ಈ ರಾಶಿಯವರು ಅಗ್ನಿತತ್ವ ರಾಶಿಯವರು ಯಾವುದರಲ್ಲೂ ಹಿಂದೆ ಸರಿಯಲ್ಲ, ಧೈರ್ಯವಾಗಿ ಎದುರಿಸುತ್ತಾರೆ

ಸಿಂಹ ರಾಶಿಯವರ ವ್ಯಕ್ತಿತ್ವ ಗುಣಗಳು ಇತರರಿಗೆ ಆದರ್ಶವಾಗಿರುತ್ತಾರೆ, ಇವರು ಅಗ್ನಿತತ್ವ ರಾಶಿಯವರಾಗಿದ್ದು ಇವರಿಗೆ ಸೂರ್ಯ ಗ್ರಹವು ಅಧಿಪತಿ ಗ್ರಹನಾಗುತ್ತಾನೆ. ಈ ಸಿಂಹ ರಾಶಿಯವರು ಸಾಮಾನ್ಯವಾಗಿ ಸುಂದರ ಮತ್ತು ಆಕರ್ಷಣೀಯ ವ್ಯಕ್ತಿತ್ವ ಗುಣಗಳನ್ನು ಹೊಂದಿದವರಾಗಿರುತ್ತಾರೆ‌. ಉದಾರತೆಯ
ಮನೋಭಾವ ಹೊಂದಿರುತ್ತಾರೆ. ಈ ಸಿಂಹರಾಶಿಯವರು ಧೈರ್ಯವಂತರು ಜೀವನದಲ್ಲಿ ಎಂತಹ ಕಠಿಣ ಸಂಧರ್ಭ ಬಂದರು ಸಹ ಅದನ್ನು ಆತ್ಮವಿಶ್ವಾಸದಿಂದ ಎದುರಿಸಿ ಗೆಲ್ಲುತ್ತಾರೆ, ತನ್ನ ಮಿತ್ರರನ್ನು ಬಂಧು ಬಳಗದವರನ್ನು ಹೆಚ್ಚು ನಂಬುತ್ತಾರೆ. ಆರ್ಥಿಕವಾಗಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾರೆ. ಇವರಿಗೆ ಗೌರವ ಪ್ರಮುಖವಾಗಿರುತ್ತದೆ. ಇತರರಿಗೆ ಸಲಹೆ ಕೊಡುತ್ತಾರೆ ಹೊರತು ಬೇರೆಯವರಿಂದ ಸಲಹೆ ಪಡೆಯುವುದಿಲ್ಲ.

ಇವರು ಸ್ವಾವಲಂಬಿಯಾಗಿರಲು ಇಷ್ಟ ಪಡುತ್ತಾರೆ, ಇತತರ ಕೈಯಡಿಯಲ್ಲಿ ಕೆಲಸ ಮಾಡಲು ಇಷ್ಟಪಡುವುದಿಲ್ಲ. ತಮ್ಮ ಸ್ವಂತ ಶ್ರಮದಿಂದ ದುಡಿದು ಸಮಾಜದಲ್ಲಿ ಗೌರವ, ಸ್ಥಾನ ಮಾನ, ಯಶಸ್ಸು ಪಡೆಯುತ್ತಾರೆ. ತಾವು ಅಂದುಕೊಂಡ ಕೆಲಸ ಕಾರ್ಯಗಳನ್ನು ನಿರ್ಧಿಷ್ಟ ಸಮಯದಲ್ಲಿ ಮಾಡುತ್ತಾರೆ. ಇವರ ವೈವಾಹಿಕ ಜೀವನದಲ್ಲಿ ಇತರರು ಮಾತನಾಡುವುದನ್ನು ಇವರು ಸಹಿಸಲ್ಲ. ಇವರಜೀವನ ಸಂಗಾತಿ ಇವರ ಬದುಕಲ್ಲಿ ಪ್ರಾಮಾಣಿಕತೆ ಯಿಂದ ಇರುತ್ತಾರೆ. ಅವರನ್ನು ಹೆಚ್ಚು ಕಾಳಜಿಯಿಂದ ಚೆನ್ನಾಗಿ ನೋಡಿಕೊಳ್ಳುತ್ತಾರೆ.

ಈ ಸಿಂಹರಾಶಿಯವರು ಆರ್ಥಿಕತೆಯ ವಿಚಾವಾಗಿ ತನ್ನ ತಂದೆಯೊಂದಿಗೆ ಮನಸ್ತಾಪ ಹೊಂದುತ್ತಾರೆ, ಐಷರಾಮಿ ಜೀವನ ನಡೆಸಲು ಬಯಸುತ್ತಾರೆ. ಸಮಾಜದಲ್ಲಿ ತನ್ನದೆಯಾದಂತಹ ಹೆಸರನ್ನು ಸಂಪಾದಿಸುತ್ತಾರೆ. ಇವರಿಗೆ ಇನ್ನೊಬ್ಬರ ಮೇಲೆ ಪ್ರಾಬಲ್ಯ ಸಾಧಿಸುವುವ ಗುಣವಿದ್ದು ನಾನು ನನ್ನದು ಎಂಬ ಅಹಂ ಇರುತ್ತದೆ. ಇವರಿಗೆ ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿಯಿದ್ದರು ಬೂಟಾಟಿಕೆ ಇಷ್ಷಪಡುವುದಿಲ್ಲ. ಇನ್ನು ಈ ಸಿಂಹ ರಾಶಿಯವರು ಸಾಮಾನ್ಯವಾಗಿ ಕೋಪ ಮಾಡಿಕೊಳ್ಳುವುದಿಲ್ಲ. ಆದರೆ ಇವರ ಕೋಪ ತುಂಬಾ ಕೆಟ್ಟದಾಗಿರುತ್ತದೆ. ಇವರು ಶಿಕ್ಷಣ ರಾಜಕೀಯ, ಸಿನಿಮಾ ಕ್ಷೇತ್ರಗಳಲ್ಲಿ ವ್ಯವಸಾಯ ಕ್ಷೇತ್ರಗಳಲ್ಲಿ ಯಶಸ್ಸು ಪಡೆಯುತ್ತಾರೆ. ಕೆಲವು ದೋಷ ಪರಿಹಾರಕ್ಕಾಗಿ ಸೂರ್ಯನಮಸ್ಕಾರ ಮಾಡಿದರೆ ಒಳಿತಾಗುತ್ತದೆ, ತಂದೆ ತಾಯಿ ಸೇವೆ ಮಾಡಿ ನಿಮಗೆ ಸಕಲ ಆಯುಷ್ಯ ಆರೋಗ್ಯ ಸಂಪತ್ತು ವೃದ್ಧಿಯಾಗುತ್ತದೆ.

%d bloggers like this: