ಈ ವರ್ಷದ ಮಿಸ್ ಇಂಡಿಯಾ ಕಿರಿಟ ಗೆದ್ದ ಕರ್ನಾಟಕದ ಸುಂದರಿ

ಹೌದು ಈ ಗ್ಲಾಮರ್ ಲೋಕದ ಮೂಲಕ ಇತ್ತೀಚೆಗೆ ಕರ್ನಾಟಕದ ಹಿರಿಮೆ ಹೆಚ್ಚಾಗುತ್ತಲೇ ಇದೆ. ಅದೂ ಸಿನಿಮಾ ಇರಬಹುದು. ಮಾಡಲಿಂಗ್ ಲೋಕದ ಮೂಲಕ ಇರಬಹುದು. ಇನ್ನಿತರ ಕ್ಷೇತ್ರ ಸಾಧನೆಯ ಮೂಲಕ ಸಹ ಕರ್ನಾಟಕಕ್ಕೆ ಕೀರ್ತಿ ಬಂದಿದೆ. ಕನ್ನಡ ಸಿನಿಮಾಗಳು ಇತ್ತೀಚೆಗೆ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ನಮ್ಮ ಕಲಾವಿದರು ಸಹ ಪ್ರಸಿದ್ದತೆ ಗಳಿಸುತ್ತಿದ್ದರು. ಅದೇ ರೀತಿ ಇದೀಗ ಮಾಡ್ಲೆಂಗ್ ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ ನಮ್ಮ ಉಡುಪಿ ಮೂಲದ ಸಿನಿ ಶೆಟ್ಟಿ. ಹೌದು ರೂಪದರ್ಶಿ ಸಿನಿ ಶೆಟ್ಟಿ ಮಿಸ್ ಇಂಡಿಯಾ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಿನಿ ಶೆಟ್ಟಿ ಅವರು ಹುಟ್ಟಿ ಬೆಳೆದಿದ್ದೆಲ್ಲಾ ಮುಂಬೈನಲ್ಲೇ. ಇವರ ತಂದೆ ಸದಾನಂದ ಶೆಟ್ಟಿ ಮುಂಬೈನಲ್ಲಿ ಹೋಟೇಲ್ ಉದ್ಯಮ ನಡೆಸುತ್ತಿದ್ದಾರೆ. ನವವತ್ತು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿರುವ ಸದಾನಂದ ಶೆಟ್ಟಿ ಅವರು ಉಡುಪಿಯ ಕಾಪು ತಾಲ್ಲೂಕಿನ ಇನ್ನಂಜೆ ಗ್ರಾಮದ ಮಡುಂಬು ನಿವಾಸಿಯಾಗಿದ್ದಾರೆ.

ತನ್ನ ತಂದೆಯ ಹುಟ್ಟೂರಿಗೆ ರಜೆ ಸಿಕ್ಕಾಗಲೆಲ್ಲಾ ಸಿನಿಶೆಟ್ಟಿ ಬರುತ್ತಿದ್ದರಂತೆ. ಅಜ್ಜ ಅಜ್ಜಿ ಜೊತೆಗೆ ಹೆಚ್ಚು ಕಾಲ ಕಳೆಯಲು ಇಷ್ಟ ಪಡುತ್ತಾರಂತೆ ಸಿನಿ ಶೆಟ್ಟಿ. ಅವರಿಗೆ ಊರಿನ ಗದ್ದೆ ಹೊಲ, ಹಸು ದನ ಕರುಗಳನ್ನ ಕಂಡರೆ ಬಲು ಪ್ರೀತಿ ಅಂತೆ. ಇವರ ತಾತ ರಾಮಣ್ಣ ಅವರು ಮೊಮ್ಮಗಳು ಮಿಸ್ ಇಂಡಿಯಾ ಆಗಿರೋದನ್ನ ಕೇಳಿ ಅತೀವ ಸಂತೋಷ ಪಟ್ಟಿದ್ದಾರೆ. ತನ್ನ ಮೊಮ್ಮಗಳು ಸಿನಿ ಶೆಟ್ಟಿ ಬಾಲ್ಯದಿಂದಾನು ತುಂಬಾ ಚ್ಯೂಟಿ ಆಗಿದ್ದಳು. ಅವಳಿಗೆ ತಂದೆ ತಾಯಿಯಂತೆ ದೇವರ ಮೇಲೆ ಅಪಾರ ಭಕ್ತಿ. ಊರಿನ ಬಗ್ಗೆ ಕೂಡ ತುಂಬಾ ಹೆಮ್ಮೆ ಇಟ್ಟುಕೊಂಡಿದ್ದಾಳೆ. ನಮ್ಮೂರಿನ ಎಲ್ಲಾ ದೈವ ಕಾರ್ಯಗಳಿಗೆ ಬರುತ್ತಾಳೆ. ಅಲ್ಲದೆ ಅವಳಿಗೆ ಹಳ್ಳಿಯ ವಾತಾವರಣ ಅಂದರೆ ತುಂಬಾ ಅಚ್ಚುಮೆಚ್ಚು ಎಂದು ತನ್ನ ಮೊಮ್ಮಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ರಾಮಣ್ಣ.

ಅದೇ ರೀತಿ ಸಿನಿ ಶೆಟ್ಟಿ ಅಜ್ಜಿ ಶಶಿಕಲಾ ಅವರು ಸಹ ತನ್ನ ಮೊಮ್ಮಗಳ ಬಗ್ಗೆ ಸಿನಿಶೆಟ್ಟಿ ನಮ್ಮನ್ನ ತುಂಬಾ ಪ್ರೀತಿಸುತ್ತಾಳೆ. ನಮ್ಮನ್ನ ಮುಂಬೈಗೆ ಕರೆಸಿಕೊಂಡು ತುಂಬಾ ಚೆನ್ನಾಗಿ ಹಾರೈಕೆ ಮಾಡುತ್ತಾಳೆ. ಅವಳೆಂದರೆ ನಮಗೂ ತುಂಬಾ ಅಚ್ಚು ಮೆಚ್ಚು. ಸಿನಿಶೆಟ್ಟಿ ಮಿಸ್ ಇಂಡಿಯಾ ಮಾತ್ರ ಅಲ್ಲ ಮಿಸ್ ವರ್ಲ್ಡ್ ಕೂಡ ಆಗುತ್ತಾಳೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಸಿನಿಶೆಟ್ಟಿ ಅಜ್ಜಿ ಶಶಿಕಲಾ. ಇನ್ನು ಮಿಸ್ ಇಂಡಿಯಾ ಆಗಿರುವ 21ವರ್ಷದ ಸಿನಿಶೆಟ್ಟಿ ಸಿ.ಎಫ್.ಎ ಅಧ್ಯಾಯನ ಮಾಡುತ್ತಿದ್ದಾರೆ. ನಾಲ್ಕು ವರ್ಷದಿಂದಾನೇ ಭರತನಾಟ್ಯ ಅಭ್ಯಾಸ ಮಾಡಿರುವ ಸಿನಿಶೆಟ್ಟಿ ನೃತ್ಯದಲ್ಲಿಯೂ ಕೂಡ ಪರಿಣಿತಿ ಹೊಂದಿದ್ದಾರೆ. ಇನ್ನು ಸಿನಿಶೆಟ್ಟಿ 202 ರ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ವಿನ್ನರ್ ಆಗಿರುವುದರಿಂದ ಅವರ ಕುಟುಂಬ ಮತ್ತು ಅವರ ಊರಿನ ಜನರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಕನ್ನಡತಿ ಮಿಸ್ ಇಂಡಿಯಾ ಕಿರೀಟ ತೊಟ್ಟಿರುವುದು ಇಡೀ ಕರ್ನಾಟಕವೇ ಹೆಮ್ಮೆ ಪಡುವಂತಾಗಿದೆ.

%d bloggers like this: