ಜಿರಲೆ ಎಂದ ಕೂಡಲೆ ಅನೇಕರ ಮುಖ ಒಂಥರಾ ಆಗುವುದು. ನಿಜ, ಜಿರಲೆಗಳ ಬಾಧೆ ಆ ಮಟ್ಟದ್ದಾಗಿರುತ್ತದೆ. ಕೆಲವರಿಗೆ ಅವುಗಳನ್ನು ನೋಡಿದರೆ ಕಿರಿಕಿರಿ ಮತ್ತೆ ಕೆಲವರಿಗಂತೂ ಜಿರಲೆ ಕಂಡರೆ ಸಾಕು ತುಂಬಾ ಭಯ. ಆದರೆ ಇದೆಲ್ಲದಕ್ಕಿಂತ ಮನೆಯಲ್ಲಿ ಜಿರಲೆಗಳ ಅಸ್ತಿತ್ವದಿಂದ ನಮ್ಮ ಆರೋಗ್ಯಕ್ಕೆ ತುಂಬಾ ರೀತಿಯಾದಂತಹ ಅಡ್ಡಪರಿಣಾಮಗಳು ಆಗುವ ಸಾಧ್ಯತೆ ಇರುತ್ತದೆ. ಈ ಜಿರಲೆಗಳ ಕಾಟದಿಂದ ಪಾರಾಗಲು ನೀವು ತುಂಬಾನೆ ಪ್ರಯತ್ನ ಪಟ್ಟಿರುತ್ತೀರಿ. ಅಂಗಡಿಗೆ ಹೋಗಿ ದುಡ್ಡು ಕೊಟ್ಟು ಬಗೆಯ ಬಗೆಯ ಕ್ಲೀನಿಂಗ್ ಲಿಕ್ವಿಡ್ ಗಳನ್ನು ತಂದು ಮನೆಯನ್ನು ಸ್ವಚ್ಛಗೊಳಿಸಿರುತ್ತೀರಿ. ಆದರೂ ಕೂಡ ಮತ್ತೆ ಒಂದೆರಡು ದಿನಗಳಲ್ಲಿ ಜಿರಲೆಗಳು ಕಾಣಿಸಿಕೊಳ್ಳುತ್ತವೆ.
ಇಷ್ಟೆಲ್ಲ ಬಾಧೆ ಕೊಡುವ ಇದರಿಂದ ಸಂಪೂರ್ಣವಾಗಿ ಮುಕ್ತರಾಗಲು ಈ ಸಿಂಪಲ್ ಟಿಪ್ಸ್ ಅನ್ನು ಅನುಸರಿಸಿ ಸಾಕು. ಒಂದು ಪಾತ್ರೆಗೆ ಆರರಿಂದ ಎಂಟು ಕರ್ಪೂರಗಳನ್ನು ಹಾಕಿ ನಂತರ ಸ್ವಲ್ಪ ಯಾವುದಾದರೂ ಊದಿನಕಡ್ಡಿಗಳನ್ನು ತೆಗೆದುಕೊಂಡು ಅದರ ಮೇಲ್ಭಾಗದಲ್ಲಿರುವ ಕಪ್ಪು ಬಣ್ಣದ ಕೋಟಿಂಗ್ ಅನ್ನು ತೆಗೆದು ಪಾತ್ರೆಗೆ ಹಾಕಿ. ನಂತರ ಈ ಮಿಶ್ರಣಕ್ಕೆ ಅರ್ಧ ಲೋಟ ನೀರನ್ನು ಹಾಕಿ ಚೆನ್ನಾಗಿ ಕಲಿಸಿಕೊಳ್ಳಿ. ಈ ಮೂರು ಚೆನ್ನಾಗಿ ಮಿಕ್ಸ್ ಆದನಂತರ 15 ನಿಮಿಷಗಳ ಕಾಲ ಹಾಗೆಯೇ ಇಡಿ. ನಂತರ ಮನೆಯಲ್ಲಿರುವ ಹತ್ತಿಯನ್ನು ಚಿಕ್ಕ-ಚಿಕ್ಕ ಉಂಡೆಗಳ ರೀತಿಯಲ್ಲಿ ಮಾಡಿಕೊಂಡು ಈ ಮಿಶ್ರಣದಲ್ಲಿ ಅದ್ದಿ ಜಿರಲೆಗಳು ಹೆಚ್ಚಾಗಿ ಕಾಣುವಂತಹ ಸ್ಥಳಗಳಲ್ಲಿ ಇಡಿ. ಈ ರೀತಿ ಸತತವಾಗಿ ಒಂದು ವಾರ ಮಾಡಿದರೆ ನಿಮ್ಮ ಮನೆಯಲ್ಲಿ ಮತ್ತೆ ಯಾವತ್ತೂ ಕೂಡ ಜಿರಲೆಗಳು ಸುಳಿಯಲು ಸಾಧ್ಯವಿಲ್ಲ.