ಈ ರಾಶಿಯ ಹುಡುಗಿಯರನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಲೇಬೇಡಿ. ಯಾಕಂದ್ರೆ ಈ ಒಂದು ವಿಶೇಷ ರಾಶಿಯ ಯುವತಿಯರು ಎಲ್ಲಾದಕ್ಕೂ ಸೈ ಎನ್ನುವ ವ್ಯಕ್ತಿತ್ವಗುಣದವರಾಗಿರುತ್ತಾರೆ. ಹೌದು ಬದುಕಿನಲ್ಲಿ ಬಹು ಮುಖ್ಯ ಘಟ್ಟ ಅಂದರೆ ಅದು ವೈವಾಹಿಕ ಜೀವನಕ್ಕೆ ಕಾಲಿಡುವ ಸಂಧರ್ಭ. ಹೀಗಿರಬೇಕಾದಾಗ ತಮ್ಮ ಬಾಳ ಸಂಗಾತಿಯಾಗಿ ಬರುವ ವ್ಯಕ್ತಿಗಳು ಯಾವ ರೀತಿ ಇರುತ್ತಾರೆ, ಅವರ ಗುಣ ಸ್ವಭಾವಗಳು ನಮಗೆ ಹೊಂದಾಣಿಕೆ ಆಗುತ್ತದೆಯೇ ಎಂಬುದು ಒಂದಷ್ಟು ಯುವ ಪೀಳಿಗೆಗೆ ಕಾಡುವ ಗೊಂದಲ ಪ್ರಶ್ನೆಗಳು. ಕೆಲವೊಮ್ಮೆ ಎಲ್ಲಾ ರೀತಿಯ ಶಾಸ್ತ್ರ ಸಂಪ್ರದಾಯ, ಕೌಟುಂಬಿಕ ಹಿನ್ನೆಲೆ ನೋಡಿ ಶಾಸ್ತ್ರೋಕ್ತವಾಗಿ ಮದುವೆ ಆದರೂ ಕೂಡ ತದ ನಂತರದಲ್ಲಿ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ.

ನೆಮ್ಮದಿ ಇಲ್ಲದ ಬದುಕು ನವ ಜೋಡಿಗಳದಾಗುತ್ತದೆ. ಇಂತಹ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗುವುದು ದ್ವಾದಶ ರಾಶಿಗಳ ಪ್ರಭಾವ ಅನ್ನುತ್ತಾರೆ ಪ್ರಸಿದ್ದ ಹಿರಿಯ ಜ್ಯೋತಿಷಿಗಳು. ಹೌದು ಆಯಾಯ ರಾಶಿಯ ವ್ಯಕ್ತಿಗಳು ತಮ್ಮ ರಾಶಿಗೆ ಹೊಂದುವಂತಹ ವ್ಯಕ್ತಿಗಳನ್ನ ವಿವಾಹವಾದರೆ ನಿಮ್ಮ ದಾಂಪತ್ಯ ಜೀವನ ಉತ್ತಮವಾಗಿರುತ್ತದೆ. ಆದರೆ ಕೆಲವು ರಾಶಿಯ ವ್ಯಕ್ತಿಗಳು ಈ ರಾಶಿಯ ಯುವತಿಯರನ್ನ ಬಾಳ ಸಂಗಾತಿಯಾಗಿ ಮಾಡಿಕೊಂಡರೆ ಜೀವನ ಉತ್ತಮವಾಗಿರುತ್ತದೆ ಎಂದು ಹೇಳುತ್ತಾರೆ.

ಅಂತೆಯೇ ಮೇಷ ರಾಶಿಯ ಯುವತಿಯರ ಗುಣ ಸ್ವಭಾವಗಳನ್ನು ನೋಡುವುದಾದರೆ. ಇವರು ಪ್ರೀತಿಯಲ್ಲಿ ಎಷ್ಟರ ಮಟ್ಟಿಗೆ ನೈತಿಕತೆ ಹೊಂದಿರುತ್ತಾರೋ ಅಷ್ಟೇ ತಮ್ಮವರ ಬಗ್ಗೆ ಸ್ವಾರ್ಥದ ಭಾವ ಹೊಂದಿರುತ್ತಾರೆ. ಜೀವನದಲ್ಲಿ ಸದಾ ಚಟುವಟಿಕೆಯಿಂದ ಹಾಸ್ಯ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವರಿಗೆ ಬಹು ಬೇಗ ಕೋಪ ಬರುತ್ತದೆ. ಅಷ್ಟೇ ಬೇಗ ಆ ಕೋಪ ಶಮನವಾಗಿ ತಾವೇ ಮುಂದೆ ಹೋಗಿ ಮಾತನಾಡಿಸುತ್ತಾರೆ. ಇವರು ಎಲ್ಲರೊಂದಿಗೂ ಕೂಡ ಬೆರೆತು ತಾವಿರುವ ಜಾಗವನ್ನು ಸಂಭ್ರಮದಿಂದ ಇರುವಂತೆ ನೋಡಿಕೊಳ್ಳುತ್ತಾರೆ.

ಇವರು ಯಾವುದೇ ಕೆಲಸ ಮಾಡಬಯಸಿದರು ಕೂಡ ಉತ್ಸಾಹ ಹುಮ್ಮಸಿನಿಂದ ಮಾಡುತ್ತಾರೆ. ಸೋಲು ಗೆಲುವುಗಳಿಗೆ ಯಾವುದೇ ಕಾರಣಕ್ಕೂ ಧೃತಿಗೆಡಿಸುವುದಿಲ್ಲ. ಇವರು ಗಟ್ಟಿಗಿತ್ತಿಯಾಗಿರುತ್ತಾರೆ. ಯಾವುದಕ್ಕೂ ಕೂಡ ಭಯ ಪಡದೇ ಧೈರ್ಯದಿಂದ ಮುನ್ನುಗ್ಗುತ್ತಾರೆ. ಇವರ ಬಾಳ ಸಂಗಾತಿ ಎಷ್ಟು ಪ್ರೀತಿ ನೀಡುತ್ತಾರೋ ಅದಕ್ಕಿಂತ ನೂರು ಪಟ್ಟು ಪ್ರೀತಿಯನ್ನ ನೀಡುತ್ತಾರೆ. ಇವರು ಸಾಂಪ್ರದಾಯಿಕ ಆಚರಣೆ ಉಡುಗೆ-ತೊಡುಗೆಗಳಿಗೂ ಸೈ, ಆಧುನಿಕ ಜೀವನ ಶೈಲಿಯ ಉಡುಗೆ-ತೊಡುಗೆಗಳಿಗೂ ಸೈ ಎನ್ನುವಂತಹ ವ್ಯಕ್ತಿತ್ವ ಹೊಂದಿರುತ್ತಾರೆ.
ಇವರನ್ನು ಬಾಳ ಸಂಗಾತಿಯಾಗಿ ಪಡೆಯುವ ವ್ಯಕ್ತಿ ಕೂಡ ಅಷ್ಟೆ ಧೈರ್ಯವಂತ ವ್ಯಕ್ತಿತ್ವವನ್ನು ಹೊಂದಿರಲೇಬೇಕಾಗಿರುತ್ತದೆ.

ಇನ್ನು ಈ ಮೇಷ ರಾಶಿಯ ವ್ಯಕ್ತಿತ್ವದವರು ಸಾಂಸಾರಿಕ ಜೀವನದಲ್ಲಿ ಹೆಚ್ಚು ಶೃಂಗಾರಭರಿತ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇವರು ತಮ್ಮ ವೃತ್ತಿ ಜೀವನ ಮತ್ತು ಸಾಂಸಾರಿಕ ಜೀವನ ಎರಡನ್ನು ಕೂಡ ಸಮಾನವಾಗಿ ನೋಡುವಂತವರಾಗಿರುತ್ತಾರೆ. ಇವರು ತಮ್ಮ ಮೇಲೆ ಅಧಿಕಾರ ಚಲಾಯಿಸುವುದು, ದರ್ಪ ತೋರುವುದನ್ನು ಯಾವುದೇ ಕಾರಣಕ್ಕೂ ಕೂಡ ಸಹಿಸಿಕೊಳ್ಳುವವರಲ್ಲ. ಜೀವನದಲ್ಲಿ ಹೊಂದಾಣಿಕೆ ಮುಖ್ಯ ಎಂಬುದನ್ನ ಅರಿತರೂ ಕೂಡ ಅತಿಯಾಗಿ ಹೊಂದಾಣಿಕೆ ಮಾಡಿಕೊಳ್ಳದೇ ಜೀವನದಲ್ಲಿ ತಮ್ಮ ಇಚ್ಚೆಯಂತೆ ಅಂದುಕೊಂಡಂತೆ ಬದುಕನ್ನ ಸಾಗಿಸುತ್ತಾರೆ. ತಮ್ಮ ಬಾಳ ಸಂಗಾತಿಯನ್ನ ಯಾವುದೇ ಕಾರಣಕ್ಕೂ ಬಿಟ್ಟುಕೊಡದೇ ಅವರೊಂದಿಗೆ ಉತ್ತಮ ಸಂಬಂಧ ಭಾಂಧವ್ಯ ಹೊಂದಿರುತ್ತಾರೆ.