ಈ ರಾಶಿನಕ್ಷತ್ರದಲ್ಲಿ ಜನಿಸಿದವರು ದೇವಗಣದವರು, ನಿಮ್ಮದು ದೇವಗಣವೋ ಇಲ್ಲ ರಾಕ್ಷಸ ಗಣವೋ ನೋಡಿಕೊಳ್ಳಿ

ಜ್ಯೋತಿಷ್ಯಶಾಸ್ತ್ರದಲ್ಲಿ ಮನುಷ್ಯನನ್ನು ಮೂರು ಗಣಗಳ ಆಧಾರದ ಮೇಲೆ ವಿಂಗಡಿಸುತ್ತಾರೆ. ಅವುಗಳನ್ನು ಕ್ರಮವಾಗಿ ದೇವಗಣ, ಮನುಷ್ಯ ಗಣ,ಹಾಗೂ ರಾಕ್ಷಸ ಗಣ ಎಂದು ನಿರ್ಧರಿಸುತ್ತಾರೆ. ಈ 27 ನಕ್ಷತ್ರಗಳನ್ನು ಮತ್ತೆ ನಿಯಮಬದ್ದವಾಗಿ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಒಂದೊಂದು ಗಣಗಳನ್ನು ಒಂಭತ್ತು ನಕ್ಷತ್ರಗಳಲ್ಲಿ ವಿಂಗಡಣೆ ಮಾಡಲಾಗುತ್ತದೆ. ನಿಮ್ಮ ಜನ್ಮ ನಕ್ಷತ್ರಗಳ ಆಧಾರದ ಮೇಲೆ ಗಣವನ್ನು ನಿರ್ಧರಿತವಾಗುತ್ತದೆ. ನಿಮ್ಮ ಜನ್ಮವು ಪುಷ್ಪ ನಕ್ಷತ್ರ, ಆಸ್ತ ನಕ್ಷತ್ರ, ಶ್ರವಣ ನಕ್ಷತ್ರ ಅನುರಾಧ ನಕ್ಷತ್ರ, ಸ್ವಾತಿ ನಕ್ಷತ್ರ, ಮೃಗಶಿರ ಹಾಗೂ ರೇವತಿ ನಕ್ಷತ್ರ ಗಳಲ್ಲಿ ನೀವು ಜನಿಸಿದರೆ ನಿಮ್ಮದು ದೇವ ಗುಣ ವಾಗುತ್ತದೆ. ಇವರು ದೇವಗಣದ ಹೆಸರಂತೆ ದೇವರಂತಹ ಸ್ವಭಾವ ಕೂಡ ಹೊಂದಿರುತ್ತಾರೆ.

ಇವರು ಸಾಧಾರಣ ಜೀವನ ನಡೆಸುವಂತ ವ್ಯಕ್ತಿಯಾಗಿದ್ದರು ಕೂಡ ಉನ್ನತ ವಿಚಾರಗಳನ್ನು ಅಳವಡಿಸಿಕೊಂಡಿರುತ್ತಾರೆ, ಇವರು ನೇರನುಡಿಯ ವ್ಯಕ್ತಿತ್ವ ಉಳ್ಳವರಾಗಿದ್ದು ಸರಳ ಜೀವನ ನಡೆಸುತ್ತಿರುತ್ತಾರೆ. ಇವರು ಹೆಚ್ಚು ಕಲಹಗಳು ಜಗಳದಿಂದ ದೂರವಿರುತ್ತಾರೆ.

ಮಾನವೀಯ ಮೌಲ್ಯಗಳಿಗೆ ಹೆಚ್ಚು ಬೆಲೆ ನೀಡುವಂತರಾಗಿದ್ದು ದಾನ ಧರ್ಮ ಮಾಡುವವರಾಗಿದ್ದಾರೆ. ಇವರು ಹೆಚ್ಚು ಶಾಂತಿ ಪ್ರಿಯರಾಗಿದ್ದು ಧಾರ್ಮಿಕ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ, ಯಾರು ಎಷ್ಟೇ ಕಷ್ಟ ಕೊಟ್ಟರೂ ಸಹ ದ್ರೋಹ ಬಗೆದರು ಕೂಡ ಅವರನ್ನು ಕ್ಷಮಿಸುವಂತಹ ಗುಣ ಇವರಲ್ಲಿ ಅಗಾಧವಾಗಿರುತ್ತದೆ. ಆದ್ದರಿಂದ ಇವರನ್ನು ಕ್ಷಮಾಗುಣ ವ್ಯಕ್ತಿತ್ವವುಳ್ಳವರು ಎಂದು ಕರೆಯಲಾಗುತ್ತದೆ. ಜೊತೆಗೆ ಇವರು ಹೃದಯ ಶ್ರೀಮಂತಿಕೆ ಉಳ್ಳವರಾಗಿರುತ್ತಾರೆ.

ಇನ್ನು ಎರಡನೇಯದಾಗಿ ನೀವು ಭರಣಿ ನಕ್ಷತ್ರ, ಉತ್ತರಾಷಾಡ ನಕ್ಷತ್ರ, ಪೂರ್ವಾಷಾಡ ನಕ್ಷತ್ರ,ಪೂರ್ವ ಫಾಲ್ಗುಣಿ ನಕ್ಷತ್ರ, ಉತ್ತರ ಫಾಲ್ಗುಣಿ ನಕ್ಷತ್ರ, ಉತ್ತರ ಭಾದ್ರಪದ, ಪೂರ್ವ ಭಾದ್ರಪದ ನಕ್ಷತ್ರ ಹಾಗೂ ರೋಹಿಣಿ ನಕ್ಷತ್ರದಲ್ಲಿ ಜನಿಸಿದವರಾಗಿದ್ದರೆ ನೀವು ಮಾನವ ಗಣಕ್ಕೆ ಸೇರುತ್ತೀರಿ. ಈ ಗಣದವರು ಕರ್ಮ ಶೀಲರಾಗಿರುತ್ತಾರೆ. ಅಂದರೆ ತಾವು ಮಾಡುವ ಕೆಲಸಕಾರ್ಯದಲ್ಲಿ ಹೆಚ್ಚು ವಿಶ್ವಾಸ, ಬದ್ದತೆ,ನಂಬಿಕೆ ಇಟ್ಟು ಶ್ರದ್ಧಾಭಕ್ತಿಯಿಂದ ಕೆಲಸವನ್ನು ನಿರ್ವಹಿಸುತ್ತಾರೆ. ಇವರು ದೃಢನಿಶ್ಚಯ ಉಳ್ಳವರಾಗಿದ್ದು, ತಮ್ಮ ಮಾತಿನಿಂದ, ವ್ಯಕ್ತಿತ್ವ ನಡವಳಿಕೆಯಿಂದ ಎಲ್ಲರನ್ನು ಆಕರ್ಷಿಸುವಂತಹ ವ್ಯಕ್ತಿತ್ವ ಉಳ್ಳವರಾಗಿರುತ್ತಾರೆ. ಇವರು ಸ್ವಭಾವತಃ ಒಳ್ಳೆಯವರಾಗಿದ್ದು ವರ್ತಮಾನವನ್ನು ಅರಿತು ಭವಿಷ್ಯವನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬುದರ ಬಗ್ಗೆ ತಿಳಿದಿರುತ್ತಾರೆ. ಇವರು ಸಮಾಜದಲ್ಲಿ ತನ್ನದೆಯಾದ ಸ್ಥಾನ ಮಾನ ಗೌರವವನ್ನು ಹೊಂದಿರುತ್ತಾರೆ. ಯಾರಿಗೂ ಸಹ ಕೆಟ್ಟದ್ದನ್ನು ಬಯಸುವುದಿಲ್ಲ.

ಇನ್ನು ನೀವು ಆಶ್ಲೇಷ ನಕ್ಷತ್ರ, ಧನಿಷ್ಠ ನಕ್ಷತ್ರ, ಮೂಲ ನಕ್ಷತ್ರ, ಚಿತ್ತ ನಕ್ಷತ್ರ, ಮಕರ ನಕ್ಷತ್ರ, ವೈಶಾಖ ನಕ್ಷತ್ರ, ಕೃತಿಕಾ ನಕ್ಷತ್ರ ದಲ್ಲಿ ಜನಿಸಿದವರಾಗಿದ್ದರೆ ನೀವು ರಾಕ್ಷಸ ಗಣಕ್ಕೆ ಬರುತ್ತೀರಿ. ಅಂದರೆ ಇವರು ರಕ್ಕಸ ಗುಣಗಳನ್ನು ಹೊಂದಿದ್ದಾರೆ ಎಂಬುದು ಅರ್ಥವಲ್ಲ ಇವರು ಜೀವನದಲ್ಲಿ ಅನುಭವಿಸಿದಂತಹ ಕೆಟ್ಟ ಪರಿಸ್ಥಿತಿಗಳಿಗೆ ಮತ್ತು ಅನ್ಯಾಯಕ್ಕೆ ಒಳಪಟ್ಟಾಗ ರಾಕ್ಷಸರಂತೆ ಹೋರಾಟ ನಡೆಸಿ ನ್ಯಾಯ ಪಡೆಯುತ್ತಾರೆ ಎಂದರ್ಥ, ಇವರು ಕೂಡ ಒಳ್ಳೆಯ ಪ್ರೀತಿ, ಪ್ರೇಮ, ವಾತ್ಸಲ್ಯದ ಗುಣವನ್ನು ಹೊಂದಿರುತ್ತಾರೆ. ಆದರೆ ಇವರಲ್ಲಿ ನಕಾರಾತ್ಮಕ ಚಿಂತನೆ ಹೆಚ್ಚಾಗಿರುತ್ತದೆ. ಇವರ ಮಾತು ಕಠೋರವಾಗಿದ್ದರು ಮನಸ್ಸು ಹೂವಿನಂತೆ ಮೃದುವಾಗಿರುತ್ತದೆ.

%d bloggers like this: