ಈ ಸಲದ ಕ್ರಿಸಮಸ್ ಹಬ್ಬಕ್ಕೆ ಡಿವಿಲಿಯರ್ಸ್ ಜೊತೆ ಹೊಸ ಅತಿಥಿ

ಕ್ರಿಕೆಟ್ ಲೋಕದ ಅಜಾತಶತ್ರು ಎಲ್ಲ ಕ್ರಿಕೆಟ್ ಅಭಿಮಾನಿಗಳು ಇಷ್ಟಪಡುವ ನೆಚ್ಚಿನ ಆಟಗಾರ ಎಂದರೆ ಮೊದಲು ಕಣ್ಣು ಮುಂದೆ ಬರುವುದು ಸೌತ್ ಆಫ್ರಿಕಾ ಕ್ರಿಕೆಟ್ ತಂಡದ ದಂತಕಥೆ ಎಬಿ ಡಿವಿಲಿಯರ್ಸ್. ಹೌದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಸದಸ್ಯರು ಕೂಡ ಎಬಿ ಡಿವಿಲಿಯರ್ಸ್ ಅವರಿಗೆ ಜಗತ್ತಿನಾದ್ಯಂತ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ. ಕ್ರಿಕೆಟ್ ಬಗೆಗಿರುವ ಅವರ ಪ್ರೀತಿ ಅಭಿಮಾನ ಬದ್ಧತೆ ಹಾಗೂ ಕ್ರಿಕೆಟ್ ಅಂಗಳದಲ್ಲಿ ಅವರು ತೋರುವ ಅದ್ಭುತ ಪ್ರದರ್ಶನ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ.

ಸೋಲುವ ಪಂದ್ಯಗಳನ್ನು ಕೂಡ ಅದ್ಭುತವಾಗಿ ಗೆಲ್ಲಿಸುವ ತಾಕತ್ತು ಇರುವುದು ಎಬಿ ಡಿವಿಲಿಯರ್ಸ್ ಅವರಿಗೆ ಮಾತ್ರ. ಕ್ರಿಕೆಟ್ ಅಂಗಳದ ಮೂಲೆಮೂಲೆಗೂ ಬೌಂಡರಿಗಳನ್ನು ಬಾರಿಸುವ ಅವರಿಗೆ ಮಿಸ್ಟರ್ 360 ಎಂದೆ ಕರೆಯಲಾಗುತ್ತದೆ. ಎಬಿ ಡಿವಿಲಿಯರ್ಸ್ ಕೇವಲ ಒಬ್ಬ ಕ್ರಿಕೆಟ್ ಆಟಗಾರ ನಲ್ಲ ಬದಲಾಗಿ ಅವರು ಏನೇನೆಲ್ಲ ಮಾಡುತ್ತಾರೆ ಎಂದು ಈ ಹಿಂದೆ ನೀವು ಹಲವು ಬಾರಿ ಕೇಳಿದ್ದೀರಿ ಮತ್ತು ಓದಿದ್ದೀರಿ. ಇವೆಲ್ಲದಕ್ಕಿಂತ ಮೇಲಾಗಿ ಅವರೊಬ್ಬ ಉತ್ತಮ ಮನುಷ್ಯ ಹಾಗೂ ಮ್ಯಾನ್ ಎಂಬುದು ಬಹುತೇಕ ಜನರಿಗೆ ಗೊತ್ತಿರದೆ ಇರಬಹುದು.

ಬಿಡುವಿನ ಸಮಯದಲ್ಲಿ ತಮ್ಮ ಕುಟುಂಬದವರೊಡನೆಯೆ ಕಾಲಕಳೆಯಲು ಇಷ್ಟಪಡುವ ಅಬ್ರಹಮ್ ಡಿವಿಲಿಯರ್ಸ್ ಪಕ್ಕಾ ಒಬ್ಬ ಕೌಟುಂಬಿಕ ವ್ಯಕ್ತಿ. ಇದೀಗ ಅವರ ಕುಟುಂಬಕ್ಕೆ ಮತ್ತೊಂದು ಸದಸ್ಯರ ಆಗಮನವಾಗಿದೆ. ಹೌದು ಎಬಿ ಡಿವಿಲಿಯರ್ಸ್ ಈಗ ಹೆಣ್ಣುಮಗುವಿನ ಜನನದ ಖುಷಿಯಲ್ಲಿದ್ದಾರೆ. ಈ ಕುರಿತು ಇನ್ಸ್ಟಾ ಗ್ರಾಮಲ್ಲಿ ಸಂತಸ ಹಂಚಿಕೊಂಡಿರುವ ಎಬಿ ಡಿವಿಲಿಯರ್ಸ್ ಅವರು ಈ ವರ್ಷದ ಕ್ರಿಸ್ಮಸ್ ಹಬ್ಬದ ಅತ್ಯದ್ಭುತ ಕೊಡುಗೆ ನನಗೆ ಸಿಕ್ಕಿದೆ ಧನ್ಯವಾದ ಜೀಸಸ್ ಎಂದು ಬರೆದುಕೊಂಡಿದ್ದಾರೆ.

ಮೂರು ಮಕ್ಕಳ ಸುಂದರ ತಂದೆಯಾಗಿ ಖುಷಿಯಲ್ಲಿದ್ದಾರೆ. 2013ರಲ್ಲಿ ಡೇನಿಯಲ್ ಎಂಬುವವರ ಜೊತೆ ವಿವಾಹವಾದ ಎಬಿ ಡಿವಿಲಿಯರ್ಸ್ 2015ರಲ್ಲಿ ಅಬ್ರಾಹಂ ಎಂಬ ಮಗುವಿಗೆ ಹಾಗೂ 2017ರಲ್ಲಿ ಜಾನ್ ರಿಚರ್ಡ್ ಮಗುವಿಗೆ ಜನ್ಮ ನೀಡಿದ್ದರು . 2020ರ ವರ್ಷಾಂತ್ಯದಲ್ಲಿ ಸುಂದರ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದೆ ಈ ಸುಂದರ ದಂಪತಿ. ಒಟ್ಟಾರೆಯಾಗಿ ಕ್ರಿಸಮಸ್ ಹಬ್ಬದ ಸಂಭ್ರಮದ ಜೊತೆಗೆ ಮತ್ತೊಂದು ಮಗುವಿಗೆ ಜನ್ಮ ನೀಡಿದ ಸಂತಸ ಅವರ ಮನೆಯಲ್ಲಿ ಮನೆ ಮಾಡಿದೆ.

%d bloggers like this: