ಈ ವಾರ ಹುಟ್ಟಿದವರು ವಿಶೇಷ ಸ್ಥಾನಮಾನ ಗಳಿಸುತ್ತಾರೆ, ಮಹಾಯೋಗ ಹೊಂದಿರುತ್ತಾರೆ

ಮನುಷ್ಯ ಮಾಡುವ ಸಾಧನೆಗಳು ಅವನ ಅವಿರತ ಶ್ರಮದಿಂದ, ತನ್ನ ಬುದ್ದಿ ಶಕ್ತಿಯಿಂದ ಅಪೂರ್ವವಾದದ್ದನ್ನು ಸಿದ್ದಿಸಿ ತನ್ನ ಕನಸನ್ನು ಸಾಕಾರಗೊಳಿಸಿಕೊಳ್ಳಬಹುದು. ಆದರೆ ಕೆಲವೊಮ್ಮೆ ಅವರ ಜಾತಕರಾಶಿಗಳು, ಹುಟ್ಟಿದ ದಿನಗಳು ಕೂಡ ಅವರ ಸಾಧನೆಗೆ ಪ್ರೇರಕವಾಗಿರುತ್ತವೆ ಎಂದು ಜ್ಯೋತಿಷ್ಯದಲ್ಲಿ ತಿಳಿಸಲಾಗಿದೆ. ಹಾಗಾದರೆ ಈ ಶನಿವಾರ ಹುಟ್ಟಿದ ವ್ಯಕ್ತಿಗಳು ಜೀವನದಲ್ಲಿ ಯಾವ ರೀತಿಯ ಉನ್ನತ ಮಟ್ಟದ ಸ್ದಾನಕ್ಕೆ ತಲುಪುತ್ತಾರೆ ಎನ್ನುವುದಾದರೆ, ಈ ಶನಿವಾರ ಜನಿಸಿದ ವ್ಯಕ್ತಿಗಳು ಅಪಾರವಾದ ದೈವಭಕ್ತಿ ಹೊಂದಿರುತ್ತಾರೆ. ತೀರ್ಥಕ್ಷೇತ್ರ ಪುಣ್ಯಕ್ಷೇತ್ರಗಳಿಗೆ ಭೇಟಿಮಾಡುವ ಹವ್ಯಾಸವನ್ನು ಹೊಂದಿರುತ್ತಾರೆ. ಇವರಿಗೆ ಉದ್ಯೋಗದಲ್ಲಿ ಇವರ ಕಾರ್ಯಕ್ಷಮತೆ ನೋಡಿ ಎಲ್ಲರಿಗಿಂತ ಹೆಚ್ಚಾಗಿ ಜವಾಬ್ದಾರಿ ನೀಡಿರುತ್ತಾರೆ. ಶನಿವಾರದಂದು ಜನಿಸಿದ ವ್ಯಕ್ತಿಗಳಿಗೆ ಹಠ ಹೆಚ್ಚಾಗಿರುತ್ತದೆ. ಯಾವುದೇ ಸೋಲನ್ನು ಕೂಡ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಇದರಿಂದಲೇ ಕೆಲವೊಮ್ಮೆ ಸತಿಪತಿಗಳಲ್ಲಿ ಸ್ವಾಭಿಮಾನ ಉಂಟಾಗಿ ಕಲಹಗಳಿಗೆ ದಾರಿಮಾಡಿ ಕೊಡಬಹುದಾಗಿದೆ. ಈ ಶನಿವಾರದಂದು ಹುಟ್ಟಿದ ವ್ಯಕ್ತಿಗಳು ಕರುಣಿಯ ಗುಣಗಳನ್ನು ಹೊಂದಿರುತ್ತಾರೆ. ಯಾರಿಗಾದರೂ ಸಮಸ್ಯೆ ಬಂದರೆ ನೆರವಾಗುತ್ತಾರೆ.

ಕಷ್ಟದಲ್ಲಿರುವವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಲು ಸದಾ ಮುಂದೆ ಇರುತ್ತಾರೆ, ಆದರೆ ಇವರಿಗೆ ಕೋಪ ಹೆಚ್ಚಾಗಿರುತ್ತದೆ ಅದೇ ಇವರಿಗೆ ಮುಳುವಾಗಬಹುದು. ಇವರನ್ನು ಕೆಲವೊಮ್ಮೆ ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟಕರವಾಗಿರುತ್ತದೆ. ಇವರಿಗೆ ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುವುದಕ್ಕೆ ಇಷ್ಟವಿರುವುದಿಲ್ಲ. ಜೀವನದಲ್ಲಿ ವೈವಿಧ್ಯತೆ ಕಾಣಲು ಹಾತೊರೆಯುತ್ತಾರೆ. ಎಲ್ಲಾ ಕ್ಷೇತ್ರಗಳಲ್ಲೂ ಸಹ ಆಸಕ್ತಿ ಹೊಂದಿರುತ್ತಾರೆ. ಇನ್ನು ಇವರಿಗೆ ಸಿಮೆಂಟ್ ಉದ್ಯಮ ಕ್ಷೇತ್ರಗಳಲ್ಲಿ ಉತ್ತಮವಾದ ಧನಲಾಭ ಮತ್ತು ಪ್ರಗತಿ ಹೊಂದುತ್ತಾರೆ, ಜೊತೆಗೆ ಕೃಷಿಯಲ್ಲಿಯೂ ಸಹ ಇವರು ವಿಶೇಷವಾದ ಸಾಧನೆ ಮಾಡಬಹುದಾಗಿದೆ.

ಇನ್ನು ಈ ಶನಿವಾರ ಜನಿಸಿದ ವ್ಯಕ್ತಿಗಳ ಅದೃಷ್ಟ ಸಂಖ್ಯೆ8. ನೂತನ ವ್ಯಾಪಾರ ವ್ಯವಹಾರಗಳನ್ನು ಆರಂಭಿಸಲು ಯಾವುದೇ ತಿಂಗಳಿನಲ್ಲಿ ಪ್ರಾರಂಭಿಸಬಹುದು ಆದರೆ ಅದು 8ನೇ ತಾರೀಖಿನಿಂದ ಆರಂಭ ಮಾಡಿದರೆ ವ್ಯಾಪಾರ ವ್ಯವಹಾರಗಳು ಅತ್ಯುತ್ತಮವಾಗಿ ಪ್ರಗತಿ ಕಾಣುತ್ತದೆ. ಶನಿವಾರ ಹುಟ್ಟಿದವರಿಗೆ ಶನಿ ಗ್ರಹ ಅಧಿಪತಿಯಾಗಿದ್ದು ಪ್ರತಿ ಶನಿವಾರ ಶನಿದೇವರನ್ನು ದರ್ಶನ ಮಾಡಿ, ಬಿಲ್ವಪತ್ರೆಗಳಿಂದ ಪೂಜಿಸುವುದರಿಂದ ನಿಮಗೆ ಶನಿ ದೇವರ ಅನುಗ್ರಹ ಲಭಿಸುತ್ತದೆ. ಜೊತೆಗೆ ಆಂಜನೇಯ ಸ್ವಾಮಿಯ ಓಂಹಂ ಹನುಮತೇ ನಮಃ ಎಂಬ ಮಂತ್ರಪಠನೆಯನ್ನು ಪ್ರತಿದಿನ ಬೆಳಿಗ್ಗೆ 16ಬಾರಿ ಪಠನೆ ಮಾಡುವುದರಿಂದ ನಿಮ್ಮ ಸಂಕಷ್ಟ, ಆರ್ಥಿಕ ಸಮಸ್ಯೆಗಳು ದೂರವಾಗಿ ಮಹಾಲಕ್ಷ್ಮಿಯ ಅನುಗ್ರಹ ನಿಮ್ಮ ಮೇಲಾಗುತ್ತದೆ ಎಂದು ಜ್ಯೋತಿಷ್ಯಗಳು ತಿಳಿಸುತ್ತಾರೆ.

%d bloggers like this: