ಈ ರಾಶಿಯವರಿಗೆ ಸ್ವಲ್ಪ ಬೇಜವಬ್ದಾರಿ ಜಾಸ್ತಿ ಆದರೆ ಬೆಂಬಲ ಸಿಕ್ಕರೆ ಮಾತ್ರ ಇವರ ಸಾಧನೆ ಹೇಳತೀರದ್ದು

ನಿಮಗೆ ಕರ್ಕಾಟಕ ರಾಶಿಯವರ ವ್ಯಕ್ತಿತ್ವದ ಗುಣಲಕ್ಷಣಗಳ ಬಗ್ಗೆ ತಿಳಿಯುವುದಾದರೆ ಇವರು ಹಾಸ್ಯ ಪ್ರಜ್ಞೆವುಳ್ಳವರಾಗಿರುತ್ತಾರೆ ಸದಾ ತನ್ನ ವಾತವರಣದಲ್ಲಿ ಸುತ್ತಮುತ್ತಲಿನ ಸ್ನೇಹಿತರು, ಬಂಧುಬಳಗದವರನ್ನುಖುಷಿಯಿಂದಿರಲು ಇಷ್ಟ ಪಡುತ್ತಾರೆ ಇವರು ಖುಷಿಯಿಂದ ಇದ್ದಾಕ್ಷಣ ಇವರಿಗೆ ಕಷ್ಟ ನೋವಿಲ್ಲ ಅಂತೇನಿಲ್ಲ ಎಲ್ಲವನ್ನು ತಾವೇ ಅನುಭವಿಸಿ ಸದಾ ಮಂದಹಾಸ ದಿಂದಇರಲುಇಷ್ಟಪಡುತ್ತಾರೆ. ಇವರು ಇತರರೊಂದಿಗ ತಮ್ಮ ನೋವನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಈ ಕರ್ಕಾಟಕ ರಾಶಿಯ ವ್ಯಕ್ತಿಗಳು ಭಾವನಾತ್ಮಕ ಜೀವಿಯಾಗಿರುತ್ತಾರೆ‌. ಇವರು ತಮ್ಮವರನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ತಮ್ಮ ಸಂಗಾತಿ ಬೇಕು ಬೇಡಗಳನ್ನು ಅವರ ಕಣ್ಣೋಟದಿಂದಲೆ ಅರ್ಥಮಾಡಿಕೊಳ್ಳುತ್ತಾರೆ, ಒಮ್ಮೆ ಯಾರಾದರೊಂದಿಗೆ ಭಾಂಧವ್ಯಕ್ಕೆ ಕಟ್ಟುಬಿದ್ದರೆ ತುಂಬಾ ಅಚ್ಚುಕೊಳ್ಳುತ್ತಾರೆ.

ಹೆಚ್ಚು ಒಂಟಿ ಪ್ರಯಾಣ ಮಾಡಲು ಇಷ್ಟಪಡುತ್ತಾರೆ ಆದರೆ ಇವರು ಹಗಲುಗನಸು ಕಾಣುವುದು ಹೆಚ್ಚು ಆದ್ದರಿಂದ ಇವರಿಗೆ ಆಲಸ್ಯತನ ಇರುತ್ತದೆ‌. ಅಂದುಕೊಂಡ ಕೆಲಸವನ್ನು ಸಮಯಕ್ಕೆತಕ್ಕ ಹಾಗೆ ನಿರ್ವಹಿಸುವುದಿಲ್ಲ. ಸಮಯಪ್ರಜ್ಞೆ ಇರುವುದಿಲ್ಲ ಅನಾವಶ್ಯಕ ಕಾಲಾಹರಣ ಮಾಡುತ್ತಾರೆ. ಈ ಕರ್ಕಾಟಕ ರಾಶಿಯವರು ಬೇಜವಬ್ದಾರಿತನ ವ್ಯಕ್ತಿಯಾಗಿದ್ದರು ಸಹ ಇವರಿಗೆ ಬೆಂಬಲವಾಗಿ ಪ್ರೋತ್ಸಾಹ ನೀಡುವಂತಹ ವ್ಯಕ್ತಿ ಸಿಕ್ಕರೆ ಇವರು ಜೀವನದಲ್ಲಿ ಮಹತ್ತರವಾದ ಸಾಧನೆ ಮಾಡುತ್ತಾರೆ, ಇವರು ಹುಟ್ಟಿದ ಮನೆಯಲ್ಲಿ ಬಡತನದ ದಾರಿದ್ರ್ಯತನ ನಿರ್ಮೂಲನೆವಾಗುತ್ತದೆ.

ಇನ್ನು ಇವರಿಗೆ ಕೈಯಿಡಿಯುವ ವ್ಯಾಪಾರ ಎಂದರೆ ವಾಟರ್ ಬ್ಯುಸಿನೆಸ್, ಸಾರಿಗೆಸಂಪರ್ಕ, ಲಾಜಿಸ್ಟಿಕ್, ಹೋಟೆಲ್ ಉದ್ಯಮ ಮತ್ತು ಹಾಸ್ಪಿಟಾಲಿಟಿ ಉದ್ಯಮದಲ್ಲಿ ಉತ್ತಮ ಧನಲಾಭ ಆಗುತ್ತದೆ. ಇವರು ಸ್ತ್ರೀರೋಗಕ್ಕೆ ಸಂಬಂಧಪಟ್ಟಂತೆ ಉನ್ನತ ಅಧ್ಯಾಯನದಲ್ಲಿ ಹೆಚ್ಚು ಪ್ರಗತಿ ಕಾಣುತ್ತಾರೆ ಎನ್ನಬಹುದಾಗಿದೆ. ನಿಮಗೆ ಹೊಂದಾಣಿಕೆ ಆಗುವ ರಾಶಿ ವ್ಯಕ್ತಿಗಳೆಂದರೆ ಸಿಂಹ, ವೃಶ್ಚಿಕ, ಮೀನ ರಾಶಿಯವರು ನಿಮಗೆ ಹೊಂದಾಣಿಕೆ ಆಗುತ್ತಾರೆ ಎನ್ನಬಹುದಾಗಿದೆ. ಕರ್ಕಾಟಕ ರಾಶಿಯವರಿಗೆ 1,3,5,6 ಅದೃಷ್ಟದ ಸಂಖ್ಯೆಗಳಾಗಿವೆ.

ಇನ್ನು ನಿಮ್ಮ ನ್ಯುನತೆ ಮತ್ತು ಸಾಮರ್ಥ್ಯ ಅಂದರೆ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಮನೋಭಾವವೇ ನಿಮ್ಮನ್ನು ಕೈಹಿಡಿಯುತ್ತದೆ ಆದರೆ ನಿಮ್ಮ ಈ ಉದಾರ ಮನಸ್ಸಿನ ಗುಣವನ್ನೆ ಕೆಲವರು ದುರುಪಯೋಗಪಡಿಸಿಕೊಳ್ಳುತ್ತಾರೆ, ಆದ್ದರಿಂದ ನಿಮ್ಮ ನಿಯತ್ತೆ ನಿಮಗೆ ಮುಳುವಾಗುತ್ತದೆ. ನಿಮಗೆ ಅದೃಷ್ಟ ತರುವ ಬಣ್ಣಗಳು ಬಿಳಿ, ಗಂಧದ ಬಣ್ಣ, ಆದರೆ ನೀವು ಯಾವುದೇ ಕಾರಣಕ್ಕೂ ಕಪ್ಪು ಮತ್ತು ಕೆಂಪು ಬಣ್ಣವನ್ನು ಧರಿಸಬೇಡಿ. ಪರಿಹಾರಕ್ಕಾಗಿ ನಿಮ್ಮ ಕಿರುಬೆರಳಿನ ಉಬ್ಬಿನ ಭಾಗದಲ್ಲಿ ಹಸಿರು ಬಣ್ಣದ ಲೇಖನಿಯಿಂದ 5ರ ಸಂಖ್ಯೆ ಬರಹ ಬರೆದುಕೊಳ್ಳುವುದರಿಂದ ಶುಭವಾಗುತ್ತದೆ ಎಂದು ಸಂಖ್ಯಾಶಾಸ್ತ್ರಜ್ಞರು ತಿಳಿಸುತ್ತಾರೆ.

%d bloggers like this: