ಈ ರಾಶಿಯವರ ಪ್ರೇಮ ಜೀವನದಲ್ಲಿ ನೀವು ಅಂದುಕೊಂಡಂತೆ ನಡೆಯಲಿದೆ

ಸಿಂಹರಾಶಿಯ ವ್ಯಕ್ತಿಗಳಿಗೆ ಪ್ರೀತಿ ಪ್ರೇಮ, ಪ್ರಣಯದ ವಿಚಾರದಲ್ಲಿ ಯಾವ ರೀತಿಯಾದ ಅನುಭವ ಆಗುತ್ತದೆ. ನಿಮ್ಮಜೀವನದಲ್ಲಿ ಬರುವ ಬಾಳ ಸಂಗಾತಿ ಹೇಗಿರುತ್ತಾರೆ ಅವರ ಪ್ಲ್ಯಾಶ್ ಬ್ಯಾಕ್ ಹೇಗಿರುತ್ತೆ ನೀವು ಆಯ್ಕೆ ಮಾಡುವ ಹುಡುಗ ಅಥವಾ ಹುಡುಗಿ ನಿಮ್ಮ ಜೊತೆಯಲ್ಲಿ ಪ್ರಾಮಾಣಿಕತೆಯಿಂದ, ಇರುತ್ತಾರ ಅಥವಾ ನಂಬಿಸಿ ಮೋಸ ಮಾಡುವ ವ್ಯಕ್ತಿ ಆಗಿರುತ್ತಾರಾ ಎಂಬುದನ್ನು ನೀವು ಕಡ್ಡಾಯವಾಗಿ ತಿಳಿದುಕೊಳ್ಳಬೇಕಾಗಿದೆ. ಸಿಂಹ ರಾಶಿಯವರ ಪ್ರೇಮ ಜೀವನದಲ್ಲಿ ನಿಮ್ಮ ಪ್ರೇಯಸಿ ಅಥವಾ ಪ್ರಿಯತಮ ನಿಮಗೆ ಹಸಿರು ನಿಶಾನೆ ನೀಡುತ್ತಾರೆ. ನಿಮ್ಮ ಪ್ರಸ್ತಾಪಕ್ಕೆ ಅವರು ಒಪ್ಪಿಗೆ ಮದುವೆಯಾಗಲು ಸಿದ್ದರಿರುತ್ತಾರೆ. ಆದಷ್ಟು ಮನೆಯವರನ್ನು ಒಪ್ಪಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಿ ತಂದೆತಾಯಿ, ಕುಟುಂಬವನ್ನು ದಿಕ್ಕರಸಿ ಹೋಗಬೇಡಿ ಇದರಿಂದ ನಿಮಗೆ ಸಂಕಷ್ಠ ಎದುರಾಗುತ್ತದೆ.

ಇನ್ನುಈ ಸಿಂಹ ರಾಶಿಯ ಕೆಲವು ಪ್ರೇಮಿಗಳಿಗೆ ಮೋಸವಾಗುವ ಸಾಧ್ಯತೆ ಹೆಚ್ಚಾಗುತ್ತಿರುತ್ತದೆ ಕೇವಲ ಬಾಹ್ಯ ಸೌಂದರ್ಯಕ್ಕೆ ಮನಸೋತು ಮರುಳಾಗಬೇಡಿ ಇಂತಹ ಸಮಯದಲ್ಲಿ ನೀವು ಅವರ ವ್ಯಕ್ತಿತ್ವ ಗುಣಗಳನ್ನು ತೂಗಿ ಅಳೆದು ಪ್ರಿಯತಮನಾಗಿ, ಪ್ರಿಯತಮೆಯಾಗಿ ಆಯ್ಕೆ ಮಾಡಿಕೊಂಡರೆ ನಿಮ್ಮ ಪ್ರೀತಿಯ ವೈವಾಹಿಕ ಜೀವನ ಸುಂದರವಾಗಿರುತ್ತದೆ. ಇನ್ನು ನೀವು ಪ್ರೀತಿಸುತ್ತಿರುವ ವ್ಯಕ್ತಿಗಳೊಂದಿಗೆ ಆರಂಭದಲ್ಲಿ ನಿಮ್ಮ ಸಂಪೂರ್ಣ ಮಾಹಿತಿ ನೀಡಬೇಡಿ. ಆ ವ್ಯಕ್ತಿ ನಿಮಗೆ ಪರಿಪೂರ್ಣವಾಗಿ ಅರ್ಥವಾಗಿ ನಂತರ ನಿಮಗೆ ಅವರ ಮೇಲೆ ನಂಬಿಕೆ ಬಂದರು ಕೂಡ ಒಮ್ಮೆ ಅವಲೋಕಿಸಿ ನಿಮ್ಮ ಹಿನ್ನೆಲೆ ಕಷ್ಟ ನಷ್ಟ ಹಂಚಿಕೊಳ್ಳಿ ಇಲ್ಲವಾದರೆ ಮುಂದಿನ ದಿನಗಳಲ್ಲಿ ಇದು ತುಂಬ ತೊಂದರೆ ನೀಡಬಹುದಾಗಿದೆ.

ನೀವು ಯಾವುದೇ ಕಾರಣಕ್ಕೂ ಹಣಕಾಸು ವಿಚಾರವಾಗಿ ನಿಮ್ಮ ಪ್ರೀತಿಯ ವ್ಯಕ್ತಿಗಳೊಂದಿಗೆ ಚರ್ಚೆ ಮಾಡಬೇಡಿ, ಇದರಿಂದ ನಿಮ್ಮಿಂದ ಅವರು ಹಣಕಾಸು ನಿರೀಕ್ಷೆ ಮಾಡುವ ಅವಕಾಶವಿದೆ ಕೆಲವರಿಗೆ ಎಷ್ಟೇ ತೊಂದರೆ ಇದ್ದರು ಅವರು ನಿಮ್ಮ ಬಳಿ ಹೇಳಿಕೊಳ್ಳುವುದಿಲ್ಲ. ಸಿಂಹ ರಾಶಿಯ ಕೆಲವರಿಗೆ ತಾವು ಪ್ರೀತಿಸುತ್ತಿರುವ ವ್ಯಕ್ತಿಗಳಿಗೆ ಇಷ್ಟುದಿನ ಪ್ರೀತಿಯನ್ನು ಅವರ ಬಳಿ ನಿವೇಧನೆ ಮಾಡಿಕೊಳ್ಳಬೇಕು ಎಂಬ ಆಲೋಚನೆ ಇದ್ದವರು ಕೊಂಚ ಎಚ್ಚರವಹಿಸಿ ನಿರ್ಧಾರ ತೆಗೆದುಕೊಳ್ಳಿ ಇದರಿಂದ ಆ ವ್ಯಕ್ತಿ ನಿಮ್ಮಿಂದ ದೂರವಾಗಬಹುದು. ಪರಸ್ಪರಲ್ಲಿ ಆ ಭಾವನೆ ಇದ್ದರೆ ಮಾತ್ರ ಮುಂದುವರಿಯರಿ ಒನ್ ಸೈಡ್ ಲವ್ ಆಗಿದ್ದರೆ ಆದಷ್ಟು ತಾಳ್ಮೆಯಿಂದ ಸಮಯ ಸಂಧರ್ಭ ನೋಡಿ ಈ ವಿಚಾರದ ಬಗ್ಗೆ ಮಾತನಾಡಿ.

ಆತುರ ಬೇಡ ಇಷ್ಟವಾಗದಿದ್ದಲ್ಲಿ ಒತ್ತಡ ಏರಬೇಡಿ ಇದರಿಂದ ನಿಮ್ಮ ಬಗ್ಗೆ ಇದ್ದ ಗೌರವ ಅವರಿಗೆ ಕಡಿಮೆಯಾಗುತ್ತದೆ, ಕೆಲವರು ವಿವಾಹವಾಗಿದ್ದರು ಕೂಡ ನಿಮ್ಮ ಜೊತೆ ಈ ವಿಚಾರ ತಿಳಿಸದೆ ನಿಮ್ಮನ್ನು ಆರ್ಥಿಕವಾಗಿ ಬಳಸಿಕೊಳ್ಳಲು ನಿಮ್ಮ ಜೊತೆ ರಿಲೇಷನ್ ಶಿಪ್ ಡ್ರಾಮಾ ಮಾಡುತ್ತಿರುತ್ತಾರೆ ಆದ್ದರಿಂದ ನಿಮ್ಮ ಜೊತೆಗಾರರ ಬಗ್ಗೆ ತಿಳಿದುಕೊಂಡು ಅವರ ಸ್ನೇಹ ಮಾಡಿ ಇಲ್ಲವಾದರೆ ನಿಮಗೆ ತೊಂದರೆ ತಾಪತ್ರಯ ಕಟ್ಟಿಟ್ಟ ಬುತ್ತಿರಾಗಿದೆ.

ಏನೇ ಆದರು ಅಂತಿಮವಾಗಿ ನಿಮ್ಮ ಭಾವನೆಗಳಿಗೆ ಸ್ಪಂದಿಸುವಂತಹ ವ್ಯಕ್ತಿಗಳನ್ನು ನಿಮ್ಮ ಜೀವನದ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳಿ ಅವರ ಆರ್ಥಿಕ ಪರಿಸ್ಥಿತಿ, ಉದ್ಯೋಗ, ರೂಪ ಲಾವಣ್ಯ ನೋಡಿ ಮೋಸ ಹೋಗಬೇಡಿ. ನೀವು ಪ್ರೇಮಿಗಳಾಗಿದ್ದರೆ ನೀವು ಪರಸ್ಪರ ಮುಕ್ತವಾಗಿ ಮಾತನಾಡುವುದು ಇಬ್ಬರಿಗೂ ಒಳಿತು. ಮುಚ್ಚು ಮರೆಯ ವಿಚಾರಗಳಿದ್ದಲ್ಲಿ ನಿಮ್ಮ ಭಾಂಧವ್ಯಕ್ಕೆ ಧಕ್ಕೆ ಬರುತ್ತದೆ. ಇಂತಹ ವಿಚಾರಗಳನ್ನು ಮೂರನೇಯ ವ್ಯಕ್ತಿ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ, ನಿಮ್ಮ ಆಪ್ತರೆ ನಿಮ್ಮ ಮತ್ತು ನಿಮ್ಮ ಪ್ರೇಯಸಿ ಅಥವಾ ಪ್ರಿಯಕರನ ನಡುವೆ ತಂದಿಡುವ ಕೆಲಸ ಮಾಡಬಹುದಾಗಿದೆ ಆದ್ದರಿಂದ ಪರಸ್ಪರ ನಂಬಿಕೆಯಿಂದ ಇದ್ದರೆ ನಿಮ್ಮ ಬದುಕು ಸುಂದರವಾಗಿ ಇರುತ್ತದೆ.

%d bloggers like this: