ಈ ರಾಜ್ಯದ ವಿಧಾನಸಭೆ ಚುನಾವಣೆಗೆ ಟಿಕೆಟ್ ಪಡೆದ ನಟಿ

ಉತ್ತರ ಪ್ರದೇಶ ರಾಜ್ಯದ ವಿಧಾನಸಭೆ ಚುನಾವಣೆಗೆ ಟಿಕೆಟ್ ಪಡೆದ ಬಾಲಿವುಡ್ ಬೋಲ್ಡ್ ಬೆಡಗಿ, ರಾಜಕೀಯ ಕ್ಷೇತ್ರಕ್ಕೆ ಚಲನಚಿತ್ರ ನಟ ನಟಿಯರು ಪ್ರವೇಶ ಮಾಡುವುದು ಹೊಸದೇನಲ್ಲ. ಈಗಾಗಲೇ ಭಾರತೀಯ ಚಿತ್ರರಂಗದ ಅನೇಕ ನಟ-ನಟಿಯರು ಸಿನಿಮಾದ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿಯೂ ಕೂಡ ತೊಡಗಿಸಿಕೊಂಡು ಯಶಸ್ವಿಯಾಗಿದ್ದಾರೆ. ಅಂತೆಯೇ ಇದೀಗ ಮಾಡೆಲ್ ಕಮ್ ನಟಿ ಅರ್ಚನಾ ಗೌತಮ್ ಅವರು ಸಹ ರಾಜಕೀಯ ಕ್ಷೇತ್ರದಲ್ಲಿ ಮಿಂಚಲು ಸಿದ್ದರಾಗುತ್ತಿದ್ದಾರೆ. ಹೌದು ಉತ್ತರ ಪ್ರದೇಶದ ಮೀರತ್ ನಲ್ಲಿ ಜನಿಸಿದ ನಟಿ ಅರ್ಚನಾ ಗೌತಮ್ ಅವರು 2014 ರಲ್ಲಿ ಮಿಸ್ ಉತ್ತರ ಪ್ರದೇಶ ಅವಾರ್ಡ್ ಪಡೆಯುತ್ತಾರೆ. ನಂತರ 2018 ರಲ್ಲಿ ಮಿಸ್ ಕಾಸ್ಮೋ ಇಂಡಿಯಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.

26 ವರ್ಷದ ಈ ಬೆಡಗಿ ಅರ್ಚನಾ ಗೌತಮ್ ತನ್ನ ಬಿಕಿನಿ ರೂಪದಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದಾರೆ. ನಟಿ ಅರ್ಚನಾ ಗೌತಮ್ ಅವರು 2016 ರಲ್ಲಿ ಗ್ರೇಟ್ ಗ್ರ್ಯಾಂಡ್ ಮಸ್ತಿ ಎಂಬ ಹಿಂದಿ ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡುತ್ತಾರೆ. ಇದಾದ ಬಳಿಕ ಹಸೀನಾ ಪಾರ್ಕರ್ ಚಿತ್ರದಲ್ಲಿ ಅಭಿನಯಿಸುತ್ತಾರೆ. ಸದ್ಯಕ್ಕೆ ಅರ್ಚನಾ ಗೌತಮ್ ಅವರು ತೆಲುಗಿನ ಐಪಿಎಲ್ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಇದರ ನಡುವೆ ರಾಜಕೀಯ ಅಂಗಳಕ್ಕೂ ಹೆಜ್ಜೆ ಇಡುವ ಮೂಲಕ ಉತ್ತರ ಪ್ರದೇಶದ ರಾಜ್ಯ ರಾಜಕಾರಣದಲ್ಲಿ ‌ಸಂಚಲನ ಮೂಡಿಸಲು ಸಿದ್ದರಾಗಿದ್ದಾರೆ. ಕಳೆದ ವರ್ಷ 2021 ರ ನವೆಂಬರ್ ತಿಂಗಳಿನಲ್ಲಿ ನಟಿ ಅರ್ಚನಾ ಗೌತಮ್ ಅವರು ಛತ್ತೀಸ್ ಗಢ ರಾಜ್ಯದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಸಮಕ್ಷಮದಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಸಿನಿ ತಾರೆಯಾಗಿ ಅಪಾರ ಜನಪ್ರಿಯತೆ ಹೊಂದಿರುವ ಅರ್ಚನಾ ಗೌತಮ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಹಿನ್ನೆಲೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾಯಕಿ ಪ್ರಿಯಾಂಕಾ ವಾದ್ರಾ ಅವರು ನಟಿ ಅರ್ಚನಾ ಗೌತಮ್ ಗರ್ಲ್ ಹೂನ್, ಲಡ್ ಸಕ್ತೀ ಹೂನ್ ಅಭಿಯಾನದಿಂದ ಪ್ರೇರಣೆಗೊಂಡು ರಾಜಕೀಯಕ್ಕೆ ಪ್ರವೇಶ ಪಡೆದಿದ್ದಾರೆ. ತಮ್ಮ ಸಿದ್ದಾಂತಕ್ಕೆ ಹೊಂದುವಂತಹ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಅರ್ಚನಾ ಸೇರ್ಪಡೆ ಆಗಿರುವುದು ನಮಗೆ ಸಂತೋಷದ ವಿಷಯವಾಗಿದೆ ಎಂದು ತಮ್ಮ ಅರ್ಚನಾ ಗೌತಮ್ ಅವರೊಟ್ಟಿಗೆ ಇರುವ ಫೋಟೋವೊಂದನ್ನ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು.

ಇದೀಗ ನಟಿ ಅರ್ಚನಾ ಗೌತಮ್ ಅವರಿಗೆ ಉತ್ತರ ಪ್ರದೇಶದ ವಿಧಾನ ಸಭೆ ಚುನಾವಣೆಯಲ್ಲಿ ಎಂ.ಎಲ್.ಎ ಟಿಕೆಟ್ ನೀಡಿರುವುದಾಗಿ ಕಾಂಗ್ರೆಸ್ ಪಕ್ಷ ಅಧಿಕೃತ ಘೋಷಣೆಯ ಪಟ್ಟಿ ರಿಲೀಸ್ ಮಾಡಿದೆ. ಇದು ಸ್ವತಃ ಉತ್ತರ ಪ್ರದೇಶದ ಕಾಂಗ್ರೆಸ್ ಮುಖಂಡರಿಗೂ ಕೂಡ ಅಸಮಾಧಾನ ಉಂಟಾಗುವಂತೆ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕೂಡ ರಾಜಕೀಯದ ಸಂವಿಧಾನದ ಗಂಧಗಾಳಿ ಗೊತ್ತಿಲ್ಲದ ಒಬ್ಬ ರೂಪದರ್ಶಿ ನಟಿಗೆ ಟಿಕೆಟ್ ನೀಡಿರುವುದು ಸೂಕ್ತವಲ್ಲ ಎಂದು ಟೀಕೆ ಮಾಡುತ್ತಿದ್ದಾರೆ.

%d bloggers like this: