ಈ ರಾಶಿಯವರು ಹುಟ್ಟುತ್ತಲೇ ಶ್ರೀಮಂತ ಧನಿಕರಾಗಿ ಹುಟ್ಟಿರುವರು

ರಾಶಿ ಚಕ್ರಗಳಲ್ಲಿ ವಿಶೇಷವಾಗಿ ವೃಶ್ಚಿಕ ಇತರೆ ರಾಶಿಗಳಿಗಿಂತ ಭಿನ್ನವಾದುದು, ಅನುರಾಧ ನಕ್ಷತ್ರದ 1,2,3,4 ಪಾದಗಳು ಮತ್ತು ಜ್ಯೇಷ್ಠ ನಕ್ಷತ್ರದ 1,2,3,4 ಪಾದಗಳು ಒಳಗೊಂಡು ವೃಶ್ಚಿಕ ರಾಶಿ ಸೇರಿರುತ್ತದೆ. ಈ ವೃಶ್ಚಿಕ ರಾಶಿಯವರು ಕಾಲಪುರುಷನ ಎಂಟನೇ ಮನೆಯಲ್ಲಿ ಸ್ಥಾನ ಅಲಂಕರಿಸಿರುತ್ತಾರೆ. ಆದ್ದರಿಂದ ಇವರು ರಾಜಕಾರ್ಯದಲ್ಲಿ ತತ್ಪ ರಾಗಿರುತ್ತಾರೆ, ಯಾವುದೇ ಸಮಸ್ಯೆಗಳು ತೊಂದರೆಗಳು ಎದುರಾದಾಗ ನಿಕೃಷ್ಠ ಸ್ಥಿತಿ ತಲುಪಿದರು ಕೂಡ ಧೈರ್ಯಧಿಂದ ಎದುರಿಸುವಂತಹ ಶೂರರಾಗಿರುತ್ತಾರೆ ಮತ್ತೆ ಅವರು ತಮ್ಮ ಜೀವನದಲ್ಲಿ ಕಳೆದುಕೊಂಡ ಅಷ್ಟ ವೈಭೋಗ ಸಿರಿ ಸಂಪತ್ತುಗಳನ್ನು ಗಳಿಸಿಕೊಳ್ಳುತ್ತಾರೆ.

ಇವರು ಮೃದು ಸ್ವಭಾವ ದರಾಗಿದ್ದು ಮನುಷ್ಯತ್ವ, ಮಾನವೀಯ ಮೌಲ್ಯಗಳಿಗೆ ಹೆಚ್ಚು ಬೆಲೆ ನೀಡುತ್ತಾರೆ. ಇವರು ಅನಾವಶ್ಯಕವಾಗಿ ಹೆಚ್ಚು ವಾದ ವಿವಾದ ಮಾಡಲು ಬಯಸುವುದಿಲ್ಲ. ಜೀವನದಲ್ಲಿ ಅವರದೇ ಆದಂತಹ ನಿರ್ದಿಷ್ಟ ಗುರಿಯನ್ನು ತಲುಪಲು, ಕೀರ್ತಿ ಸಂಪಾದಿಸಲು ಸದಾ ಯೋಜನೆ ಹಾಕಿಕೊಂಡು ಕಾರ್ಯ ಪ್ರವೃತ್ತರಾಗಿರುತ್ತಾರೆ. ಇವರು ಹುಟ್ಟುತ್ತಲೆ ಶ್ರೀಮಂತರಾಗಿ ಧನಿಕರಾಗಿ ಜನಿಸುತ್ತಾರೆ. ಆದರೆ ಜೀವನದ ನಡುವೆ ಕೆಟ್ಟ ಗಳಿಗೆ ಸಂಭವಿಸಿ ಇರುವ ಶ್ರೀಮಂತಿಕೆಯನ್ನು ಕಳೆದುಕೊಳ್ಳುವ ದುರಾದೃಷ್ಟ ಇವರದ್ದು, ಆದರೆ ಮತ್ತೆ ತಮ್ಮ ವಿದ್ಯೆ, ಬುದ್ದಿಶಕ್ತಿಯಿಂದ ಅದನ್ನೆಲ್ಲಾ ಗಳಿಸಿಕೊಳ್ಳುತ್ತಾರೆ. ಇವರು ವಿದೇಶದಲ್ಲಿ ಉದ್ಯೋಗ ಪಡೆಯುವಂತಹ ಯೋಗವನ್ನು ಪಡೆದಿದಿರುತ್ತಾರೆ.

ವೃಶ್ಚಿಕ ನಕ್ಷತ್ರದ ಅನುರಾಧ ನಕಷತ್ರದವರಿಗೆ ಅಷ್ಟಾಗಿ ಶತ್ರುಗಳು ಇರುವುದಿಲ್ಲ ಇವರು ಅಜಾತಶತ್ರುವಾಗಿ ಜೀವನ ನಡೆಸುತ್ತಾರೆ, ಆದರೆ ಕೆಲವೊಮ್ಮೆ ಇವರಿಗೆ ಇವರ ಯಶಸ್ಸನ್ನು, ಪ್ರಗತಿ ನೋಡಿ ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಆದರೂ ಸಹ ಆ ಶತ್ರುಗಳನ್ನು ಗೆಲ್ಲುತ್ತಾರೆ. ಈ ರಾಶಿಯವರಿಗೆ ಗುರು ಮತ್ತು ಶನಿ ಸಂಯೋಗ ವಾಗುವುದರಿಂದ ಸತ್ಯ, ಧರ್ಮವನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಹೋಗುವಂತಹ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರು ಹೆಚ್ಚು ಲಾಜಿಕ್ ಆಗಿ ಯೋಚನೆ ಮಾಡುತ್ತಾರೆ. ಯಾರನ್ನು ಕೂಡ ಅಷ್ಟು ಸುಲಭವಾಗಿ ನಂಬುವುದಿಲ್ಲ ಸದಾ ಎಚ್ಚರದಿಂದ ಇರುತ್ತಾರೆ ಇವರು ಭ್ರಮಾಲೋಕದಲ್ಲಿ ಬದುಕುವುದಿಲ್ಲ ಹೆಚ್ಚು ವಾಸ್ತವಕ್ಕೆ ಒತ್ತನ್ನು ನೀಡುತ್ತಾರೆ.

ಇವರು ಹೆಚ್ಚು ಉಪನ್ಯಾಸಕರು ಬ್ಯಾಂಕು, ಆಡಿಟಿಂಗ್, ಎಂಜಿನಿಯರಿಂಗ್, ಕೃಷಿ ಕ್ಷೇತ್ರದಲ್ಲಿ ಮುಂದಾಳತ್ವ ವಹಿಸುತ್ತಾರೆ. ಇನ್ನು ಇವರಿಗೆ ಧಾರ್ಮಿಕ ವಿಚಾರಗಳಲ್ಲಿ ಅಪಾರ ಆಸಕ್ತಿ ಇದ್ದು ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚು ಭೇಟಿ ನೀಡುತ್ತಾರೆ. ಇವರಿಗೆ 12ವರ್ಷದಿಂದ 43 ವರ್ಷದವರೆಗೆ ಜೀವನದಲ್ಲಿ ಅಪಾರವಾದ ಬದಲಾವಣೆಯನ್ನು ಕಾಣುತ್ತಾರೆ. ಹುಣ್ಣಿಮೆ ಸಂಧರ್ಭದಲ್ಲಿ ಹೊಸ ಯೋಜನೆಗಳನ್ನು ಆರಂಭಿಸಿದರೆ ನಿಮಗೆ ಜಯ ಕಟ್ಟಿಟ್ಟ ಬುತ್ತಿಯಾಗಿರುತ್ತದೆ, ಇವರು ರಾಜಕೀಯ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾಣುತ್ತಾರೆ. ಈ ಅನುರಾಧ ನಕ್ಷತ್ರದವರು ಸಂಶೋಧನಾ ಕ್ಷೇತ್ರದಲ್ಲಿ ಅಪಾರವಾದಂತಹ ವಿಶೇಷ ಸಾಧನೆಯನ್ನು ಮಾಡುತ್ತಾರೆ.

ವೃಶ್ಚಿಕ ರಾಶಿಯ ಅನುರಾಧ ನಕ್ಷತ್ರದಲ್ಲಿ ನಾಲ್ಕನೇ ಪಾದ ದವರಾದರೆ ಕಲೆ ಸಾಹಿತ್ಯ ಮಾಧ್ಯಮ ಕ್ಷೇತ್ರ, ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಗೌರವ ಖ್ಯಾತಿ ಗಳಿಸುತ್ತಾರೆ. ವೃಶ್ಚಿಕ ರಾಶಿಯವರು ಮುಕ್ತವಾಗಿ ಮಾತನಾಡುವಂತಹ ವ್ಯಕ್ತಿತ್ವವುಳ್ಳವರು ಆದ್ದರಿಂದ ಇವರು ತಮ್ಮ ಕೆಲಸಕಾರ್ಯಗಳ ವೈಯಕ್ತಿಕ ವಿಚಾರಗಳ ರಹಸ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ ಇದರಿಂದ ನಿಮಗೆ ತೊಂದರೆ ತಾಪತ್ರಯಗಳು ತಪ್ಪಿದ್ದಲ್ಲ ಆದ್ದರಿಂದ ನಿಮ್ಮ ಯಾವುದೇ ರಹಸ್ಯ ಕಾರ್ಯಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ. ಅದರಲ್ಲೂ ಈ ಹಣಕಾಸಿನ ವಿಚಾರದಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡಲು ಹೋಗಬೇಡಿ ಇದರಿಂದ ನೀವು ಆ ಸಾಲದ ಹೊರೆಯನ್ನು ನೀವು ಹೊತ್ತುಕೊಳ್ಳಬೇಕಾಗುತ್ತದೆ. ಇನ್ನು ಈ ವೃಶ್ಚಿಕ ರಾಶಿಯ ಅನುರಾಧ ನಕ್ಷತ್ರದಲ್ಲಿ ಜನಿಸಿದವರಿಗೆ ಯೋಗ ಮತ್ತು ಯೋಗ್ಯತೆ ಎರಡೂ ಕೂಡ ಇರುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಸುತ್ತಾರೆ.

%d bloggers like this: