ಈ ವಾರ ಹುಟ್ಟಿದವರು ಹೆಚ್ಚು ಜ್ಞಾನಿಗಳು ಆಗಿರುತ್ತಾರೆ ಹಾಗು ಮನೆಗೆ ಅದೃಷ್ಟ ತರುತ್ತಾರೆ

ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೂ ಅದರದೇ ಆದ ಮಹತ್ವವಿದೆ. ಹಾಗೆ ಈ ನವ, ನವದುರ್ಗಾ, ನವಮಾಸ, ನವಗ್ರಹ ಪ್ರತಿಯೊಂದಕ್ಕೂ ವಿಶೇಷವಾದ ಮಹತ್ವವಿದೆ. ಮಗು ಜನಿಸುವ ವಾರವೂ ಸಹ ಆ ಮಗುವಿನ ಭವಿಷ್ಯವನ್ನು ತಿಳಿಸುತ್ತದೆ. ಗುರುವಾರ ಹುಟ್ಟಿದ ಮಗು ಆ ಮನೆಗೆ ಲಕ್ಷ್ಮಿಯ ರೂಪದಲ್ಲಿ ಆಗಮಿಸುತ್ತಾನೆ ಗುರುವಾರ ಅಂದರೆ ಅರ್ಥಾತ್ ಬ್ರಾಹ್ಮಣ ವಾರ, ಶ್ರೇಷ್ಠವಾದ ವಾರ ಸರ್ವ ಸಂಪನ್ನವಾದ ಗುರುವಿನ ವಾರ ಎಂದು ಕರೆಯುತ್ತಾರೆ. ಈ ಗುರುವಾರಕ್ಕೆ ಬಲಿಷ್ಠವಾದ ಮಹತ್ವದ ಅರ್ಥವಿದೆ. ಆದ್ದರಿಂದ ಗುರುವನ್ನು ರಾಯರ ರೂಪದಲ್ಲಿ, ಶಿವನ ರೂಪದಲ್ಲಿ ಪೂಜಿಸುತ್ತೇವೆ‌. ಸರ್ವ ಪಾರಂಗತ ಸರ್ವ ಶಾಸ್ತ್ರಕ್ಕೂ ಗುರು ಅಂದರೆ ಈ ಗುರು. ಇಂತಹ ಗುರುವಾರದಂದು ಜನಿಸಿದ ಮಗು ಮಹಾನ್ ವ್ಯಕ್ತಿಯಾಗಿ ಹೊರಹೊಮ್ಮುತ್ತಾನೆ.

ಈ ಗುರುವಾರದಂದು ಜನಿಸಿದ ಮಗುವಿನ ವ್ಯಕ್ತಿತ್ವ ಶಾರೀರಿಕ ಭಾವವನ್ನು ಭವಿಷ್ಯದಲ್ಲಿ ನೋಡುವುದಾದರೆ ಇವರ ಹಣೆಯು ಎತ್ತರವಾಗಿ ಇರುತ್ತದೆ. ಇವರ ನಾಸಿಕ ಅಂದರೆ ಮೂಗು ಗಿಳಿಯ ರೂಪವನ್ನು ಹೋಲುತ್ತದೆ. ಕೆಂಪು ಚಾಯೆ ಹೊಂದಿದ್ದು ಇವರ ತುಟಿ ಮತ್ತು ಕೆನ್ನೆಯು ಕೃಷ್ಣನ ಲಕ್ಷಣಗಳನ್ನು ಹೊಂದಿರುತ್ತದೆ, ಇವರ ಹುಬ್ಬು ಮತ್ತು ಭುಜವು ಲಕ್ಷ್ಮಿಯು ರೂಪ ಪಡೆದಿರುತ್ತದೆ. ಇವರ ಸಂಪೂರ್ಣ ಶರೀರ ಗುರುವಿನ ರೂಪದಲ್ಲಿ ಸೃಷ್ಠಿಯಾಗಿರುತ್ತದೆ. ಇವರ ಜಾತಕದಲ್ಲಿ ಶುಕ್ರ ಮತ್ತು ಗುರುವು ಒಂದೇ ಸ್ಥಾನದಲ್ಲಿದ್ದರೆ ಇವರು ದೈಹಿಕವಾಗಿ ಅಜಾನುಬಾಹು ಆಗಿರುತ್ತಾರೆ. ಜೊತೆಗೆ ಸಕಲ ವಿದ್ಯೆ ಪಾರಂಗತ ರಾಗುತ್ತಾರೆ. ಸರ್ವ ಪಾಂಡಿತ್ಯ ವುಳ್ಳವರಾಗಿದ್ದು,ಗುರು ಹಿರಿಯರಿಗೆ ಗೌರವ, ಅಭಿಮಾನ ವುಳ್ಳವರಾಗಿರುತ್ತಾರೆ.

ಗುರುವಾರದಂದು ಗಂಡು ಮಗು ಜನಿಸಿದರೆ ತಂದೆಗೆ ಅದೃಷ್ಟ ಒಲಿಯುತ್ತದೆ. ತಂದೆಯ ಜೀವನ ಬದಲಾಗಿ ಜೀವನದಲ್ಲಿ ತಾವು ಅನುಭವಿಸಿದ ಎಲ್ಲಾ ಕಷ್ಟ ಕಾರ್ಪಣ್ಯದಿಂದ ದೂರವಾಗಿ ಉನ್ನತ ಸ್ಥಾನಕ್ಕೆ ತಲುಪುತ್ತಾರೆ. ಆ ಮನೆಗೆ ಮಗುವು ಕೇವಲ ಮಗನಾಗಿ ಜನಿಸುವುದಲ್ಲದೆ ಶೌರ್ಯಶಾಲಿ, ವೀರ, ಚಾಣ್ಯಕ್ಯ ಗುಣಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಆತ ಮಹಾನ್ ವ್ಯಕ್ತಿ ಆಗುತ್ತಾನೆ. ಆದರೆ ಆತನ ವಯಸ್ಸು 14ರ ಪ್ರಾಯ ತುಂಬುವುದರೊಳಗೆ ಯಾವುದೇ ಕೆಟ್ಟ ಹಾದಿಯನ್ನು ತುಳಿಯಬಾರದು. ಆ ಸಮಯದಲ್ಲಿ ತಂದೆ ತಾಯಿಗಳು ಹೆಚ್ಚು ಆ ಮಕ್ಕಳನ್ನು ಜಾಗೃತಿಯಿಂದ ನೋಡಿಕೊಳ್ಳಬೇಕು.

ಕೆಲವೊಮ್ಮೆ 14ರ ಪ್ರಾಯದ ವಯೋಮಾನದಲ್ಲಿ ಅವನಿಗೆ ಕೆಟ್ಟ ಗ್ರಹಗಳ ದೋಷಗಳ ಪರಿಣಾಮ ಜೀವನದ ಹಾದಿಯ್ಲಲಿ ಹಳಿ ತಪ್ಪಿದರೆ ಆತ ವಿಧ್ಯಾನಾಶ, ಜ್ಞಾನ ನಾಶ ಹೊಂದುವ ಸಾಧ್ಯತೆ ಇರುತ್ತದೆ. ಇದನ್ನು ಹೊರತು ಪಡಿಸಿ ಇಂತಹ ದುಷ್ಟಗ್ರಹಗಳಿಂದ ತಪ್ಪಿಸಿಕೊಂಡರೆ ಆ ಮಗುವು ಜೀವನದಲ್ಲಿ ನಿಮ್ಮ ಹೆಸರನ್ನು ಕಾಪಾಡಿ ಸಮಾಜದಲ್ಲಿ ನಿಮಗೆ ಗೌರವ ಸ್ಥಾನ ಮಾನ ಮನ್ನಣೆ ದೊರಕಿಸಿಕೊಡುತ್ತಾನೆ. ಕೆಲವು ದೋಷಗಳ ಪರಿಹಾರಕ್ಕಾಗಿ ಪ್ರತಿ ಗುರುವಾರ ರಾಯರ ದರ್ಶನ ಮಾಡಿಸಿ. ರಾಯರ ಮಹತ್ವ, ಪೂಜಾ ವಿಧಿ ವಿಧನಗಳನ್ನು ಅಭ್ಯಾಸ ಮಾಡಿಸಿ, ಜೊತೆಗೆ ಪ್ರತಿ ಸೋಮವಾರ ಶಿವನಿಗೆ ಬಿಲ್ವಾರ್ಚನೆ, ರುಧ್ರಾಭಿಷೇಕ ಮಾಡಿಸಿ ಪೂಜೆ ಸಲ್ಲಿಸುವುದರಿಂದ ಆ ಮಗುವು ಸರ್ವ ಸಂಪನ್ನಗುಣನಾಗಿ, ಆರೋಗ್ಯ, ಐಶ್ವರ್ಯ ಲಭಿಸುತ್ತದೆ ಮತ್ತು ಮೃತ್ಯುಕಂಟಕ ನಿವಾರಣೆಯಾಗಿ ಜೀವನದಲ್ಲಿ ಆ ಮಗುವು ಮಹಾನ್ ಸಾಧಕನಾಗುತ್ತಾನೆ.

%d bloggers like this: