ಆಧುನಿಕ ದುನಿಯಾದಲ್ಲಿ ಹೆಚ್ಚು ಪ್ರಾಶಸ್ಯ ಕೊಡುವುದು ಬಾಹ್ಯ ಸೌಂದರ್ಯಕ್ಕೆ ಹೊರತು ನಿಮ್ಮ ಗುಣ ಮನಕ್ಕಲ್ಲ ಎಂಬುದು ಹಲವರ ಅಭಿಪ್ರಾಯ, ಅದರಲ್ಲೂ ಇತ್ತೀಚಿನ ಜೀವನ ಶೈಲಿಯಲ್ಲಿ ನಿಮ್ಮ ಬಾಹ್ಯ ಸೌಂದರ್ಯಕ್ಕೆ ಕೈಗನ್ನಡಿಯಂತೆ ಕಾಣುವುದು ನಿಮ್ಮಕೂದಲು, ಕೇಶವಿನ್ಯಾಸ. ಆದರೆ ಇಪ್ಪತ್ತುಮೂವತ್ತು ವಯೋಮಾನದವರಲ್ಲೂ ಕೂದಲು ಉದುರುವ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ. ಇದರಿಂದಾಗಿ ಎಷ್ಟೋ ಯುವಕರಲ್ಲಿ ಜೀವನೋತ್ಸಾಹ ಕಳೆದುಕೊಳ್ಳುವುದು ಉಂಟು. ಕೆಲವರು ಇದನ್ನ ಗಣನೆಗೆ ತೆಗೆದುಕೊಳ್ಳದೆ ನಿಶ್ಚಿಂತೆಯಿಂದ ಇರುತ್ತಾರೆ, ಆದರೆ ಇನ್ನೂ ಕೆಲವು ಸೂಕ್ಷ್ಮತೆವುಳ್ಳವರು ಕೀಳರಿಮೆಯಿಂದಾಗಿ ಜುಗುಪ್ಸೆಗೊಳಪಡುತ್ತಾರೆ.
ಈ ಕೂದಲು ಉದುರುವುದಕ್ಕೆ ಹಲವಾರು ಕಾರಣಗಳಿವೆ ಅದರಲ್ಲಿ ಅತಿಯಾದ ಟೆನ್ಷನ್ ಕೂಡ ಒಂದಾಗಿದೆ, ಕೂದಲಿನ ಆರೈಕೆಗೆ ಒತ್ತು ಕೊಡದೇ ಇರುವುದು, ಪ್ರತಿನಿತ್ಯ ಬಿಸಿನೀರಿನಿಂದ ಸ್ನಾನಮಾಡುವುದು ಕೂದಲಿನ ಬುಡಕ್ಕೆ ಅಪಾಯಕಾರಿಯಾಗಿದೆ. ಇನ್ನೂ ಕೆಲವರುವಸ್ನಾನ ಮಾಡಿದ ತಕ್ಷಣ ಟವೆಲ್ನಿಂದ ಕೂದಲನ್ನು ರಭಸವಾಗಿ ಉಜ್ಜುವುದು ಕೂದಲುದುರುವಿಕೆಗೆ ಕಾರಣವಾಗುತ್ತದೆ. ಇದಕ್ಕೆ ಬದಲಾಗಿ ಕೂದಲು ಸಂಪೂರ್ಣವಾಗಿ ಒಣಗಿದ ನಂತರ ಕೂದಲನ್ನ ಬಾಚುವುದು ಒಳಿತು ಹಾಗೆ ಎಣ್ಣೆಯನ್ನು ಆಗಾಗ ಹಚ್ಚುವುದು ಕೂದಲಿನ ಬೆಳವಣಿಗೆಗೆ ಉತ್ತಮ ಸಹಕಾರಿಯಾಗಿದೆ.