮವಾಗಿ ಸ್ಪಂದಿಸಿ ತನ್ನ ಸಂಗಾತಿಯ ಬೆನ್ನೆಲುಬಾಗಿ ನಿಲ್ಲುತ್ತಾರಂತೆ. ಈ ರಾಶಿಯ ವ್ಯಕ್ತಿಗಳು ತಮ್ಮ ಪ್ರೀತಿಯಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಇರುತ್ತಾರಂತೆ.

ಕನ್ಯಾ ರಾಶಿಯ ವ್ಯಕ್ತಿಗಳು ತಮ್ಮ ಪ್ರೇಯಸಿ ಬಯಸುವ ವಿಚಾರಗಳಿಗೆ ಬದ್ದತೆ ತೋರುತ್ತಾರಂತೆ. ಅವರ ಆಸೆ ಆಕಾಂಕ್ಷೆಗಳಿಗೆ ಮೊದಲು ಪ್ರಾಶಸ್ತ್ಯ ನೀಡಿ ಅವರ ಖುಷಿಯಲ್ಲಿ ತಮ್ಮ ಸಂತೋಷವನ್ನು ಕಾಣುತ್ತಾರೆ. ಇವರು ತಮ್ಮ ವ್ಯಕ್ತಿತ್ವಕ್ಕೆ ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳಿಗೆ ಆಕರ್ಷಿತರಾಗುತ್ತಾರಂತೆ.
ಕುಂಭ ರಾಶಿಯ ವ್ಯಕ್ತಿಗಳಿಗೆ ತಮ್ಮ ಇಷ್ಟದ ರೀತಿಯ ತಾವಂದುಕೊಂಡ ಹಾಗೆಯೇ ಇರುವ ವ್ಯಕ್ತಿಯನ್ನ ಇಷ್ಟಪಡುತ್ತಾರೆ. ಇವರು ತಮ್ಮ ಪ್ರೇಯಸಿ ಬಗ್ಗೆ ತುಂಬಾ ಪೊಸೆಸಿವ್ ಆಗಿರುತ್ತಾರೆ. ಇವರ ಕಾಳಜಿ, ಪ್ರೀತಿ ಪ್ರೇಯಸಿಗೆ ತುಂಬಾ ಇಷ್ಟವಾಗುತ್ತದೆ. ಆದರೆ ಅತಿಯಾದರೆ ಸಹಿಸಲಾಗದು ಎಂಬುದನ್ನ ಮನಗಾಣಬೇಕಾಗಿರುತ್ತದೆ. ತಮ್ಮ ಪ್ರೀತಿ ಪಾತ್ರರ ಬಗ್ಗೆ ಇನ್ನೊಬ್ಬರ ಏನೇ ನಕರಾತ್ಮಕವಾಗಿ ಹೇಳಿದರು ಕೂಡ ಅವರು ತಕ್ಷಣ ನಂಬುವುದಿಲ್ಲ. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂಬಂತಹ ವ್ಯಕ್ತಿತ್ವವನ್ನು ಹೊಂದಿರುತ್ತಾರೆ.

ಧನು ರಾಶಿಯ ವ್ಯಕ್ತಿಗಳು ತಮ್ಮ ಸಂಗಾತಿ ಆಗಿ ಬರುವ ವ್ಯಕ್ತಿಗಳ ಮೇಲೆ ಅಪಾರ ನಂಬಿಕೆ ಇಟ್ಟಿರುತ್ತಾರೆ. ಇವರಲ್ಲಿ ಮೂಢನಂಬಿಕೆ ಕಾಣಲು ಸಾಧ್ಯವಿಲ್ಲ. ವೈಚಾರಿಕ ಪ್ರಜ್ಞೆಯನ್ನ ಕಾಣಬಹುದಾಗಿರುತ್ತದೆ. ಇವರ ಪ್ರೀತಿಯಲ್ಲಿ ಕಲ್ಮಶ ಇರದು. ತುಂಬಾ ಪರಿಶುದ್ದವಾದ ಪ್ರೀತಿಯೊಂದಿಗೆ ತಮ್ಮ ಸಂಗಾತಿಯೊಂದಿಗೆ ಜೀವನ ನಡೆಸುತ್ತಾರೆ. ಇವರಿಬ್ಬರಲ್ಲಿ ಎಷ್ಟೇ ಭಿನ್ನಾಭಿಪ್ರಾಯ ಬಂದು ಕೂಡ ಅದನ್ನ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಾರೆ.
ವೃಶ್ಚಿಕ ರಾಶಿಯ ವ್ಯಕ್ತಿಗಳು ಪ್ರೀತಿ ಪ್ರೇಮ ವಿಚಾರದಲ್ಲಿ ತುಂಬಾ ಹರ ಸಾಹಸ ಪಡುತ್ತಾರೆ. ತಮ್ಮ ಪ್ರೀತಿ ಸಂಕಷ್ಟದಲ್ಲಿ ಸಿಲುಕಿಕೊಂಡಾಗ ಸಾಧ್ಯವಾದಷ್ಟು ಶತಾಯಗತಾಯ ತಮ್ಮ ಪ್ರೀತಿ ಉಳಿಸಿಕೊಳ್ಳಲು ಹೋರಾಡುತ್ತಾರೆ. ಇವರ ಧೈರ್ಯಕ್ಕೆ ಮಾತ್ರ ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಇವರು ತಮ್ಮ ಪ್ರೀತಿ ಪಾತ್ರರಲ್ಲಿ ಅನ್ಯೂನ್ಯತೆಯಾಗಿರಲು ಇಷ್ಟ ಪಡುತ್ತಾರೆ. ಅನಗತ್ಯ ಕೋಪ, ಜಗಳಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ತಾಳ್ಮೆ ಸಹನೆ ಇವರಲ್ಲಿ ಹೆಚ್ಚು ಕಾಣಬಹುದು.

ವೃಷಭ ರಾಶಿಯ ವ್ಯಕ್ತಿಗಳಲ್ಲಿ ಇವರು ಒಮ್ಮೆ ಯಾವ ವ್ಯಕ್ತಿಯನ್ನ ಇಷ್ಟ ಪಡುತ್ತಾರೋ ಅವರನ್ನ ಎಂದಿಗೂ ಕೂಡ ಆಯ್ಕೆಯಾಗಿ ಪರಿಗಣಿಸುವುದಿಲ್ಲ. ಅವರನ್ನೇ ಮದುವೆ ಆಗುತ್ತೇನೆ ಎಂಬ ವಿಶ್ವಾಸದಲ್ಲಿ ಪ್ರೀತಿ ಮಾಡುತ್ತಾರೆ. ಧೃಢನಿರ್ಧಾರ ಮಾಡಿಯೇ ಇವರು ಪ್ರೀತಿಗೆ ಇಳಿಯುತ್ತಾರೆ. ಒಂದು ವೇಳೆ ತಮ್ಮ ಪ್ರೀತಿಯಲ್ಲಿ ಅಡ್ಡಿ ಆತಂಕಗಳು ಮನಸ್ತಾಪ ಮೂಡಿದಾಗ ಬಹಳ ಚಾಕಚಕ್ಯತೆ ಕೌಶಲ್ಯದಿಂದ ಭಾವನಾತ್ಮಕವಾಗಿ ತಮ್ಮ ಪ್ರೀತಿಯನ್ನ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ.

ಕರ್ಕ ರಾಶಿಯ ವ್ಯಕ್ತಿಗಳಲ್ಲಿ ಬಹಳ ವಿಶೇಷವಾದ ಗುಣವನ್ನು ಕಾಣಬಹುದಾಗಿರುತ್ತದೆ. ಇವರು ತುಂಬ ಭಾವನೆಯನ್ನ ಹೊಂದಿರುತ್ತಾರೆ. ತುಂಬಾ ಸೂಕ್ಷ್ಮ ಪ್ರಜ್ಞೆ ಹೊಂದಿರುವ ಇವರು ತಮ್ಮ ಸಂಗಾತಿಯ ವಿಚಾರದಲ್ಲಿ ಅತ್ಯಂತ ಜಾಗರೂಕತೆಯಿಂದ ವರ್ತಿಸುತ್ತಾರೆ. ತನ್ನ ಪ್ರಿಯಕರ ಅಥವಾ ಪ್ರಿಯತಮೆಯೊಂದಿಗೆ ಹೆಚ್ಚು ಗೌರವಯುತವಾಗಿ ಇರಲು ಇಷ್ಟ ಪಡುತ್ತಾರೆ. ತನ್ನ ಸಂಗಾತಿಯ ಬಗ್ಗೆ ಕಾಳಜಿಯನ್ನ ಹೊಂದಿದ್ದು, ಅವರ ಹಿತವನ್ನೆ ಬಯಸುತ್ತಾರೆ. ಅವರಿಗೆ ನೋವಾದರೆ ಇವರು ತುಂಬಾ ನೊಂದುಕೊಳ್ಳುತ್ತಾರೆ.