ಈ ರಾಶಿಯವರು ತುಂಬಾ ಧೈರ್ಯವಂತರು ಹಾಗೂ ಎಂತಹ ಪರಿಸ್ಥಿತಿ ಬಂದರೂ ಎದುರಿಸುತ್ತಾರೆ

ಈ ಸಮಯ ಎಂಬುದು ಪ್ರತಿಯೊಬ್ಬರಿಗೂ ಕೂಡ ಉತ್ತಮ ಪಾಠ ಕಲಿಸುತ್ತದೆ. ಯಾರು ಯಾವುದನ್ನ ನಂಬುವುದಿಲ್ಲ ಎಂದು ಮೊಂಡು ವಾದ ಮಾಡುತ್ತಿರುತ್ತಾರೋ, ಅವರೇ ಮುಂದೊಮ್ಮೆ ತಾವು ವಿರೋಧಿಸುತ್ತಿದ್ದ ಆಚಾರ ವಿಚಾರಗಳಿಗೆ ಮನಸ್ಪೂರ್ತಿಯಾಗಿ ತೊಡಗಿಸಿಕೊಳ್ಳುತ್ತಾರೆ. ಅಂತಹದ್ದೇ ರೀತಿಯಾಗಿ ಒಂದಷ್ಟು ಮಂದಿ ಈ ಶಾಸ್ತ್ರ ಸಂಪ್ರದಾಯ ದೇವರು, ಜಾತಕ, ಜ್ಯೋತಿಷ್ಯಗಳನ್ನು ವಿರೋಧಿಸುತ್ತಿರುತ್ತಾರೆ. ಆದರೆ ತಮಗೆ ಕೆಟ್ಟ ಕಾಲ ಬಂದಾಗ ಸ್ವ ಇಚ್ಚೆಯಿಂದಾಗಿಯೇ ದೇವರನ್ನು ನಂಬಲು ಆರಂಭಿಸುತ್ತಾರೆ. ಕೆಲವು ನಂಬಿಕೆಗಳು ಅದು ಅವರವರ ವೈಯಕ್ತಿಕ ಅಭಿಪ್ರಾಯ ವಾಗಿರುತ್ತದೆ. ಇನ್ನು ಈ ಮನುಷ್ಯ ಜೀವನವು ಸಹ ಜಾತಕ ರಾಶಿಗಳ ಪ್ರಭಾವದಿಂದ ಒಳಿತು ಕೆಡುಕುಗಳು ಸಂಭವಿಸುತ್ತವೆ. ನದ್ವಾದಶ ರಾಶಿಗಳು ಜನರ ಭವಿಷ್ಯವನ್ನು ತಿಳಿಸುತ್ತದೆ.

ಜೊತೆಗೆ ಆಯಾ ರಾಶಿಯ ವ್ಯಕ್ತಿಗಳ ವ್ಯಕ್ತಿತ್ವವನ್ನು ಕೂಡ ಸೂಚಿಸುತ್ತದೆ. ಇದೀಗ ಅಂತಹದ್ದೇ ವಿಶೇಷ ಐದು ರಾಶಿಗಳ ಬಗ್ಗೆ ತಿಳಿಯೋಣ. ಈ ಐದು ರಾಶಿಯ ವ್ಯಕ್ತಿಗಳು ಅತ್ಯಂತ ಧೈರ್ಯವಂತರು‌. ಎಂತಹದ್ದೇ ಸಂಕಷ್ಟದ ಕಾಲ ಎದುರಾದರು ಕೂಡ ಅದರಿಂದ ಧೃತಿಗೆಡುವುದಿಲ್ಲ. ಧೈರ್ಯಂ ಸರ್ವತ್ರ ಸಾಧನಂ ಎಂಬ ವಾಕ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೆ. ಇಂತಹ ಧೈರ್ಯ ಆತ್ಮ ವಿಶ್ವಾಸ ಮನೋಬಲ ಹೊಂದಿರುವ ಆ ಐದು ರಾಶಿಗಳು ಅಂದರೆ ಮಿಥುನ, ಸಿಂಹ, ವೃಶ್ಚಿಕ, ಧನು ಮತ್ತು ಕುಂಭ ರಾಶಿ. ಮೊದಲನೇಯದಾಗಿ ಸಿಂಹ ರಾಶಿಯ ವ್ಯಕ್ತಗಳ ವ್ಯಕ್ತತ್ವವನ್ನು ತಿಳಿಯುವುದಾದರೆ ಇವರು ಚಂಚಲ ಮನಸ್ಸುಳ್ಳವರಾಗಿರುತ್ತಾರೆ.

ಬೇಕು ಅಥಾವ ಬೇಡ ಎಂಬ ಎರಡರ ನಿರ್ಧಾರಕ್ಕೆ ಸಾಕಷ್ಟು ಸಮಯ ವ್ಯಯಿಸುತ್ತಾರೆ. ಧೀರ್ಘ ಸಮಯ ತೆಗೆದುಕೊಂಡು ತೆಗೆದುಕೊಂಡು ಒಂದು ನಿರ್ದಿಷ್ಟ ನಿರ್ಧಾರ ಮಾಡಿದ ಮೇಲೆ ತದ ನಂತರ ಆ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಅದು ಎಷ್ಟೇ ಕಷ್ಟ ಆದರೂ ಕೂಡ ಅದನ್ನ ಎದುರಿಸಿ ಜಯ ಸಾಧಿಸುತ್ತಾರೆ. ಎರಡನೇಯದಾಗಿ ಸಿಂಹ ರಾಶಿಯವರು ಅಂದುಕೊಂಡಿದ್ದನ್ನು ಸಾಧಿಸುವ ಛಲದಂಕ ಮಲ್ಲರಾಗಿರುತ್ತಾರೆ. ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ನಿರಾಯಾಸವಾಗಿ ಬಗೆಹರಿಸಿಕೊಂಡು ಶಾಂತ ಸ್ವರೂಪದಲ್ಲಿಯೇ ಪರಿಹಾರ ಕಂಡುಕೊಳ್ಳುತ್ತಾರೆ. ಇವರು ಸದಾ ಉತ್ಸುಕರಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಇನ್ನೊಬ್ಬರಿಗೂ ಕೂಡ ಮಾದರಿಯಾಗಿರುತ್ತಾರೆ.

ಇನ್ನು ಮೂರನೇಯದಾಗಿ ವೃಶ್ಚಿಕ ರಾಶಿಯವರು ಜೀವನದಲ್ಲಿ ಏನಾದರೊಂದು ವಿಭಿನ್ನವಾಗಿ ಮಾಡಬೇಕು ಎಂಬ ಕನಸನ್ನು ಹೊಂದಿರುತ್ತಾರೆ. ಸವಾಲುಗಳನ್ನು ಸಂತೋಷವಾಗಿ ಸ್ವೀಕರಿಸುತ್ತಾರೆ. ಇವರಿಗೆ ಸಮಸ್ಯೆಯನ್ನ ಸರಳೀಕರಣಗೊಳಿಸಿಕೊಳ್ಳುವ ಕಲೆ ಚೆನ್ನಾಗಿಯೇ ಕರಗತವಾಗಿರುತ್ತದೆ. ವೈವಿಧ್ಯಮವಾದ ಬದುಕಿಗೆ ಇಷ್ಟ ಪಡುತ್ತಾರೆ. ಪ್ರತಿದಿನ ಹೊಸ ಹೊಸ ವಿಚಾರಗಳನ್ನು ತಿಳಿಯಬೇಕು ಎಂಬ ನಿಯಮವನ್ನು ಅಳವಡಿಸಿಕೊಂಡಿರುತ್ತಾರೆ. ಇವರು ಸಾಹಸಿ ವ್ಯಕ್ತಿಗಳಾಗಿರುತ್ತಾರೆ. ನಾಲ್ಕನೇಯದಾಗಿ ಧನು ರಾಶಿಯವರು ಈ ರಾಶಿಯ ವ್ಯಕ್ತಿಗಳು ಕ್ರಿಯಾಶೀಲರು. ಧೈರ್ಯ ಎಂಬುದು ಇವರಿಗೆ ಹುಟ್ಟುತ್ತಲೇ ಬಂದಿರುತ್ತದೆ.

ಡೇರಿಂಗ್ ಪರ್ಸನ್ ಎಂಬ ಪದಕ್ಕೆ ಇವರು ಪರ್ಯಾಯವಾಗಿ ಇರುತ್ತಾರೆ. ಇವರು ಒಮ್ಮೆ ತಪ್ಪು ಮಾಡಿ ಅದರಿಂದ ಕಲಿತ ಪಾಠವನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು ಮತ್ತೊಮ್ಮೆ ಅಂತಹ ಎಷ್ಟೇ ಸಮಸ್ಯೆಗಳು ಎದುರಾದರೂ ಕೂಡ ಅಂಜದೇ ಧೈರ್ಯದಿಂದ ಸಮರ್ಥವಾಗಿ ನಿಭಾಯಿಸುತ್ತಾರೆ. ಇನ್ನು ಕೊನೆಯದಾಗಿ ಈ ಕುಂಭ ರಾಶಿ ಇವರು ಸ್ವಯಂ ಪ್ರೇರಿತರಾಗಿ ದುಡಿಯುವ ವ್ಯಕ್ತಿತ್ವವೊಂದಿರುವವರಾಗಿರುತ್ತಾರೆ. ಇವರು ಇನ್ನೊಬ್ಬರಿಗೆ ಸದಾ ಆದರ್ಶವಾಗಿ ಸ್ಪೂರ್ತಿಯಾಗಿ ಕಾಣುತ್ತಾರೆ. ಸಮಸ್ಯೆಗಳಿಗೆ ಸುಲಭವಾಗಿ ಉತ್ತರ ನೀಡಬಲ್ಲ ಚಾತಿ ಇವರದ್ದಾಗಿರುತ್ತದೆ.

%d bloggers like this: