ಹಿರಿಯರು ಹೇಳುವ ಹಾಗೆ ಸಂಪಾದನೆಗಿಂತ ಉಳಿತಾಯವೇ ಸಂಪಾದನೆ ಆದರೆ ಈ ಸಂಪಾದನೆಯನ್ನು ಎಷ್ಟೇ ಮಾಡಿದರೂ ಸಹ ತಿಂಗಳ ಕೊನೆಯಲ್ಲಿ ಸಾವಿರ ರೂಪಾಯಿ ಉಳಿಸಲಾಗುವುದಿಲ್ಲ. ಕೆಲವರು ಲಕ್ಷ ಸಂಬಳ ತೆಗೆದುಕೊಂಡರೂ ಆಸೆಯ ಬದುಕಿಗೆ ಒಳಾಗಾಗಿ ಹೆಚ್ಚು ಬೇಡದ ಕಮಿಟ್ ಮೆಂಟ್ ಮಾಡಿಕೊಂಡು ಒದ್ದಾಡುತ್ತಿರುತ್ತಾರೆ. ಇಂತಹ ವ್ಯಕ್ತಿಗಳು ಈ ಒಂದು ವಿಶೇಷ ಮತ್ತು ಅಪರೂಪದ ವಸ್ತುವನ್ನು ತಂದು ಮನೆಯಲ್ಲಿಟ್ಟು ಶ್ರದ್ದಾಭಕ್ತಿಯಿಂದ ಪೂಜೆ ಮಾಡಿದರೆ ಅವರು ಕುಬೇರಸ್ಥಾನಕ್ಕೆ ತಲುಪುತ್ತಾರೆ ಎಂಬುದು ನಂಬಿಕೆ. ಹಾಗದರೆ ಯಾವುದು ಆ ವಿಶೇಷ ವಸ್ತು ಅಂತೀರಾ, ಹೌದು ಪ್ರಕೃತಿ ನಮಗೆ ಎಷ್ಟು ಮೌಲ್ಯಯುತ ವಸ್ತುಗಳನ್ನು ನೈಸರ್ಗಿಕವಾಗಿ ಅವುಗಳನ್ನು ಉಚಿತವಾಗಿ ನಮಗೆ ನೀಡಿದ್ದಾನೆ. ಏಕಾಕ್ಷಿ ತೆಂಗಿನಕಾಯಿ ಅಂದರೆ ತೆಂಗಿನ ಕಾಯಿಯ ಮೇಲ್ಭಾಗದಲ್ಲಿ ಸಾಮಾನ್ಯವಾಗಿ ಮೂರುಕಣ್ಣನ್ನು ಹೊಂದಿರುತ್ತವೆ. ಆದರೆ ಈ ಏಕಾಕ್ಷಿ ಒಂದೇ ಕಣ್ಣು ಹೊಂದಿರುವ ತೆಂಗಿನಕಾಯಿ ಸಿಗುವುದು ಅಪರೂಪದಲ್ಲಿ ಅಪರೂಪ ಇದೊಂದು ವಿಶೇಷವಾದಂತಹ ತೆಂಗಿನಕಾಯಿ ಇದನ್ನು ತಂದು ಮನೆಯ ಪೂಜಾ ಕಾರ್ಯಗಳು ನಡೆಯುವಾಗ ಅಂದರೆ ಲಕ್ಷ್ಮಿ ಪೂಜೆ, ಸತ್ಯನಾರಾಯಣ ಪೂಜೆ, ಗೃಹ ಪ್ರವೇಶ ಸಂಧರ್ಭದಲ್ಲಿ ಈ ಏಕಾಕ್ಷಿ ತೆಂಗಿನಕಾಯಿಯನ್ನು ಇಟ್ಟು ಕಳಸ ರೂಪದಲ್ಲಿರಿಸಿ ದೀಪ ಹಚ್ಚಿ ಆರಾಧನೆ ಮಾಡಿದರೆ ಅಂತಹ ಮನೆಯವರು ಕುಭೇರ ಸ್ಥಾನಕ್ಕೆ ತಲುಪುತ್ತಾರೆ ಎಂಬ ನಂಬಿಕೆಯಿದೆ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ಮಾಹಿತಿ ನೀಡುತ್ತಾರೆ.