ಈ ವಾರ ನಾವು ಚಿತ್ರ ಬಿಡುಗಡೆ ಮಾಡೇ ಮಾಡ್ತೀವಿ ಅಂದವರು ಈಗ ಪೋಸ್ಟ್ ಪೋನ್ ಮಾಡಿ ಹಿಂದೆ ಸರಿದ್ರು

ಕೋವಿಡ್ ಮೂರನೇ ಅಲೆಯ ಜೊತೆಗೆ ಸದ್ದಿಲ್ಲದೇ ವೇಗವಾಗಿ ಹರಡುತ್ತಿರುವ ಓಮೈಕ್ರಾನ್ ವೈರಸ್ ನಿಂದಾಗಿ ನೆಮ್ಮದಿದಾಗಿದ್ದ ಇಡೀ ದೇಶವೇ ಕಳವಳ ವ್ಯಕ್ತಪಡಿಸುವಂತಾಗಿದೆ. ಅದರಂತೆ ನೂರಾರು ಕೋಟಿ ಬಂಡವಾಳ ಹೂಡಿಕೆ ಮಾಡಿ ನಿರ್ಮಾಣ ಮಾಡಿದ ಸಿನಿಮಾಗಳು ಕೂಡ ಇದೀಗ ಅಪಾರ ನಷ್ಟವೊಂದುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೌದು ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಲೌಕ್ ಡೌನ್ ಮಾಡಲಾಗಿದೆ. ಅಂತೆಯೇ ರಾಜ್ಯದಲ್ಲಿಯೂ ಕೂಡ ಕೊರೋನ ಸೋಂಕಿತರ ಸಂಖ್ಯೆ ದಿನವೊಂದಕ್ಕೇನೇ ಐದು ಸಾವಿರ ಗಡಿ ದಾಟಿದೆ. ಇಂತಹ ಸಂಧರ್ಭದಲ್ಲಿ ಪರಿಸ್ದಿತಿ ಕೈ ಮೀರುವ ಮೊದಲು ಜನರ ಆರೋಗ್ಯದ ಹಿತ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾದ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂವನ್ನ ಜಾರಿ ಮಾಡಿದೆ.

ಇದರಿಂದಾಗಿ ಕೋಟಿ ಕೋಟಿ ಹಣ ಹಾಕಿ ನಿರ್ಮಿಸಿದ ಚಿತ್ರಗಳಿಗೆ ಭಾರಿ ಹೊಡೆತ ಬೀಳಲಿದೆ. ಏಕೆಂದರೆ ಕೋವಿಡ್ ಲಾಕ್ ಡಾನ್ ನಿಂದಾಗಿ ಚಿತ್ರ ಮಂದಿರಗಳು ಸಂಪೂರ್ಣ ಬಂದ್ ಆಗಿ ಈಗಾಗಲೇ ಕಳೆದೆರಡು ಒಂದುವರೆ ವರ್ಷಗಳಿಂದ ಸರಿಯಾಗಿ ಚಿತ್ರಗಳು ಸೂಕ್ತ ಸಮಯಕ್ಕೆ ಬಿಡುಗಡೆಯಾಗದೆ ನಷ್ಟವೊಂದಿದ್ದಾವೆ. ಇದೀಗ ಮತ್ತೆ ಕೋವಿಡ್ ಮೂರನೇ ಅಲೆಯ ಜೊತೆಗೆ ರೂಪಾಂತರಿ ಓಮೈಕ್ರಾನ್ ವೈರಸ್ ನಿಂದಾಗಿ ಚಿತ್ರಮಂದಿರಗಳಿಗೆ ಕಠಿಣ ಮಾರ್ಗಸೂಚಿಯ ಅನ್ವಯ ಶೇಕಡ ಐವತ್ತರಷ್ಟು ಅವಕಾಶ ನೀಡಲಾಗಿದೆ. ಇದು ಬಿಡುಗಡೆಗೆ ಸಿದ್ದವಾಗಿರುವ ಸಿನಿಮಾಗಳ ಮೇಲೆ ಭಾರಿ ವ್ಯತಿರಿಕ್ತ ಪರಿಣಾಮ ಬೀರಲಿದೆ.

ಹಾಗಾಗಿ ಸಿನಿಮಾದ ನಿರ್ಮಾಪಕರು ತಮ್ಮ ಚಿತ್ರಗಳ ಬಿಡುಗಡೆಯ ದಿನಾಂಕವನ್ನು ಮುಂದೂಡಿದ್ದಾರೆ. ಅಂತಹ ಸಿನಿಮಾಗಳ ಪೈಕಿ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಹಿಂದಿಯ ರಾಧೆಶ್ಯಾಮ್ ಕೂಡ ಒಂದಾಗಿದೆ. ಹೌದು ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಮತ್ತು ಕರಾವಳಿ ಬೆಡಗಿ ಪೂಜಾ ಹೆಗ್ಡೆ ಜೋಡಿಯಲ್ಲಿ ಮೂಡಿ ಬಂದಿರುವ ರಾಧೆ ಶ್ಯಾಮ್ ಚಿತ್ರದ ರಿಲೀಸ್ ಡೇಟ್ ಮುಂದೂಡಲಾಗಿದೆ. ಈಗಾಗಲೇ ಟ್ರೇಲರ್ ಮತ್ತು ಹಾಡುಗಳಿಂದ ಭಾರಿ ಸದ್ದು ಮಾಡುತ್ತಿರುವ ರಾಧೆ ಶ್ಯಾಮ್ ಸಿನಿಮಾ ಸಂಕ್ರಾಂತಿ ಹಬ್ಬದ ಪ್ರಯುಕ್ತ ಇದೇ ಜನವರಿ 14 ರಂದು ದೇಶಾದ್ಯಂತ ಬೆಳ್ಳಿತೆರೆಗೆ ಅಪ್ಪಳಿಸಬೇಕಾಗಿತ್ತು.

ಆದರೆ ರಾಕ್ಷಸನಂತೆ ಮತ್ತೆ ವಕ್ಕರಸಿರುವ ಕೊರೋನ ವೈರಸ್ ಮತ್ತು ಓಮೈಕ್ರಾನ್ ವೈರಸ್ ನಿಂದಾಗಿ ಈ ರಾಧೆ ಶ್ಯಾಮ್ ಚಿತ್ರದ ಬಿಡುಗಡೆಯ ದಿನಾಂಕವನ್ನು ಬದಲಾಯಿಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಜೋಡಿಯ ರೊಮ್ಯಾಂಟಿಕ್ ಲವ್ ಸ್ಟೋರಿಯ ಈ ರಾಧೆ ಶ್ಯಾಮ್ ಸಿನಿಮಾಗೆ ರಾಧಕೃಷ್ಣ ಕುಮಾರ್ ಅವರು ಆಕ್ಷನ್ ಕಟ್ ಹೇಳಿದ್ದು, ನಿರ್ಮಾಪಕರಾದ ಭೂಷಣ್ ಕುಮಾರ್ ಬರೋಬ್ಬರಿ 350 ಕೋಟಿ ರೂ. ವೆಚ್ಚದಲ್ಲಿ ಈ ಚಿತ್ರ ನಿರ್ಮಿಸಿದ್ದಾರೆ.

%d bloggers like this: