ತುಲಾ ರಾಶಿಯವರ 2021 ವರ್ಷ ಭವಿಷ್ಯ ನೋಡುವುದಾದರೆ ತುಲಾರಾಶಿಯು ಚಿತ್ರನಕ್ಷತ್ರ ಮೂರನೇ ಪಾದ ಮತ್ತು ನಾಲ್ಕನೇಯ ಪಾದ ಸ್ವಾತಿ ನಕ್ಷತ್ರ ಹಾಗೂ ವಿಶಾಖ ನಕ್ಷತ್ರದ ಒಂದು, ಎರಡು ಮತ್ತು ಮೂರನೇ ಪಾದಗಳನ್ನು ಒಳಗೊಂಡಿರುತ್ತದೆ. ತುಲಾ ರಾಶಿಯವರಿಗೆ ಸಮಾಜ ಸೇವೆಗಳಲ್ಲಿ ತೊಡಗಿಕೊಳ್ಳುವ ಅವಕಾಶವಿರುತ್ತದೆ. ಆದರೆ ಹಣ ಮಾಡುವ ಉದ್ದೇಶ ಹೊಂದಿದ್ದರೆ ನಿಮಗೆ ನಿಮ್ಮ ಗೌರವ ಚ್ಯುತಿ ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ಸಮಾಜಮುಖಿ ಕೆಲಸವನ್ನು ನೋಡಿದ ಅನೇಕರು ನಿಮಗೆ ಆರ್ಥಿಕವಾಗಿ ಸಹಾಯ ಮಾಡುತ್ತಾರೆ. ತುಲಾ ರಾಶಿಯವರಿಗೆ ಸಮಾಜದಲ್ಲಿ ಯಾವುದೇ ರೀತಿಯ ಅಧಿಕಾರ ಇಲ್ಲದಿದ್ದರೂ ಸಹ ಅವರ ಸಮಾಜಮುಖಿ ಕೆಲಸಗಳು ಅವರನ್ನು ಉನ್ನತಮಟ್ಟಕ್ಕೆ ಕರೆದೊಯ್ಯುತ್ತದೆ, ಇನ್ನು ಆತುರದ ನಿರ್ಧಾರಗಳಿಂದ ಅನಿರೀಕ್ಷಿತ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ನಿರ್ಧಾರಗಳ ಬಗ್ಗೆ ಆದಷ್ಟು ಜಾಗೃತೆ ವಹಿಸಬೇಕಾಗುತ್ತದೆ.

ಇನ್ನು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಹಣದ ವಯ್ಯ ಹೆಚ್ಚಾಗುತ್ತದೆ, ಆದ್ದರಿಂದ ಹಣಕಾಸಿನ ವಿಚಾರದಲ್ಲಿ ಇತಿಮಿತಿಯಿಂದ ನಡೆದುಕೊಳ್ಳಬೇಕಾಗುತ್ತದೆ. ಇನ್ನು ನೀವು ಆರಂಭಿಸಿದ ಎಲ್ಲಾ ಕೆಲಸ ಕಾರ್ಯಗಳು ಪ್ರತಿಫಲ ನೀಡುತ್ತವೆ. ಇನ್ನೂ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸ ಕಾರ್ಯಗಳು ತನ್ನಿಂತಾನೇ ಚಾಲನೆ ಪಡೆಯುತ್ತದೆ. ಇನ್ನು ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿ ಬರುತ್ತದೆ ಇನ್ನು ವಕೀಲ ವೃತ್ತಿ ಯವರಿಗೆ ಹಿಂದೆಂದೂ ಕಾಣದ ಹಣದ ಒಳ ಹರಿವು ಹೆಚ್ಚಾಗುತ್ತದೆ. ಸ್ವಂತ ಉದ್ಯಮ ಮಾಡುತ್ತಿರುವವರಿಗೆ ಹೆಚ್ಚಿನ ಲಾಭವಾಗುತ್ತದೆ. ನಿಮ್ಮ ಬಹುದೀರ್ಘ ಕನಸುಗಳು ನನಸಾಗುವ ಸಮಯ ಹತ್ತಿರವಾಗುತ್ತಿದೆ.

ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಗುರು ಹಿರಿಯರಿಂದ ಪ್ರಶಂಸೆ ಪಡೆಯುತ್ತಾರೆ, ಕೆಲವೊಮ್ಮೆ ದೂರದ ಊರುಗಳಿಗೆ ಹೋದಾಗ ಮೋಸಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಗುರುತು ಪರಿಚಯವಿಲ್ಲದವರ ಒಡನಾಟ ಉಚಿತವಲ್ಲ. ಇನ್ನು ನಿಮ್ಮ ಜೀವನದಲ್ಲಿ ಗತಿಸುವಂತಹ ಕೆಲವು ಸಮಸ್ಯೆಗಳ ಪರಿಹಾರಕ್ಕಾಗಿ ಪಾರ್ವತಿ ದೇವಿಯ ಅಷ್ಟೋತ್ತರಗಳನ್ನು ಪಠಿಸುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗಲಿದೆ. ತುಲಾ ರಾಶಿಯವರ ಅದೃಷ್ಟ ಸಂಖ್ಯೆಗಳು 2, 4, 5 ಮತ್ತು 6ಆಗಿರುತ್ತದೆ. ಇನ್ನು ಸೋಮವಾರ, ಮಂಗಳವಾರ ಬುಧವಾರ, ಶುಕ್ರವಾರಗಳು ಶುಭದಿನಗಳಾಗಿದ್ದು, ಪಚ್ಛೆ, ವಜ್ರ ಮುತ್ತು ಅದೃಷ್ಟ ತರುವ ರತ್ನಗಳಾಗಿವೆ. ಬಿಳಿ ಬಣ್ಣ ಮತ್ತು ನೀಲಿ ಬಣ್ಣಗಳು ಶುಭಫಲ ನೀಡುತ್ತವೆ.