ಪ್ರತಿಯೊಬ್ಬರ ಜೀವನದ ಒಳಿತು ಕೆಡುಕುಗಳ ಮೇಲೆ ಈ ರಾಶಿ ಚಕ್ರಗಳ ಪ್ರಭಾವ ಇದ್ದೇ ಇರುತ್ತದೆ. ದ್ವಾದಶ ರಾಶಿಚಕ್ರಗಳ ಲ್ಲಿ ಆಯಾಯ ರಾಶಿಗಳ ವ್ಯಕ್ತಿಗಳಿಗೆ ಗ್ರಹಗತಿಗಳ ಆಧಾರದ ಮೇಲೆ ಪ್ರತಿಫಲ ಗೋಚರಿಸುತ್ತಿದೆ. ಸಮಯ, ಕಾಲ, ಹುಟ್ಟಿದ ಸ್ಥಳ ಇವುಗಳ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯವನ್ನು ಹೇಳಬಹುದು. ಅಂತೆಯೇ ಯಾವ ದಿನಗಳಲ್ಲಿ ಜನಿಸಿದ ವ್ಯಕ್ತಿ ಸ್ವಭಾವಗಳು ಯಾವ ರೀತಿ ಇರುತ್ತವೆ ಎಂಬುದನ್ನ ಕೂಡ ತಿಳಿಯಬಹುದು. ವಾರದ ಏಳು ದಿನಗಳಿಗೂ ಸಹ ಒಂದೊಂದು ರೀತಿಯ ವಿಶೇಷತೆ ಮಹತ್ವ ಇದ್ದೇ ಇರುತ್ತದೆ. ಅದರಲ್ಲಿಯೂ ವಿಶೇಷವಾಗಿ ಬುಧವಾರದ ದಿನದಂದು ಜನಿಸಿದ ವ್ಯಕ್ತಿಗಳು ಇತರೆ ವ್ಯಕ್ತಿಗಳಿಗೆ ಕೊಂಚ ವಿಭಿನ್ನವಾಗಿರುತ್ತಾರೆ.

ಇನ್ನು ಬುಧವಾರ ಅಂದರೆ ಬುಧಗ್ರಹದ ಪರಿಣಾಮ ಹೊಂದುವ ಈ ರಾಶಿಯ ವ್ಯಕ್ತಿಗಳ ವೈಶಿಷ್ಟ್ಯತೆ ನೋಡುವುದಾದರೆ ಬುಧ ಪುರುಷ ಮತ್ತು ಸ್ತ್ರೀ ಗುಣಗಳನ್ನು ಹೊಂದಿದೆ. ಬುಧಗ್ರಹವು ತರ್ಕಬದ್ದವಾದ ಬುದ್ದಿವಂತಿಕೆಯ ಗ್ರಹವಾಗಿರುವುದರಿಂದ ಉತ್ತಮ ಸ್ಮರಣೆಯ ಶಕ್ತಿಯನ್ನು ಹೊಂದಿರುತ್ತದೆ. ಬುಧವಾರ ಜನಿಸಿದ ವ್ಯಕ್ತಿಗಳು ಬುಧವಾರದಂದು ಆದಷ್ಟು ನಿಮ್ಮ ಕೌಟುಂಬಿಕ ಸಮಸ್ಯೆಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಿ. ಇದು ನಿಮ್ಮ ಜವಾಬ್ದಾರಿಯ ಆಧಾರದ ಮೇಲೆ ನಿಂತಿರುತ್ತದೆ. ನಿಮ್ಮ ಮಾತಿನ ಮೇಲೆ ಆದಷ್ಟು ನಿಯಂತ್ರಣವಿರಲಿ. ಇಂದು ನೀವು ಯಾವುದೇ ಶುಭ ಕಾರ್ಯಗಳನ್ನು ಆರಂಭಿಸಬೇಕಾದರೆ ಆದಷ್ಟು ನಿಮ್ಮ ಅದೃಷ್ಟ ಸಂಖ್ಯೆಯಾದ ಐದನ್ನ ಹೆಚ್ಚು ಬಳಸಿ ಜೊತೆಗೆ ಹಸಿರು ಬಣ್ಣದ ವಸ್ತು ಉಡುಪು ನಿಮ್ಮದಾಗಿರಲಿ ಇದರಿಂದ ನಿಮ್ಮ ಕಾರ್ಯ ಯಶಸ್ವಿಯಾಗುತ್ತದೆ.

ಈ ಬುಧವಾರ ದಿನದಂದು ಜನಿಸಿದ ವ್ಯಕ್ತಿಗಳು ಕ್ರಿಯಾಶೀಲ ಬುದ್ದಿವಂತರಾಗಿರುತ್ತಾರೆ. ಇನ್ನು ಈ ವ್ಯಕ್ತಿಗಳಿಗೆ ಪ್ರತಿಯೊಂದರಲ್ಲಿಯೂ ಕೂಡ ಆಸಕ್ತಿಯನ್ನು ಹೊಂದಿರುತ್ತಾರೆ. ಅದರಲ್ಲಿಯೂ ವಿಶೇಷವಾಗಿ ಸಂಗೀತ ಕ್ಷೇತ್ರದತ್ತ ಅಪಾರ ಒಲವು ಹೊಂದಿರುತ್ತಾರೆ. ಯಾವುದೇ ರೀತಿಯ ಸಮಸ್ಯೆಗಳನ್ನು ಬಹಳ ಸೂಕ್ಷ್ಮವಾಗಿ ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇವರು ಅತಿ ದೊಡ್ಡ ಶ್ರೀಮಂತ ಆಗಬೇಕು ಎಂಬ ಮನದಾಸೆಯನ್ನು ಹೊಂದಿರುವುದಿಲ್ಲ. ತಾನು ಉತ್ತಮ ಸದ್ಗುಣಗಳ ಶ್ರೀಮಂತನಾಗಿ ಬದುಕಿ ಬಾಳಬೇಕು ಎಂಬ ಆದರ್ಶ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇವರು ಕೆಲವೊಮ್ಮೆ ನೇರ ನಿಷ್ಠುರ ಮಾತುಗಳಿಂದ ತಮ್ಮ ಆತ್ಮೀಯರಿಂದ ಸಹ ಕೊಂಚ ಅನಿರೀಕ್ಷಿತ ಪ್ರತಿಕ್ರಿಯೆಗಳನ್ನು ಹೊಂದಿರುತ್ತಾರೆ.

ಇವರು ಯಾರಿಗೂ ಕೂಡ ಕೇಡನ್ನ ಬಯಸುವುದಿಲ್ಲ. ತಮ್ಮ ಇಚ್ಚೆಯಂತೆ ಬದುಕು ಸಾಗಿಸುತ್ತಾರೆ. ಅತಿಯಾದ ಆಸೆಗಳಿಗೆ ಒಳಗಾಗದ ಇವರು ಸಂತೃಪ್ತ ಬದುಕನ್ನ ನಡೆಸುತ್ತಾರೆ. ಇವರ ಒಂದು ನಕರಾತ್ಮಕ ಸ್ವಭಾವ ಅಂದರೆ ಒಮ್ಮೆ ಒಬ್ಬ ವ್ಯಕ್ತಿಯ ಮೇಲೆ ಕೆಟ್ಟ ಅಭಿಪ್ರಾಯ ಮೂಡಿದ ನಂತದ ಮತ್ತೆ ಆತ ಎಷ್ಟೇ ಒಳ್ಳೆಯ ಕೆಲಸ ಕಾರ್ಯ ಮಾಡಿದರು ಕೂಡ ಅವರನ್ನ ನೆಚ್ಚುವುದಿಲ್ಲ. ಇನ್ನು ಇವರು ದೇವರನ್ನ ಅಷ್ಟಾಗಿ ನಂಬುವುದಿಲ್ಲ. ವೈಚಾರಿಕ ಪ್ರಜ್ಞೆಯಿಂದ ಆಲೋಚಿಸುವ ಇವರಿಗೆ ಕೆಲವು ಧಾರ್ಮಿಕ ನಂಬಿಕೆಗಳ ಬಗ್ಗೆ ಅಸಮಾನವಿರುತ್ತದೆ. ಇವರಿಗೆ ಸಂವಹನ ಕಲೆ ಕರಗತವಾಗಿರುವುದರಿಂದ ಇವರು ಹೆಚ್ಚು ಆಕರ್ಷಿತರಾಗಿರುತ್ತಾರೆ.