ಈ ರಾಶಿಯವರಿಗೆ ಹಠ ಹೆಚ್ಚು ಆದರೆ ಅಂದುಕೊಂಡ ಕೆಲಸ ಮಾಡಿಯೇ ತೀರುತ್ತಾರೆ

ಮೇಷ ರಾಶಿಯವರ ಬಗ್ಗೆ ತಿಳಿಯುವುದಾದರೆ ಈ ಮೇಷ ರಾಶಿಯವರು ಅಶ್ವಿನಿ ನಕ್ಷತ್ರದ ನಾಲ್ಕನೇ ಪಾದ, ಭರಣಿ ನಕ್ಷತ್ರದ ನಾಲ್ಕನೆ ಪಾದ ಮತ್ತು ಕೃತಿಕ ನಕ್ಷತ್ರದ 1ನೇ ಪಾದ ಸೇರಿ ಮೇಷ ರಾಶಿಯಾಗುತ್ತದೆ. ಈ ರಾಶಿಯ ಅಧಿಪತಿಯು ಕುಜ ಗ್ರಹ ಆಗಿರುವುದರಿಂಧ ಮೇಷ ರಾಶಿಯವರಿಗೆ ಹಠ ಹೆಚ್ಚಾಗಿರುತ್ತದೆ. ಜಾತಕದಲ್ಲಿನ ಲಗ್ನ, ನವಾಂಶ ಕುಂಡಲಿಯನ್ನು ನೋಡಿ ರಾಶಿಯ ಫಲಾಫಲಗಳನ್ನು ಹೇಳಬೇಕು. ಆದರೆ ಈ ರಾಶಿಯವರಲ್ಲಿ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳೆಂದರೆ ಇವರು ರೂಪವಂತರಾಗಿರುತ್ತಾರೆ. ಕೆಲವರು ಕಪ್ಪಾಗಿದ್ದರೂ ಸಹ ಆಕರ್ಷಕವಾಗಿ ಇತರರನ್ನು ಸೆಳೆಯುತ್ತಾರೆ. ಇವರಿಗೆ ಆತ್ಮವಿಶ್ವಾಸ ಹೆಚ್ಚಾಗಿದ್ದು ಇವರು ಎಂದಿಗೂ ಸಹ ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ ಯಾರ ಮುಂದೆಯೂ ಸಹ ತಪ್ಪು ಮಾಡದೇ ತಲೆ ತಗ್ಗಿಸುವುದಿಲ್ಲ.

ಇವರು ಸೌಂದರ್ಯ ಪ್ರಿಯರು ಆಗಿದ್ದು ಸೌಂದರ್ಯವನ್ನು ಆರಾಧಿಸುತ್ತಾರೆ, ಇವರು ಬಹಳ ಹಠಮಾರಿತನದ ವ್ಯಕ್ತಿತ್ವ ಉಳ್ಳವರಾಗಿರುತ್ತಾರೆ. ಮುಂಗೋಪ ಹೊಂದಿದ್ದರು ಸಹ ನ್ಯಾಯ, ನೀತಿ, ಧರ್ಮಕ್ಕೆ ಪ್ರಾಧಾನ್ಯವನ್ನು ನೀಡುವವರಾಗಿರುತ್ತಾರೆ. ಯಾವುದೇ ಕೆಲಸವನ್ನು ಪೂರ್ಣಗೊಳಿಸು ತನಕ ಮಧ್ಯಂತರದಲ್ಲಿ ನಿಲ್ಲಿಸುವುದಿಲ್ಲ. ತಮ್ಮ ಗುರಿ ತಲುಪಲು ಸಂಕಲ್ಪ ಮಾಡಿರುತ್ತಾರೆ. ಇವರಿಗೆ ಎಷ್ಟೇ ಅಡ್ಡಿ ಆತಂಕ ಎದುರಾದರೂ ಸಹ ಅದನ್ನು ನಿಶ್ಚಿಂತೆಯಿಂದ ಎದುರಿಸಿರುತ್ತಾರೆ ಗೆಲ್ಲುತ್ತಾರೆ.

ಮೇಷ ರಾಶಿಯವರಿಗೆ ಹೆಚ್ಚು ಸ್ನೇಹಿತರಿದ್ದರೂ ಕೂಡ ಅಷ್ಟಾಗಿ ಯಾರನ್ನು ಸಹ ನಂಬುವುದಿಲ್ಲ. ಇವರುವಿವಾಹ ಪೂರ್ವಕ್ಕಿಂತ ಹೆಚ್ಚಾಗಿ ವಿವಾಹದ ನಂತರ ಉತ್ತಮ ಪ್ರಗತಿ ಕಾಣುತ್ತಾರೆ. ಸಾಮಾನ್ಯವಾಗಿ ಮೇಷ ರಾಶಿಯವರಿಗೆ ಮದುವೆಯಾದ ನಂತರ ಅದೃಷ್ಟ ಒಲಿಯುತ್ತದೆ. ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸ್ಥಿರವಾಗಿ ಯೋಚಿಸುವುದಿಲ್ಲ ಗೊಂದಲ ಇವರನ್ನು ಕಾಡುತ್ತದೆ. ಇವರು ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡಲು ಇಚ್ಛಿಸುವುದಿಲ್ಲ,ಸ್ವಾವಲಂಬಿಯಾಗಿ ಬದುಕಲು ಇಷ್ಟಪಡುತ್ತಾರೆ. ಕೆಲವೊಮ್ಮೆ ಅನಿವಾರ್ಯತೆ ಕಾರಣಗಳಿಂದಾಗಿ ತಿಂಗಳ ಸಂಬಳಕ್ಕಾಗಿ ದುಡಿಯುತ್ತಾರೆ ಆದರೆ ಇವರು ಅಂತಿಮವಾಗಿ ನಿಲ್ಲುವುದು ತಮ್ಮ ಸ್ವಯಂ ಉದ್ಯೋಗದಿಂದ, ವ್ಯಾಪಾರ ವ್ಯವಹಾರಗಳ ಮೂಲಕ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ.

ಇವರಿಗೆ ಸಾಮಾನ್ಯವಾಗಿ ಕೋಪ ಬರುವುದಿಲ್ಲ ಅಕಸ್ಮಿಕವಾಗಿ ಬಂದರೆ ಅವರ ಕೋಪ ಬಹಳ ಕೆಟ್ಟದ್ದಾಗಿರುತ್ತದೆ, ಏಕೆಂದರೆ ಇವರು ಅಗ್ನಿತತ್ವ ರಾಶಿಯವರಾಗಿರುತ್ತಾರೆ. ಕೆಲವೊಮ್ಮೆ ಇವರು ತಮ್ಮ ಕೋಪದಿಂದ ಅದೃಷ್ಟವನ್ನು ಕಳೆದುಕೊಳ್ಳುವ ಸಂದರ್ಭ ಇರುತ್ತದೆ ಆದ್ದರಿಂದ ಕೋಪದಲ್ಲಿ ತುಸು ಎಚ್ಚರವಹಿಸಬೇಕು. ಇವರು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಸಾರ್ಥಕತೆಯ ಜೀವನ ನಮ್ಮದಾಗಬೇಕು ಎಂಬ ಆದರ್ಶ, ಸಿದ್ಧಾಂತಗಳನ್ನು ರೂಢಿಸಿಕೊಂಡಿರುತ್ತಾರೆ಼.

ಇವರಲ್ಲಿ ನಾಯಕತ್ವದ ಗುಣವಿರುತ್ತದೆ ಧಾರ್ಮಿಕ ನಂಬಿಕೆಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ದೈವಭಕ್ತಿ ಹೆಚ್ಚಾಗಿದ್ದು ಇವರಿಗೆ ಹವಳ, ಕನಕ, ಪುಷ್ಪರಾಗ, ಮಾಣಿಕ್ಯ ಅದೃಷ್ಟ ತರುವಂತಹ ರತ್ನಗಳಾಗಿವೆ. ಇವರಿಗೆ ಬಿಳಿ ಮತ್ತು ಕೆಂಪು ಬಣ್ಣಗಳು ಅದೃಷ್ಟ ತಂದು ಕೊಡುತ್ತವೆ. ಇನ್ನು ಇವರಿಗೆ ಭಾನುವಾರ ಮತ್ತು ಮಂಗಳವಾರ ಅದೃಷ್ಟದ ದಿನಗಳಾಗಿದ್ದು, ಹನುಮಂತ ಮತ್ತು ಸುಬ್ರಹ್ಮಣ್ಯ ಅದೃಷ್ಟದ ದೇವರಾಗಿವೆ.

ಇವರಿಗೆ 6 ಮತ್ತು 9ಅದೃಷ್ಟ ಸಂಖ್ಯೆಗಳಾಗಿದ್ದು ಇವರು ಸಿಂಹ ರಾಶಿ, ತುಲಾ ಮತ್ತು ಧನು ರಾಶಿಯವರೊಂದಿಗೆ ವಿವಾಹವಾದರೆ ಅದೃಷ್ಟ ಲಭಿಸುತ್ತದೆ. ಇವರು ಎದುರಿಗಿರುವ ವ್ಯಕ್ತಿಯ ಕೆಟ್ಟತನವನ್ನು ನೇರವಾಗಿ ಹೇಳುವುದರಿಂದ ಹಲವರಿಗೆ ಇವರು ನಿಷ್ಠುರವಾಗಿ ಕಾಣುತ್ತಾರ. ರಾಜಕೀಯ ಜೀವನದಲ್ಲಿ ಉತ್ತಮ ಭವಿಷ್ಯವಿದೆ. ಇವರು ಸರಳ ವ್ಯಕ್ತಿತ್ವದವರಾಗಿದ್ದರು ಎಲ್ಲರಿಗೂ ಅಚ್ಚು ಮೆಚ್ಚು. ಸತ್ಯಕ್ಕೆ ಬೆಲೆ ನೀಡುತ್ತಾರೆ, ಮಾನವೀಯ ಮೌಲ್ಯಗಳಿಗೆ ಹೆಚ್ಚು ಮಹತ್ವ ಪ್ರಾಮುಖ್ಯ ನೀಡುತ್ತಾರೆ. ಈ ಮೇಷ ರಾಶಿಯವರು ತಮ್ಮ ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಹಾಗು ಸಂದಿಗ್ದ ಪರಿಸ್ಥಿತಿಯನ್ನು ಹೊರತುಪಡಿಸಿ ಯಾರಲ್ಲೂ ಸಹ ಸಹಾಯ ಪಡೆಯುಲು ಹೋಗುವುದಿಲ್ಲ.

%d bloggers like this: