ಈ ವರ್ಷ ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ, ಅದೃಷ್ಟ ಹಾಗೂ ಉತ್ತಮ ದಿನಗಳು ಬರಲಿವೆ

ಮನುಷ್ಯನ ಜೀವನದ ಮೇಲೆ ಗ್ರಹಗತಿಗಳು ಪ್ರತಿಕೂಲ ಮತ್ತು ಆನಾನುಕೂಲ ಪರಿಣಾಮವನ್ನು ಉಂಟು ಮಾಡುತ್ತದೆ. ಈ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವ ಪ್ರತಿಯೊಂದು ಕೂಡ ನಿಜವಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಜಾತಕ ರಾಶಿಗಳ ಆಧಾರದ ಮೇಲೆ ಬಹುತೇಕರು ಅಪಾರ ನಂಬಿಕೆ ಇಟ್ಟಿರುತ್ತಾರೆ. ಕೆಲವೊಮ್ಮೆ ಅವರ ನಂಬಿಕೆಯ ಅನುಸಾರ ಅದು ನಿಜವಾಗಿ ಅವರ ಜೀವನದಲ್ಲಿ ನಿರೀಕ್ಷೆ ಮಾಡಲಾಗದಷ್ಟು ಪ್ರಗತಿಯ ಬದಲಾವಣೆಗಳಾಗಿವೆ. ಈ ಜಾತಕ ರಾಶಿ ಫಲಾಫಲಗಳನ್ನು ನಂಬುವುದು ಬಿಡುವುದು ಅವರವರ ವೈಯಕ್ತಿಕ ಅಭಿಪ್ರಾಯವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವಂತೆ ಈ ವರ್ಷದಲ್ಲಿ ಅದೃಷ್ಟವನ್ನೊಂದಿರುವ ಈ ನಾಲ್ಕು ರಾಶಿಯ ಜನರಿಗೆ ಉತ್ತಮ ದಿನಗಳು ಒದಗಿ ಬರಲಿವೆ. ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ಅವರು ಆರಂಭಿಸುವ ಕೆಲಸ ಕಾರ್ಯಗಳು ಶುಭವಾಗಲಿವೆ.

ಹಾಗಾದರೆ ಈ ಯೋಗದ ನಾಲ್ಕು ರಾಶಿಗಳು ಯಾವ್ಯಾವು ಎಂಬುದನ್ನ ತಿಳಿಯೋಣ. ಮೊದಲಿಗೆ ಮಕರ ರಾಶಿ. ಮಕರ ರಾಶಿಯ ಜನರಿಗೆ ಈ ವರ್ಷ ಶುಭಾರಂಭ ಎಂದು ಹೇಳಬಹುದು. ಜೀವನದಲ್ಲಿ ಸಾಧನೆ ಮಾಡಬೇಕು. ಅದಕ್ಕಾಗಿ ಯಾವ ರೀತಿಯ ಪರಿಶ್ರಮಕ್ಕೂ ಸೈ ಎನ್ನುವ ಗುಣ ಹೊಂದಿರುವ ಇವರಿಗೆ ಈ ಬಾರಿ ಅದೃಷ್ಟ ಕೂಡಿ ಬರಲಿದೆ. ಇನ್ನೂ ಈ ಮಕರ ರಾಶಿಯವರಿಗೆ ವ್ಯಾಪಾರ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಇರುವ ಕಾರಣ ಸ್ವಯಂ ಉದ್ಯೋಗ ‌ಆರಂಭಿಸಲು ಇದು ಸೂಕ್ತ ಸಮಯವಾಗಿರುತ್ತದೆ.

ಇನ್ನು ಎರಡನೇಯ ಅದೃಷ್ಟ ರಾಶಿ ಅಂದರೆ ಕನ್ಯಾ ರಾಶಿ. ಈ ರಾಶಿಯ ಜನರಿಗೆ ಐಷಾರಾಮಿ ಜೀವನ ನಡೆಸಬೇಕು ಎಂಬ ಮಹಾದಾಸೆಯ ಬಾಗಿಲು ತೆರೆಯುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಇಷ್ಟು ವರ್ಷಗಳ ಕಾಲ ಶ್ರಮಪಟ್ಟು ದುಡಿದ್ದಕ್ಕೆ ಉತ್ತಮ ಪ್ರತಿಫಲ ದೊರೆಯಲಿದೆ. ಪ್ರತಿಯೊಂದು ಕೆಲಸ ಕಾರ್ಯದಲ್ಲಿಯೂ ಅತ್ಯಂತ ಪ್ರಾಮಾಣಿಕತೆಯಿಂದ ಸಮರ್ಪಣಾಭಾವದಿಂದಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಇವರಿಗೆ ಈ ವರ್ಷ ತಮ್ಮಿಷ್ಟದ ಯಾವುದೇ ಕ್ಷೇತ್ರಗಳಿಗೆ ಮುನ್ನುಗ್ಗಿದ್ದರು ಸಹ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ಅನ್ಯರ ಬಗ್ಗೆ ಕೊಂಚ ಜಾಗರೂಕತೆ ಇದ್ದರೆ ಕ್ಷೇಮ.

ದ್ವಾದಶ ರಾಶಿ ಚಕ್ರಗಳಲ್ಲಿ ವಿಶಿಷ್ಟ ರಾಶಿಯಾಗಿ ಗುರುತಿಸಿಕೊಳ್ಳುವ ಸಿಂಹ ರಾಶಿಯ ವ್ಯಕ್ತಿಗಳು ಕೂಡ ಈ ಬಾರಿ ತುಂಬಾ ಒಳಿತನ್ನ ಅನುಭವಿಸಲಿದ್ದಾರೆ. ಮೂಲತಃ ಇವರ ಸ್ವಭಾವವೇ ಕ್ಯಾಪ್ಟನ್ ಶಿಪ್ ವ್ಯಕ್ತಿತ್ವ ಆಗಿರುವುದರಿಂದ ಹೊಸ ಬಗೆಯ ಜವಾಬ್ದಾರಿಗಳು ಹೆಗಲೇರಲಿವೆ. ಜೊತೆಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ಯೋಗವಿದೆ. ಈ ವರ್ಷದ ಅಂತ್ಯದಲ್ಲಿ ನೂತನ ಮನೆ ಖರೀದಿ ಮಾಡುವ ಯೋಗವಿರುತ್ತದೆ. ಇವರಲ್ಲಿರುವ ಸಾಮಾಜಿಕ ಕಳಕಳಿಗೆ ಸೂಕ್ತ ಸ್ದಾನಮಾನ ಗೌರವ ಸಿಗಲಿದೆ.

ಇನ್ನು ಈ ವರ್ಷದಲ್ಲಿ ಅದೃಷ್ಟ ಪಡೆದಿರುವ ಮತ್ತೊಂದು ರಾಶಿ ಅಂದರೆ ಅದು ವೃಷಭ ರಾಶಿ. ವೃಷಭ ರಾಶಿಯ ವ್ಯಕ್ತಿಗಳಿಗೆ ತಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳಲು ಉತ್ತಮ ಮಾರ್ಗದರ್ಶನ ನೀಡುವ ವ್ಯಕ್ತಿ ಪರಿಚಯವಾಗಲಿದ್ದಾರೆ. ಆರ್ಥಿಕವಾಗಿ ಈ ವರ್ಷ ಚೇತರಿಕೆ ಕಂಡು ಸಧೃಢರಾಗುವ ಸಾಧ್ಯತೆ ಇದೆ. ಮನೆಯ ಹಿರಿಯ ಸದಸ್ಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಮನೆಯಲ್ಲಿ ಶುಭ ಕಾರ್ಯಗಳು ಜರುಗಲಿವೆ. ಇವರಲ್ಲಿರುವ ತಾಳ್ಮೆ, ಸಹನೆ, ಸೌಜನ್ಯತೆಯ ಸ್ವಭಾವ ಇವರನ್ನ ಮತ್ತಷ್ಟು ಉನ್ನತ ಮಟ್ಟಕ್ಕೆ ಕರೆದೊಯ್ಯಲಿದೆ.

%d bloggers like this: