ಈ ರಾಶಿಯವರಿಗೆ ಗುರುಬಲ ಇದ್ದು ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ

ಕುಂಭ ರಾಶಿಯವರಿಗೆ 2021 ವರ್ಷ ಒಳ್ಳೆಯ ಅವಕಾಶವನ್ನು ಒದಗಿಸುತ್ತದೆ. ಇನ್ನು ಈ ರಾಶಿಯ ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದಿಂದ ವಿದ್ಯಾ ಸಂಪತ್ತಾಗುತ್ತದೆ. ಇವರಿಗೆ ಗುರುಬಲ ಇರುವುದರಿಂದ ಜೀವನದಲ್ಲಿ ಏನಾದರೂ ಸಾಧನೆ ಮಾಡುವ ಅವಕಾಶವಿರುತ್ತದೆ, ಕುಟುಂಬದಲ್ಲಿ ಅಭಿವೃದ್ಧಿ ಕಂಡು ಹಣಕಾಸಿನ ಪರಿಸ್ಥಿತಿ ಉತ್ತಮವಾಗುತ್ತದೆ. ಭೂಮಿ, ಕೃಷಿ ಜಮೀನು ಖರೀದಿ ಮಾಡುವ ಯೋಗವಿದೆ. ಆದರೆ ನಿಮ್ಮ ಆರೋಗ್ಯದಲ್ಲಿ ಎಚ್ಚರವಹಿಸಬೇಕು. ಮನೆಯ ಹಿರಿಯ ಸದಸ್ಯರನ್ನು ಜಾಗೃತಿಯಿಂದ ನೋಡಿಕೊಳ್ಳಬೇಕು. ಇನ್ನು ಕೋರ್ಟು ಕಚೇರಿ ವ್ಯಾಜ್ಯಗಳಿಗೆ ಸಾಕ್ಷಿಯಾಗಬೇಡಿ ಇದರಿಂದ ಅಪಾಯ ಹೆಚ್ಚಾಗಿರುತ್ತದೆ. ವ್ಯಾಪಾರದಲ್ಲಿ ಅಧಿಕ ಲಾಭವಾದರು ಸಹ ಅಧಿಕ ಖರ್ಚು ಆದ್ದರಿಂದ ಅನಾವಶ್ಯಕ ಖರ್ಚು ಕಡಿಮೆಮಾಡಿ.

ನಿಮ್ಮ ರಾಶಿಯಲ್ಲಿ ಸಾಡೇಸಾತಿ ನಡೆಯುತ್ತಿರುವುದರಿಂದ ನೀವು ಹಣದಾಸೆಗೆ ಅನ್ಯಾಯದ ಮಾರ್ಗವನ್ನು ಅನುಸರಿಸಲು ಹೋಗಬೇಡಿ, ಇದರಿಂದ ಅಪಾಯವು ಹೆಚ್ಚಾಗಿರುತ್ತದೆ ಭವಿಷ್ಯದ ಬಗ್ಗೆ ಹೆಚ್ಚು ಗಮನ ಕೊಡಿ ದುಷ್ಟ ಜನರೊಂದಿಗೆ ವಾದ ಮಾಡಲು ಹೋಗಬೇಡಿ ಆದಷ್ಟು ಅವರಿಂದ ದೂರವಿರಲು ಪ್ರಯತ್ನಿಸಿ. ಈ ದುಷ್ಟ ಜನರಿಂದ ಮಾನನಷ್ಟ ಆಗುವುದರ ಜೊತೆಗೆ ಧನ ನಷ್ಟವಾಗುವುದು ಆದ್ದರಿಂದ ಯಾವುದೇ ಕಾರಣಕ್ಕೂ 2021ವರ್ಷದಲ್ಲಿ ನೀವು ಯಾರಿಗೂ ಸಹಾಯ ಮಾಡಲು ಹೋಗಬೇಡಿ. ಇದರಿಂದ ನೀವು ಸಂಕಷ್ಟಕ್ಕೆ ಸಿಲುಕಬಹುದಾಗಿದೆ, ನಿಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ ನಿಮ್ಮ ಸ್ವಂತ ಕಾರ್ಯಗಳಲ್ಲಿ ಜಯ ಸಾಧಿಸುತ್ತೀರಿ. ಕೆಲವು ಸಮಸ್ಯೆಗಳಿಗೆ ಪರಿಹಾರ ಧನ್ವಂತರಿ ಹೋಮ ಮಾಡಿಸಿ ಹಾಗೂ ಜನರ ಕೆಟ್ಟ ದೃಷ್ಠಿಯಿಂದ ಮುಕ್ತಿ ಪಡೆಯಲು ನೀಲ ಧಾರಣೆ ಮಾಡಿ ಎಂದು ಜ್ಯೋತಿಷ್ಯರು ತಿಳಿಸುತ್ತಾರೆ. ಒಟ್ಟಾರೆಯಾಗಿ ಈ ಕುಂಭ ರಾಶಿಯವರಿಗೆ ಈ ವರ್ಷ ಮಧ್ಯಮ ಫಲವಾಗಿದೆ.

%d bloggers like this: