ಸಿಂಹ ರಾಶಿಯವರಿಗೆ 2021ವರ್ಷ ಭವಿಷ್ಯವು ಲಾಭ ನಷ್ಟ ಗಳಿಂದ ಕೂಡಿದೆ. ಸಿಂಹ ರಾಶಿಯವರಿಗೆ ಗುರುಗ್ರಹವು ಉಚ್ಚಸ್ಥಾನದಲ್ಲಿ ಇರುವುದರಿಂದ ಯಾವುದೇ ರಾಶಿಯವರಿಗೆ ಶುಭ ಫಲ ಬರುವುದಿಲ್ಲ. ಆದರೆ ಗುರುವಿನ ದೃಷ್ಠಿ ಸಾಧಾರಣವಾಗಿ ಮೂರನೇ ಮನೆಯಲ್ಲಿ ಇರುವುದರಿಂದ ಗುರು ದೃಷ್ಟಿಯು ನಾಲ್ಕರಿಂದ ಐದು ತಿಂಗಳು ಸಿಂಹ ರಾಶಿಯ ಮೇಲೆ ಪ್ರಭಾವ ಬೀರುತ್ತದೆ. ರಾಶಿ ಅಧಿಪತಿಯಾಗಿರುವ ರವಿಯು ಅಂದರೆ ಸೂರ್ಯ ಗ್ರಹವು ಏಪ್ರಿಲ್ ತಿಂಗಳಿನಿಂದ ಮೇ 15ರ ತಾರೀಖಿನವರೆಗೂ ಒಂದು ಅದ್ಭುತವಾದ ಯೋಗವನ್ನು ಸಿಂಹರಾಶಿಯವರಿಗೆ ಲಭಿಸುತ್ತದೆ.

ಇನ್ನು ಮೇಷ ರಾಶಿಯಲ್ಲಿ ಸೂರ್ಯ ಗ್ರಹವು ಉಚ್ಚ ಸ್ಥಾನದಲ್ಲಿ ಇರುವುದರಿಂದ ಸಿಂಹ ರಾಶಿಯವರಿಗೆ ಮುಟ್ಟಿದ್ದೆಲ್ಲ ಬಂಗಾರವಾಗುತ್ತದೆ. ಮೇಷ ರಾಶಿಯಲ್ಲಿ ಸೂರ್ಯನಿದ್ದರೆ ಆಗ ಸಿಂಹ ರಾಶಿಯವರಿಗೆ ರಾಜಯೋಗ ಎನ್ನುತ್ತಾರೆ. ಸಿಂಹ ರಾಶಿಯ ಯಾವುದೇ ತೊಂದರೆ ದೋಷಗಳಿಗೆ ಗುರು ಪ್ರಾರ್ಥನೆ ಗುರು ಸೇವೆಯನ್ನು ಮಾಡಬೇಕು. ಸಿಂಹ ರಾಶಿಯವರು ವರ್ಷದ ಅಂತ್ಯದವರಿಗೂ ನಿಮ್ಮ ಮನೆಯ ವಿಚಾರ ಹಣಕಾಸು ವಿಚಾರದಲ್ಲಿ ಎಚ್ಚರ ವಹಿಸಬೇಕು, ದೂರ ಪ್ರಯಾಣವನ್ನು ಮಂದೂಡಿದರೆ ಉತ್ತಮ. ಸಿಂಹ ರಾಶಿಯವರು ಮುಂದಿನವರ್ಷ ರಾಜಯೋಗ ಪಡೆಯುವಂತಾಗುತ್ತದೆ. ಆ ಯೋಗವನ್ನು ಸಿಂಹ ರಾಶಿಯವರು ಸದುಪಯೋಗ ಪಡೆದುಕೊಳ್ಳಬೇಕು. ಸಿಂಹ ರಾಶಿಯವರು ಆರ್ಥಿಕ, ಕೌಟುಂಬಿಕ ವಿಚಾರದಲ್ಲಿ ಕೊಂಚ ಎಚ್ಚರವಹಿಸಬೇಕು. ಅನವಶ್ಯಕ ಖರ್ಚು ಮಾಡಬಾರದು.

ಸಿಂಹ ರಾಶಿಯವರಿಗೆ ವರ್ಷದ ಕೊನೆಯಲ್ಲಿ ರಾಜಯೋಗ ಲಭಿಸುವುದರಿಂದ ಸರ್ಕಾರದಿಂದ ಬರುವ ಎಲ್ಲಾ ಅನುದಾನ, ಸಹಾಯಗಳನ್ನು ಬಳಸಿಕೊಳ್ಳಬಹುದು ಆದರೆ ಇದಕ್ಕೆ ನಿಮ್ಮ ಪ್ರಯತ್ನ ಮುಖ್ಯವಾಗಿರುತ್ತದೆ. ಸಿಂಹ ರಾಶಿಯವರಿಗೆ ಏಪ್ರಿಲ್ ತಿಂಗಳು ಯಶಸ್ಸು ದೊರೆಯುತ್ತದೆ. ಆದ್ದರಿಂದ ನಿಮಗೆ ಯಾವುದೇ ರೀತಿಯ ಸಾಲಬಾಧೆ, ಅನಾರೋಗ್ಯ ಸಮಸ್ಯೆ, ಶತ್ರುಗಳಿಂದ ಅಪಾಯ ಅಂತಹ ದೋಷ ನಿವಾರಣೆ ಯಾಗುತ್ತದೆ. ಇನ್ನೂ ಉತ್ತಮವಾದ ದಿನಗಳು ಅಂದರೆ ಮನೆಯಲ್ಲಿ ಶಃಭಕಾರ್ಯಗಳು ನಡೆಯುತ್ತವೆ. ವಿವಾಹ ನಿಶ್ಚಯ ಸಾಧ್ಯತೆ, ಕುಟುಂಬದ ಬೆಳವಣಿಗೆ, ಇಷ್ಟುದಿನ ಅನುಭವಿಸಿದ ಹಣಕಾಸಿನ ಸಮಸ್ಯೆಯಿಂದ ಮುಕ್ತಿಗೊಂಡು ಆರ್ಥಿಕ ಸಮಸ್ಯೆಯು ನಿವಾರಣೆಯಾಗುತ್ತದೆ.
ರಾಹು ಕೇತುಗಳ ಪ್ರಭಾವು ಸಹ ಸಿಂಹ ರಾಶಿಯ ಮೇಲೆ ಮುಂದಿನ ವರ್ಷ ಪ್ರಭಾವ ಬೀರುತ್ತದೆ. ವರ್ಷದ ಆರಂಭದಲ್ಲಿ ವೃಷಭರಾಶಿಯಲ್ಲಿ ರಾಹುಗ್ರಹವು ಇರುವುದರಿಂದ ನಿಮಗೆ ಉತ್ತಮವಾಗಿರುತ್ತದೆ. ಇನ್ನು ಕೇತುಗ್ರಹವು ಕೂಡ ನಾಲ್ಕನೇ ಮನೆಯಲ್ಲಿ ಬರುವುದರಿಂದ ನಿಮ್ಮ ಜ್ಞಾನಾರ್ಜನೆ ಹೆಚ್ಚಾಗುತ್ತದೆ, ಆಧ್ಯಾತ್ಮಿಕ ವಿಚಾರದ ಬಗ್ಗೆ ನೀವು ಆಸಕ್ತಿ ವಹಿಸುತ್ತೀರಿ ಅದರ ಮಹತ್ವವನ್ನು ಅರಿಯುತ್ತೀರಿ.

ಇನ್ನು ಮುಂದಿನ 2021ರ ಫೆಬ್ರವರಿಯಿಂದ ಏಪ್ರಿಲ್14 ರವರೆಗೆ ನೀವು ಹೆಚ್ಚಿನ ಜಾಗ್ರತೆಯಿಂದಿರಬೇಕು. ಏಕೆಂದರೆ ಮೋಸ ಹೋಗುವಂತಹ ಸಾಧ್ಯತೆ ಇರುತ್ತದೆ ಯಾವುದಕ್ಕೂ ಅನಾವಶ್ಯಕ ಸಹಿ ಮಾಡಬೇಡಿ ಮೂರನೇಯ ವ್ಯಕ್ತಿಗಳಿಗೆ ಜಾಮೀನಾಗಿ ನಿಲ್ಲಬೇಡಿ ಎಂದು ವರ್ಷ ಭವಿಷ್ಯದಲ್ಲಿ ತಿಳಿಸುತ್ತದೆ. ಹಾಗಾಗಿ ಹೆಚ್ಚಿನ ಒಳಿತಿಗಾಗಿ ನೀವು ಗುರು ದೇವನ ಪ್ರಾರ್ಥನೆ ಗುರು ಸೇವೆ ಮಾಡುವುದರಿಂದ ಒಳಿತಾಗುತ್ತದೆ.