ಈ ವರ್ಷ ಈ ರಾಶಿಯವರಿಗೆ ಪ್ರೀತಿ ಒಲಿಯುವ ಸಾಧ್ಯತೆಗಳು ಹೆಚ್ಚಾಗಿವೆ

2022ನೇ ವರ್ಷದ ಈ ಆರು ರಾಶಿಯ ಜನರಿಗೆ ಜೀವನದಲ್ಲಿ ಹೊಸ ಪ್ರೀತಿಯೊಂದು ಹುಡುಕಿಕೊಂಡು ಬರಲಿದೆ. ಋಣಾನುಬಂಧ ರೂಪೇಣ ಪಶುಪತಿ ಸುತಾಲಯ ಅನ್ನುವಂತೆ ಪ್ರತಿಯೊಬ್ಬ ವ್ಯಕ್ತಿಗೆ ಇನ್ನೊಂದು ಪ್ರೀತಿಸುವ ಜೀವ ಸಿಗಬೇಕಾದರೆ ಅದಕ್ಕೆ ಋಣ ಎಂಬುದು ಇರಲೇಬೇಕಾಗಿರುತ್ತದೆ. ಕೆಲವರಿಗೆ ಪ್ರೀತಿ ಸಿಕ್ಕಿರುತ್ತದೆ. ಅದನ್ನ ಕಂಡುಕೊಳ್ಳುವಲ್ಲಿ ಅವರು ಸೋತಿರುತ್ತಾರೆ. ಕೆಲವರಿಗೆ ಪ್ರೀತಿ ಸಿಕ್ಕಿರುವುದಿಲ್ಲ. ಆದರೆ ಅವರು ತಮ್ಮ ಗೆಳತಿ ತೋರುತ್ತಿದ್ದ ವಿಶ್ವಾಸ, ಸ್ನೇಹವನ್ನೇ ಪ್ರೀತಿ ಎಂದು ಭಾವಿಸಿರುತ್ತಾರೆ. ಆದರೆ ಅದು ಅಸಲಿಗೆ ನಿಜವಾದ ಪ್ರೀತಿ ಆಗಿರುವುದಿಲ್ಲ. ಪ್ರತಿಯೊಬ್ಬರಿಗೂ ಕೂಡ ಪ್ರೀತಿ ಎಂಬುದು ಆಗಿರುತ್ತದೆ. ಅದನ್ನ ಕೆಲವರು ಪಡೆದು ಅನುಭವಿಸುತ್ತಾರೆ. ಇನ್ನೂ ಕೆಲವರು ಅದನ್ನ ನಿರ್ಲಕ್ಷ್ಯ ಮಾಡಿ ಅಥವಾ ತಮ್ಮದಲ್ಲ, ತಮಗೆ ಈ ಪ್ರೀತಿ ಪ್ರೇಮ ಸರಿ ಹೊಂದುವುದಿಲ್ಲ ಎಂದು ದೂರ ಸರಿದು ಬಿಡುತ್ತಾರೆ. ಪ್ರತಿಯೊಬ್ಬ ವ್ಯಕ್ತಿಗೂ ನನಗೂ ಕೂಡ ಒಬ್ಬ, ಒಬ್ಬಳು ಪ್ರೀತಿಸುವ ಗೆಳತಿ, ಗೆಳೆಯ ಇರಬೇಕು ಎಂಬ ಆಸೆಯಂತೂ ಇದ್ದೇ ಇರುತ್ತದೆ.

ಅಂತೆಯೇ ಕೆಲವು ರಾಶಿ ಚಕ್ರಗಳು ಗ್ರಹಗತಿಗಳ ಆಧಾರದ ಮೇಲೆ ಆಯಾಯ ರಾಶಿಯ ಜನರ ಜೀವನದ ಈ ಪ್ರೀತಿ ಪ್ರೇಮ ಭವಿಷ್ಯವನ್ನ ತಿಳಿಸುತ್ತದೆ. ಅಂತಹ ರಾಶಿಗಳಲ್ಲಿ ಈ ವರ್ಷದಲ್ಲಿ ಈ ಆರು ರಾಶಿಗಳು ಬಹಳ ಉತ್ತಮ ಫಲಾಫಲಗಳನ್ನ ಹೊಂದಿರುತ್ತದೆ. ಅದರಲ್ಲಿ ಪ್ರಮುಖಲಾಗಿ ಮೊದಲನೇಯದಾಗಿ ಮೀನ ರಾಶಿ . ಮೀನ ರಾಶಿಯ ವ್ಯಕ್ತಿಗಳಿಗೆ ಈ ಬಾರಿ ತಮ್ಮನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಜೀವ ಸಿಗುತ್ತದೆ. ಈ ವ್ಯಕ್ತಿ ನಿಮಗಾಗಿ ಎಲ್ಲಾದಕ್ಕೂ ಸಿದ್ದರಾಗಿರುತ್ತಾರೆ. ನಿಮ್ಮ ಜೀವನದ ಯಶಸ್ಸಿಗಾಗಿ ಅವರು ತುಂಬಾ ಪ್ರಾಮಾಣಿಕರಾಗಿ ನಿಮ್ಮ ಬೆನ್ನೆಲುಬಾಗಿ ನಿಲ್ಲುತ್ತಾರೆ.

ಮೀನ ರಾಶಿಯ ವ್ಯಕ್ತಿಗಳಿಗೆ ಈ ಬಾರಿಯ ಪ್ರೇಮಿಗಳ ದಿನಾಚರಣೆ ದಿನದಂದು ನಿಮ್ಮ ಇಚ್ಚೆಯಂತೆ ಇರುವ ವ್ಯಕ್ತಿ ನಿಮ್ಮನ್ನ ಹರಸಿ ಬರಲಿದ್ದಾರೆ. ಯಾವುದೇ ಕಾರಣಕ್ಕೂ ಈ ಬಾರಿ ನಿಮ್ಮ ಜೊತೆ ಇರ್ತಿನಿ ಎಂದು ಬರುವ ವ್ಯಕ್ತಿಯನ್ನ ಮಿಸ್ ಮಾಡ್ಕೋಬೇಡಿ. ಅದು ಹುಡುಗರಾಗಲಿ, ಹುಡುಗಿಯರಾಗಲಿ ಎದುರಾಗುವ ಎಲ್ಲಾ ಸಮಸ್ಯೆಗಳನ್ನ ಧೈರ್ಯವಾಗಿ ಎದುರಿಸಿ ಮುನ್ನೆಡೆದರೆ ಉತ್ತಮ ಜೀವನ ನಿಮ್ಮದಾಗಿರುತ್ತದೆ. ಧನು ರಾಶಿ, ಈ ಧನು ರಾಶಿ ಅವರಿಗೆ ಈ ವರ್ಷ ನಿರೀಕ್ಷೆ ಇಲ್ಲದೇ ಸಂಗಾತಿ ಸಿಗುತ್ತಾರೆ. ಸಹಜವಾಗಿ ಆಕರ್ಷಕ ವ್ಯಕ್ತಿತ್ವ ಇರುವ ಇವರು ಇತರರನ್ನ ಬಹುಬೇಗ ಸೆಳೆಯುತ್ತಾರೆ. ಆದರೆ ಪ್ರೀತಿ ಪ್ರೇಮ ಅಂದಾಕ್ಷಣ ಹಿಂದೆ ಸರಿಯುತ್ತಾರೆ. ಆದರೆ ಈ ಬಾರಿ ಪ್ರೀತಿಯಲ್ಲಿ ಮುಳುಗಿ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುವ ಎಲ್ಲಾ ಅವಕಾಶಗಳು ಇದ್ದೇ ಇರುತ್ತದೆ ಎಂದು ಜ್ಯೋತಿಷ್ಯದಲ್ಲಿ ತಿಳಿಸಲಾಗಿದೆ.

ವೃಶ್ಚಿಕ ರಾಶಿ ಈ ರಾಶಿಯ ಜನರಲ್ಲಿ ಮದುವೆ ಆಗಬೇಕು ಎಂಬ ಆಸೆ ಇರುತ್ತದೆ. ಆದರೆ ಇವರಿಗೆ ಸೂಕ್ತವಾದ ಸಂಗಾತಿ ಸಿಗುತ್ತಿರಲಿಲ್ಲ‌. ಇದೀಗ ಈ ಒಳ್ಳೆಯ ಕಾಲ ಹುಡುಕಿಕೊಂಡು ಬಂದಿದೆ. ಈ ವರ್ಷ ಪ್ರೀತಿಯಾಗಿ ಅವರನ್ನು ಅರ್ಥ ಮಾಡಿಕೊಳ್ಳಲು ಅವರೊಟ್ಟಿಗೆ ಹೆಚ್ಚು ಕಾಲ ಸಮಯ ಕಳೆಯುತ್ತಾರೆ. ನಿಮ್ಮ ಅಭಿರುಚಿ ಆಸೆ ಆಕಾಂಕ್ಷೆಗಳಿಗೆ ತಕ್ಕಂತೆ ಇರುವ ವ್ಯಕ್ತಿಯೇ ನಿಮ್ಮ ಬಾಳ ಸಂಗಾತಿಯಾಗಿ ಸಿಗುತ್ತಾರೆ. ಆದಷ್ಟು ಕೆಲವು ಹೊಂದಾಣಿಕೆ ಮಾಡಿಕೊಳ್ಳಲು ಸಿದ್ದರಾಗಿರಬೇಕು. ಕನ್ಯಾ ರಾಶಿ ಈ ರಾಶಿಯ ಬಹುತೇಕ ವ್ಯಕ್ತಿಗಳು ಭಗ್ನ ಪ್ರೇಮಿಗಳಾಗಿರುತ್ತಾರೆ. ಅಂದರೆ ಈ ರಾಶಿಯ ವ್ಯಕ್ತಿಗಳು ಉದಾತ್ತ ಗುಣಗಳನ್ನ ಹೊಂದಿರುವವರು.

ಈಗಾಗಲೇ ಪ್ರೀತಿಸಿ ಅವರಿಂದ ಮೋಸ ಹೋಗಿರುವ ಅನೇಕರಿಗೆ ಈ ಫೆಬ್ರವರಿ 14ರಂದು ಮತ್ತೆ ತಮ್ಮ ಹಳೇ ಪ್ರೀತಿ ಹುಡುಕಿಕೊಂಡು ಬರಲಿದೆ. ತಮ್ಮ ತಮ್ಮ ತಪ್ಪುಗಳ ತಿದ್ದಿಕೊಂಡು ಒಂದಾಗುವ ಜೋಡಿಗಳು ಮಂದಿನ ತಮ್ಮ ಉತ್ತಮ ಭವಿಷ್ಯದ ಬಗ್ಗೆ ಚಿಂತನೆ ನಡೆಸುತ್ತಾರೆ. ಕರ್ಕಾಟಕ ರಾಶಿ.. ಈ ರಾಶಿಯ ಜನರಿಗೆ ಈ 2022 ವರ್ಷ ಭಾರಿ ಅದೃಷ್ಟ ತಂದುಕೊಡುವ ವರ್ಷ ಆಗಿದೆಯಂತೆ. ಇವರಿಗೆ ಹೊಸ ವ್ಯಕ್ತಿಯ ಪರಿಚಯ, ಸ್ನೇಹ ಪ್ರೀತಿಯಾಗಿ ನಿರೀಕ್ಷೆಗೂ ನಿಲುಕದಂತೆ ಮದುವೆ ಆಗುವ ಅವಕಾಶ ಇದೆಯಂತೆ. ಮನೆ ಬಾಗಿಲಿಗೆ ಬರುವ ಅದೃಷ್ಟವನ್ನ ಯಾವುದೇ ಕಾರಣಕ್ಕೂ ಹೊದೆಯುವ ಪ್ರಯತ್ನ ಮಾಡಬೇಡಿ. ನಿಮ್ಮ ಜೀವನದಲ್ಲಿ ಬರುವ ಈ ವ್ಯಕ್ತಿ ನಿಮಗೆ ವಿಶೇಷವಾಗಿ ಇರುತ್ತಾರೆ. ನಿಮ್ಮ ಎಲ್ಲಾ ಕನಸುಗಳು ನನಸಾಗಲು ಪ್ರೇರಕರಾಗಿ ನಿಮ್ಮ ಜೊತೆ ಇರುತ್ತಾರೆ‌.

ಇನ್ನು ಈ ಪ್ರೀತಿಯ ವಿಷಯದಲ್ಲಿ ಶುಭ ಸೂಚಕ ಕಾಣುವ ಆರನೇ ರಾಶಿಯಾಗಿ ವೃಷಭ ರಾಶಿಯವರಾಗಿದ್ದು, ಇಷ್ಟು ದಿನಗಳ ಕಾಲ ಮದುವೆಯೇ ಬೇಡ ಒಂಟಿ ಜೀವನ ನಡೆಸುತ್ತೇನೆ ಎಂದು ನಿರ್ಧರಿಸಿದ್ದ ವ್ಯಕ್ತಿಗಳೇ ಪ್ರೀತಿ ಮಾಡಿ ಮದುವೆ ಆಗಲಿದ್ದಾರೆ. ವೃಷಭ ರಾಶಿಯ ವ್ಯಕ್ತಿಗಳು ಅತ್ಯಂತ ನಿಷ್ಠೆ ಪ್ರಾಮಾಣಿಕರಾಗಿರುವ ಕಾರಣ ಇವರಿಗೆ ಒಳ್ಳೆಯದ್ದೇ ಆಗುತ್ತದೆ. ಆದರೆ ಆತುರದ ನಿರ್ಧಾರ ಬೇಡ. ಪರಸ್ಪರ ಒಮ್ಮತ ಇದ್ದರೆ ಮಾತ್ರ ನಿಮ್ಮ ಪ್ರೀತಿ ಪ್ರೇಮ ಸಂಬಂಧದಲ್ಲಿ ಮುಂದುವರಿಯಿರಿ ಅದನ್ನ ಹೊರತು ಪಡಿಸಿ ಅನಗತ್ಯವಾಗಿ ಯಾವುದೋ ಉದ್ದೇಶ ಇಟ್ಟುಕೊಂಡು ಈ ಪವಿತ್ರ ಪ್ರೀತಿಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಲು ಹೋಗಬೇಡಿ.

%d bloggers like this: