ಈ ಸ್ಟಾರ್ ನಟಿಗೆ ಪುಷ್ಪಾ ಚಿತ್ರದ ನಟ ಅಲ್ಲು ಅರ್ಜುನ್ ಅವರ ಜೊತೆ ನಟಿಸುವ ಆಸೆಯಂತೆ

ಸ್ಟೈಲಿಂಗ್ ಸ್ಟಾರ್ ಅಲ್ಲು ಅರ್ಜುನ್ ಅವರ ನಟನೆಯ ಪುಷ್ಪ ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಎಲ್ಲ ಕಡೆ ಅಲ್ಲು ಅರ್ಜುನ್ ಅವರ ಅಭಿನಯದ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾ ತನ್ನ ಟೀಸರ್ ನಿಂದ ಸಖತ್ ಕುತೂಹಲ ನೀಡಿತ್ತು. ಆದರೆ ಚಿತ್ರ ಬಿಡುಗಡೆಯಾದ ಮೇಲೆ ಜನತೆ 50-50 ರಿಯಾಕ್ಷನ್ ನೀಡಿತ್ತು. ಆದರೆ ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಅಲ್ಲು ಅವರ ನಟನೆಯಿಂದಲೇ ಪುಷ್ಪ ಸಿನಿಮಾದ ಕಲೆಕ್ಷನ್ ಜೋರಾಗಿತ್ತು. ಇದೀಗ ಅಲ್ಲು ಅವರ ಚಿತ್ರವನ್ನು ನೋಡಿದ ಬಾಲಿವುಡ್ ನ ಹೆಸರಾಂತ ನಟಿ ಒಬ್ಬರು ಅಲ್ಲು ಅರ್ಜುನ್ ಅವರ ಜೊತೆ ನಟಿಸುವ ಆಸೆ ವ್ಯಕ್ತಪಡಿಸಿ ಎಲ್ಲರಿಗೆ ಶಾಕ್ ನೀಡಿದ್ದಾರೆ.

ಹೌದು ತ್ರಿಬಲ್ ಆರ್ ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಬಾಲಿವುಡ್ ಬೆಡಗಿ ಆಲಿಯಾ ಭಟ್, ಅಲ್ಲು ಅರ್ಜುನ್ ಬಗ್ಗೆ ಹೇಳಿಕೆಯೊಂದನ್ನು ನೀಡಿ ಎಲ್ಲರಲ್ಲೂ ಅಚ್ಚರಿ ಮೂಡುವಂತೆ ಮಾಡಿದ್ದಾರೆ. ಪುಷ್ಪ ಸಿನಿಮಾವನ್ನು ಅಮೆಜಾನ್ ಪ್ರೈಮ್ ನಲ್ಲಿ ನೋಡಿದ್ದೇನೆ. ಈ ಸಿನಿಮಾ ನೋಡಿದ ಮೇಲೆ ನಾನು ಅಲ್ಲು ಅರ್ಜುನ್ ಅವರ ಪಕ್ಕಾ ಅಭಿಮಾನಿ ಆಗಿದ್ದೇನೆ. ನನ್ನ ಜೊತೆ ನನ್ನ ಇಡೀ ಕುಟುಂಬ ಪುಷ್ಪ ಸಿನಿಮಾವನ್ನು ನೋಡಿದ್ದು, ಎಲ್ಲರೂ ಅರ್ಜುನ್ ಅವರ ಆಕ್ಟಿಂಗ್ ಅನ್ನು ಹೊಗಳಿದ್ದಾರೆ. ಅಷ್ಟೇ ಅಲ್ಲದೆ ನೀನು ಯಾವಾಗ ಅಲ್ಲು ಅರ್ಜುನ್ ಅವರ ಜೊತೆ ನಟಿಸುವ ಅವಕಾಶ ಪಡೆದುಕೊಳ್ಳುತ್ತಿಯಾ ಎಂದು ಕೇಳುತ್ತಿದ್ದಾರೆ.

ಇದಷ್ಟೇ ಅಲ್ಲದೇ ಥ್ರಿಬಲ್ ಆರ್ ಸಿನಿಮಾದ ನಂತರ ಅಭಿಮಾನಿಗಳು ಸಹ ನೀವು ಯಾವಾಗ ಅಲ್ಲು ಅರ್ಜುನ್ ಅವರ ಜೊತೆ ಕೆಲಸ ಮಾಡುತ್ತೀರಿ ಎಂದು ಕೇಳುತ್ತಿದ್ದಾರೆ. ಒಂದು ವೇಳೆ ಅಲ್ಲು ಅರ್ಜುನ್ ಅವರ ಜೊತೆ ಅಭಿನಯಿಸುವ ಅವಕಾಶ ನನಗೆ ಸಿಕ್ಕರೆ, ನಾನು ಖುಷಿಯಲ್ಲಿ ತೆಲಾಡುತ್ತೇನೆ ಎಂದು ಆಲಿಯಾ ಭಟ್ ಹೇಳಿದ್ದಾರೆ. ಇವರ ಈ ಹೇಳಿಕೆ ಎಲ್ಲರನ್ನೂ ಹುಬ್ಬೆರಿಸುವಂತೆ ಮಾಡಿರುವುದಂತು ನಿಜ. ಸದ್ಯಕ್ಕೆ ಥ್ರಿಬಿಲ್ಆರ್ ಸಿನಿಮಾದ ಪ್ರಮೋಷನ್ ನಿಂದ ಫ್ರೀ ಆಗಿರುವ ಆಲಿಯಾ ಭಟ್ ಮಾರ್ಚ್ 25ಕ್ಕೆ ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಸದ್ಯಕ್ಕೆ ಆಲಿಯಾ ಅವರ ಗಂಗೂಬಾಯಿ ಕಾಥೆವಾಡಿಯ ಸಿನಿಮಾದ ಟ್ರೈಲರ್ ಬಿಡುಗಡೆಯಗಿದ್ದು, ಎಲ್ಲರೂ ಅಲಿಯಾ ಅವರ ಗೆಟ್ ಅಪ್ ಮತ್ತು ಆಕ್ಟಿಂಗ್ ಗೆ ಫಿದಾ ಆಗಿದ್ದಾರೆ.

%d bloggers like this: