ಈ ಸಿಂಹ ರಾಶಿ ಇತರ ರಾಶಿಗಳಿಗಿಂತ ಭಿನ್ನವಾಗಿ ಕಾಣುತ್ತಾರೆ, ಈ ರಾಶಿಯವರಿಗೆ ಯಾವುದರಲ್ಲಿ ಪಕ್ವವಾಗಿರುತ್ತಾರೋ ಅದೇ ಇವರಿಗೆ ಮುಳುವಾಗಿ ಕಾಡುತ್ತದೆ. ಇವರ ಸಾಮರ್ಥ್ಯ ಕೆಲವೊಮ್ಮೆ ಇವರನ್ನು ಸಂಕಷ್ಟಕ್ಕೆ ದೂಡುತ್ತದೆ. ಇವರಿಗೆ ಅತಿ ಬೇಗ ಕೋಪ ಬರುತ್ತದೆ ಆದರೆ ಅಷ್ಟೇ ಶಾಂತ ಮೂರ್ತಿಯಾಗಿರುತ್ತಾರೆ. ಸಿಂಹರಾಶಾಯವರು ಆದಷ್ಟು ಧನಾತ್ಮಕವಾಗಿ ಚಿಂತಿಸುತ್ತಾರೆ. ಆದ್ದರಾಂದಲೇ ಇವರು ಇತರರಿಗೆ ಆಕರ್ಷಕರಾಗಿ ಕಾಣುತ್ತಾರೆ, ಇವರಲ್ಲಿ ನಾಯಕತ್ವದ ಗುಣಗಳು ಇದ್ದು ಇನ್ನೊಬ್ಬರ ಮಾತುಗಳನ್ನು ಕೇಳುವಂತಹ ವ್ಯಕ್ತಿಗಳಾಗಿರುವುದಿಲ್ಲ. ಇವರು ಇತರರಿಗೆ ಆದೇಶ ಮಾಡುತ್ತಾರೆ ಹೊರತು ಇನ್ನೊಬ್ಬರು ಹೇಳಿದ ಕೆಲಸ ಕಾರ್ಯಗಳನ್ನು ಇವರು ಮಾಡುವುದಿಲ್ಲ ಮತ್ತು ಹೆಚ್ಚು ಆತ್ಮ ವಿಶ್ವಾಸ ಹೊಂದಿದವರಾಗಿತ್ತಾರೆ.

ಸ್ವಾಭಿಮಾನ ಹೊಂದಿರುವ ವ್ಯಕ್ತಿಯಾಗಿರುವುದರಿಂದ ಬೇರೆಯವರ ಬಳಿ ಕೈಕಟ್ಟಿ ನಿಲ್ಲುವುದಿಲ್ಲ, ಯಾವುದೇ ವಿಚಾರಕ್ಕಾಗಲಿ, ವ್ಯಕ್ತಿಗಾಗಲಿ ಅಂಜುವುದಿಲ್ಲ. ಸಂಕಷ್ಟ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುವಂತಹ ವ್ಯಕ್ತಿತ್ವ ಇವರದ್ದಾಗಿರುತ್ತದೆ.
ಯಾರಾದರು ಇವರನ್ನು ಕಡೆಗಣಿಸಿದರೆ ಇವರು ಅವರನ್ನು ತುಂಬಾ ದ್ವೇಷಿಸುತ್ತಾರೆ ಜೊತೆಗೆ ಸೇಡನ್ನು ತೀರಿಸಿಕೊಳ್ಳುವರಾಗಿರುತ್ತಾರೆ. ಇವರ ಶಕ್ತಿ ಸಾಮರ್ಥ್ಯವೇ ಇವರಿಗೆ ನ್ಯುನತೆಯಾಗಿ ಕಾಡುತ್ತದೆ. ಇನ್ನು ಇವರಿಗೆ ಆರಾಮದಾಯಕ,ಹೊಂದಾಣಿಕೆ ಆಗುವ ರಾಶಿಗಳೆಂದರೆ ಮಿಥುನ, ತುಲಾ, ಕುಂಭ, ಮೇಷ, ಧನಸ್ಸು ರಾಶಿಯ ವ್ಯಕ್ತಿಗಳು ನಿಮ್ಮ ವ್ಯಕ್ತಿತ್ವಕ್ಕೆ ತಕ್ಕ ಹಾಗೆ ಇರುತ್ತಾರೆ. ಈ ರಾಶಿಯ ಹುಡುಗಿಯರು ನಿಮಗೆ ಬಾಳ ಸಂಗಾತಿಯಾಗಿ ಸಿಕ್ಕರೆ ನಿಮ್ಮ ಬದುಕು ಆದರ್ಶಮಯವಾಗಿ ಜೀವನ ಸುಂದರವಾಗಿ ಇರುತ್ತದೆ.



ಇನ್ನು ಈ ಸಿಂಹ ಅವರಿಗೆ ಅದೃಷ್ಟ ತರುವ ಬಣ್ಣಗಳೆಂದರೆ ಅವು ಹಸಿರು, ಶ್ರೀಗಂಧ, ಕಿತ್ತಳೆ ಬಣ್ಣ ಇವು ಇವರಿಗೆ ಒಳಿತು, ಶುಭಕರ ವಾಗುವಂತಹ ಬಣ್ಣಗಳು. ಆದರೆ ಇವರು ಯಾವುದೇ ಕಾರಣಕ್ಕೂ ಕಡು ನೀಲಿ, ಕಡು ಕಪ್ಪು ಬಣ್ಣದ ಬಟ್ಟೆಗಹನ್ನು ಧರಿಸಬಾರದು, ಈ ಬಣ್ಣದ ವಸ್ತುಗಳನ್ನು ಬಳಸಬಾರದು. ಇವರಿಗೆ ಅದೃಷ್ಟ ತಂದು ಕೊಡುವಂತಹ ಸಂಖ್ಯೆಗಳನ್ನು ತಿಳಿಯುವುದಾದರೆ 1, 3, 5, 9 ಸಂಖ್ಯೆಗಳನ್ನು ಹೆಚ್ಚು ಬಳಕೆ ಮಾಡಿದರೆ ನಿಮಗೆ ಅದೃಷ್ಟ ಒಲಿಯುತ್ತದೆ. ಹಾಗೆ ನಿಮ್ಮ ಬಲಗೈ ಬೆರಳಲ್ಲಿ ಧರಿಸುವ ಉಂಗುರದಲ್ಲಿ 5ಎಂಬ ಚಿಹ್ನೆ ಬಳಸಿದರೆ ಉತ್ತಮವಾಗಿರುತ್ತದೆ.



ಈ ಸಿಂಹ ರಾಶಿಯವರಿಗೆ ಯಶಸ್ಸು ತಂದುಕೊಡುವ ವೃತ್ತಿಗಳು ಅಂದರೆ ವೈದ್ಯಕೀಯ ಕ್ಷೇತ್ರ ವಿಶೇಷವಾಗಿ ಹೃದ್ರೋಗ ತಜ್ಞರಾಗಿ ಪರಿಣತಿ ಹೊಂದಿದರೆ ಹೆಚ್ಚು ಪ್ರಗತಿ ಕಾಣುತ್ತೀರಿ. ಇದರ ಜೊತೆಗೆ ಸರ್ಕಾರಿ ಉದ್ಯೋಗದಲ್ಲಿ ನೀವು ಒಳ್ಳೆಯ ಹೆಸರು ಮಾಡುತ್ತೀರಿ. ಸಾರ್ವಜನಿಕ ಸಂಬಂಧಿತ ವೃತ್ತಿಯಲ್ಲಿ ನೀವು ಯಶಸ್ವಿಯಾಗುತ್ತೀರಿ, ನೀವು ಯೋಜನೆಗಳನ್ನು ಚೆನ್ನಾಗಿ ಮಾಡುವುದರ ಜೊತೆಗೆ ಅಡ್ಮಿನಿಸ್ಟ್ರೇಷನ್ ವಿಭಾಗದಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ಕೆಲವು ದೈನಂದಿನ ಸಮಸ್ಯೆಗಳಿಗೆ ಪ್ರತಿದಿನ ಸೂರ್ಯ ನಮಸ್ಕಾರವನ್ನು ಮಾಡಿದರೆ ಒಳಿತಾಗುತ್ತದೆ ಅದರ ಜೊತೆಗೆ ಪ್ರತಿ ಶನಿವಾರ ಭಾನುವಾರ ವೆಂಕಟೇಶ್ವರನ ದರ್ಶನ ಪಡೆದು ಅರ್ಧ ಕೇಜಿ ಎಷ್ಟು ದಾಳಿಂಬೆಯನ್ನು ನೀಡಿದರೆ ಸಕಲ ಸಂಪತ್ತು, ಆರೋಗ್ಯ ನಿಮ್ಮದಾಗುತ್ತದೆ.