ಈ ಸಮಸ್ಯೆ ಇದ್ದವರು ಬೆಲ್ಲವನ್ನು ಪ್ರತಿದಿನ ಸೇವಿಸಿ, ಬೆಲ್ಲದಿಂದ ಇದೆ ಹಲವಾರು ಉಪಯೋಗಗಳು

ಊಟವಾದ ನಂತರ ಈ ಒಂದು ಕೆಲಸ ನೀವು ಮಾಡಿದ್ರೇ ನಿಮ್ಮ ಆರೋಗ್ಯದಲ್ಲಿ ನೀವು ನೀರೀಕ್ಷೆ ಮಾಡದಷ್ಟು ಉತ್ತಮ ಫಲಿತಾಂಶ ಕಾಣಲಿದ್ದೀರಿ. ಹೌದು ಸಾಮಾನ್ಯವಾಗಿ ಊಟವಾದ ನಂತರ ಎರಡು ಗಂಟೆಯ ಅಂತರದಲ್ಲಿ ನಿದ್ದೆಗೆ ಜಾರಬೇಕು ಎಂದು ಹೇಳಲಾಗುತ್ತದೆ. ಅದರಂತೆ ಅದು ನಮ್ಮ ಉತ್ತಮ ಆರೋಗ್ಯಕ್ಕೆ ಒಳ್ಳೆಯದಾಗಿರುತ್ತದೆ. ಅದೇ ರೀತಿಯಾಗಿ ನಮ್ಮ ಹಿರಿಯರು ಊಟವಾದ ಬಳಿಕ ಎಲೆಅಡಿಕೆ ತಿನ್ನುವ ಹವ್ಯಾಸವನ್ನು ರೂಢಿಸಿಕೊಂಡಿದ್ರು. ಅದೇ ರೀತಿ ಬೆಲ್ಲವನ್ನು ಕೂಡ ತಿನ್ನುವ ಹವ್ಯಾಸ ರೂಡಿಸಿಕೊಂಡಿದ್ರು. ಈಗಲೂ ಕೂಡ ಅನೇಕರು ಊಟವಾದ ಬಳಿಕ ಬೆಲ್ಲವನ್ನು ತಿನ್ನುತ್ತಾರೆ. ಇದರಿಂದ ಆಗುವ ಪ್ರಯೋಜನಗಳು ಅಷ್ಟಿಷ್ಟಲ್ಲ. ಹೌದು ಊಟವಾದ ನಂತರ ಬೆಲ್ಲವನ್ನು ತಿನ್ನುವುದರಿಂದ ನಿಮ್ಮ ಹೊಟ್ಟೆಯ ಬೊಜ್ಜು ಕರಗಲು ಸಹಾಯ ಮಾಡುತ್ತದೆ.

ಬೆಲ್ಲ ತಿನ್ನುವುದು ಕೇವಲ ಸಿಹಿ ಪಧಾರ್ಥ ಅನ್ನುವುದಕ್ಕೆ ಮಾತ್ರ ಅಲ್ಲ. ಅದರಿಂದ ದೇಹದಲ್ಲಿ ಉಂಟಾಗುವ ಕೆಲವು ಖಾಯಿಲೆಗಳಿಂದ ಮುಕ್ತಿ ಪಡೆಯುವುದಕ್ಕಾಗಿಯೂ ಎಂದು ಹೇಳಲಾಗುತ್ತದೆ. ನಮ್ಮ ಹಿರಿಯರು ರೂಡಿಸಿಕೊಂಡು ಬಂದಿದ್ದ ಕೆಲವು ಆಹಾರ ಪಧಾರ್ಥಗಳು ವೈಜ್ಞಾನಿಕವಾಗಿ ಅನೇಕ ಪ್ರಯೋಜನಗಳನ್ನು ನೀಡುತ್ತವೆ. ಇನ್ನು ಊಟವಾದ ಬಳಿಕ ಬೆಲ್ಲವನ್ನು ಸೇವನೆ ‌ಮಾಡುವುದರಿಂದ ದೇಹದಲ್ಲಿ ವಿಪರೀತ ಸುಸ್ತು, ನಿಶ್ಯಕ್ತಿ ಅಂತಹ ಸಮಸ್ಯೆಗಳು ಎದುರಾದಾಗ ಅಂತಹ ಸಮಸ್ಯಗಳಿಗೆ ಈ ಬೆಲ್ಲ ಉತ್ತಮ ರಾಮಬಾಣವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಬಹುದು. ಬೆಲ್ಲವನ್ನು ಸೇವನೆ ಮಾಡುವುದರಿಂದ ಬಹುತೇಕ ದೈಹಿಕ ಎಲ್ಲಾ ಸಮಸ್ಯೆಗಳು ನಿವಾರಣೆ ಆಗಲಿದೆ. ಇನ್ನು ಬ್ಲಡ್ ಪ್ರೆಶರ್ ಇರುವವರು ಈ ಬೆಲ್ಲವನ್ನು ಸೇವಿಸಿದರೆ ಇದು ನಿಮ್ಮ ಬ್ಲಡ್ ಪ್ರೆಶರ್ ಕಂಟ್ರೋಲ್ ಮಾಡುತ್ತದೆ.

ಇನ್ನು ಇಂದಿನ ಆಧುನಿಕ ಜೀವನ ಶೈಲಿ ಮತ್ತು ನಮ್ಮ ಆಹಾರ ಕ್ರಮದಿಂದಾಗಿ ಬಹುತೇಕ ಅನಾರೋಗ್ಯ ತೊಂದರೆಗಳನ್ನು ಎದುರಿಸುತ್ತಿದ್ದೇವೆ. ದೇಹಕ್ಕೆ ಬೇಕಾದ ವಿಟಮಿನ್, ಪ್ರೋಟಿನ್ ಅಂಶಗಳು ಮತ್ತು ಕಬ್ಬಿಣದ ಅಂಶಗಳ ಕೊರತೆಯನ್ನ ಕಾಣುತ್ತೇವೆ. ಅದರಂತೆ ಕಬ್ಬಿಣಾಂಶ ಕೊರತೆ ಇರುವವರು ಊಟವಾದ ಬಳಿಕ ಅಥವಾ ಇನ್ನಿತರ ಸಮಯದಲ್ಲಿ ಪ್ರತಿ ನಿತ್ಯ ಇಂತಿಷ್ಟು ಬೆಲ್ಲವನ್ನು ಸೇವಿಸುತ್ತಾ ಬಂದರೆ ಕಬ್ಬಿಣಾಂಶ ಕೊರತೆಯನ್ನು ಬೆಲ್ಲ ನಿವಾರಿಸುತ್ತದೆ. ಅದರ ಜೊತೆಗೆ ಇತ್ತೀಚಿನ ದಿನಮಾನಗಳಲ್ಲಿ ಅತಿಯಾಗಿ ಕಾಡುವ ಕೀಲು ನೋವಿಗೆ ಈ ಬೆಲ್ಲ ಉತ್ತಮ ಔಷಧಿ ಎಂದು ಹಿರಿಯರು ತಿಳಿಸಿಕೊಟ್ಟಿದ್ದಾರೆ. ಇದನ್ನ ವೈದ್ಯರು ಕೂಡ ಒಪ್ಪಿಕೊಂಡಿದ್ದಾರೆ. ಹಾಗಾಗಿ ಊಟವಾದ ನಂತರ ಬೆಲ್ಲವನ್ನು ಸೇವನೆ ಮಾಡಿದರೆ ನಮ್ಮ ಬಹುತೇಕ ದೈಹಿಕ ಸಮಸ್ಯೆಗಳಿಗೆ ಉತ್ತಮ ಪಧಾರ್ಥವಾಗಿದೆ ಎಂದು ಹೇಳಬಹುದು.

%d bloggers like this: