ಈ ವಸ್ತುವನ್ನು ಮನೆಯಲ್ಲಿಡಬೇಕು, ಕಾಲಭೈರವನ ಕೃಪೆಯಿಂದ ಎಲ್ಲದರಲ್ಲೂ ಯಶಸ್ಸು ಸಿಗುವುದು

ಊರಿನ ಬಾವಿಗೆ ಬಿದ್ದರೂ ಊರಿನವರ ಬಾಯಿಗೆ ಬೀಳಬಾರದಂತೆ. ನಿಮ್ಮ ಪ್ರಗತಿ, ಅಭಿವೃದ್ದಿ ಜನರ ಕಣ್ಣಿಗೆ ಬಿದ್ದರೆ ಸಾಕು ಅವರು ಏನಾದರು ನಿಮ್ಮನ್ನು, ನಿಮ್ಮ ಬೆಳವಣಿಗೆಯನ್ನು ನೋಡಿ ಹೊಟ್ಟೆಕಿಚ್ಚು ಅಸೂಯೆ ಪಟ್ಟಿರೆ ಅವರ ಕೆಟ್ಟ ದೃಷ್ಠಿಯಿಂದ ಅಲ್ಲಿಂದಲೇ ನಿಮಗೆ ಅಪಾಯ ಅನಿಷ್ಟ, ದರಿದ್ರ ಹುಟ್ಟಿಕೊಳ್ಳುವುದಕ್ಕೆ ಆರಂಭವಾಗುತ್ತವೆ. ಇದರಿಂದ ಆರಂಭವಾಗಿ ಮಾಟ ಮಂತ್ರ, ಶತ್ರು ದೋಷ, ಅಡಚಣೆ, ಅಶಾಂತಿಯಂತಹ ಸಮಸ್ಯೆಗಳು ಪ್ರಾರಂಭವಾಗಿ ಜೀವನದ ದಿಕ್ಕೇ ಸಂಪೂರ್ಣವಾಗಿ ಋಣಾತ್ಮಕ ದಾರಿ ಹಿಡಿಯುತ್ತದೆ. ಇಂತಹ ಸಮಸ್ಯೆಗಳಿಗೆ ಒಂದು ಪರಿಹಾರವಿದೆ ಇದಕ್ಕೆ ಬೇಕಾಗುವ ವಸ್ತು ಕೇವಲ ಕಪ್ಪು ಅರಿಶಿನ ಕೊಂಬು ಇದು ಎಲ್ಲೆಂದರಲ್ಲಿ ಸಿಗುವುದಿಲ್ಲ.

ಇದನ್ನು ಖರೀದಿಸ ಬೇಕಾದರೆ ಇಂದಿನ ದಿನಗಳಲ್ಲಿ ಆನ್ಲೈನ್ ಮೊರೆ ಹೋಗುವುದು ಅನಿವಾರ್ಯವಾಗಿರುತ್ತದೆ. ಈ ಒಂದು ವಸ್ತು ನಿಮ್ಮ ಮನೆಯಲ್ಲಿದ್ದರೆ ಕಾಲಭೈರವೇಶ್ವರನ ಕೃಪೆಯೊಂದಿಗೆ, ಲಕ್ಷ್ಮಿ ದೇವಿ ಮತ್ತು ಚಾಮುಂಡೇಶ್ವರಿಯ ಅನುಗ್ರಹ ಕೂಡ ನಿಮ್ಮ ಮೇಲೆ ಸದಾ ಇರುತ್ತದೆ. ನಿಮಗೆ ಶತ್ರು ಭಾದೆ, ವ್ಯಾಪಾರದಲ್ಲಿ ನಷ್ಟ,ಮಾಟ ಮಂತ್ರ ಹೀಗೆ ಕೆಲವು ಜ್ವಲಂತ ಸಮಸ್ಯೆಗಳಿಗೆ ಈ ಕಪ್ಪು ಅರಿಶಿನ ಕೊಂಬು ಏಕೈಕ ಪರಿಹಾರ ಮಾರ್ಗವಾಗಿದೆ. ನಿಮ್ಮನಿತ್ಯ ಜೀವನದಲ್ಲಿ ಈ ಅರಿಶಿನ ಕೊಂಬನ್ನು ಬಳಸುತ್ತೀರಿ. ಆದರೆ ಇದರ ಮಹತ್ವವನ್ನು ಹೆಚ್ಚು ಜನರು ಅರಿತಿರುವುದಿಲ್ಲ.ಈ ಕಪ್ಪು ಅರಿಶಿನ ಕೊಂಬನ್ನು ಮಾಟ ಮಂತ್ರ ದೋಷ ಪರಿಹಾರಕ್ಕಾಗಿ ಬಳಸುವುದುಂಟು. ಯಾರಿಗಾದರು ಶತ್ರುಭಯ, ಮೃತ್ಯು ಭಯ, ಅಪಘಾತ ಇಂತಹ ಘೋರ ಸಮಸ್ಯೆಯಿದ್ದವರು ಪರಿಹಾರಕ್ಕಾಗಿ ಉಪಯೋಗಿಸುತ್ತಾರೆ.

ಈ ಕಪ್ಪು ಅರಿಶನ ಕೊಂಬನ್ನು ಅಮವಾಸ್ಯೆ ಅಥವಾ ಹುಣ್ಣಿಮೆ ದಿನದಂದು ಖರೀದಿಸಿ ಅದನ್ನು ಹಾಲಿನಿಂದ ಸ್ವಚ್ಛಗೊಳಿಸಬೇಕು. ತದನಂತರ ಇದನ್ನು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಲಕ್ಷ್ಮಿ ದೇವಿಯ ಮುಂದೆ ಇಟ್ಟು ಸಂಕಲ್ಪ ಮಾಡಿಕೊಂಡು ನೈವೇದ್ಯ ಇಟ್ಟು ಆಧರಿಸಿ ಪೂಜೆ ಸಲ್ಲಿಸಿದರೆ ನಿಮ್ಮ ಎಲ್ಲಾ ದೋಷಗಳು, ಸಮಸ್ಯೆಗಳು ದೂರವಾಗುತ್ತವೆ. ನಿಮಗೆ ಏನಾದರು ಶತ್ರುಭಯ ಜನರ ದೃಷ್ಠಿ ತಗುಲಿದ್ದರೇ ಈ ಕಪ್ಪು ಅರಿಶಿನ ಕೊಂಬನ್ನು ಹಳದಿ ಬಟ್ಟೆ ಅಥವಾ ಕೆಂಪು ಬಟ್ಟೆಯಿಂದ ಸುತ್ತಿ ನಿಮ್ಮ ಮನೆಯ ಬಾಗಿಲ ಮೇಲ್ಭಾಗದಲ್ಲಿ ಕಟ್ಟಿ ಅಮವಾಸ್ಯೆ ಮತ್ತು ಹುಣ್ಣಿಮೆ ದಿನದಂದು ಪೂಜೆ ಮಾಡಿದರೆ ಒಳಿತಾಗವುದು. ಜನರ ದೃಷ್ಠಿ ನಿಮ್ಮ ಮೇಲೆ ಪ್ರಭಾವ ಬೀರುವುದಿಲ್ಲ.

ಇನ್ನು ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದರೆ ಗೋಧಿ ಹಿಟ್ಟನ್ನು ಉಂಡೆ ಮಾಡಿಟ್ಟುಕೊಂಡು ಅದರೊಂದಿಗೆ ಬೆಲ್ಲ ಮತ್ತು ಈ ಕಪ್ಪು ಅರಿಶಿನ ಕೊಂಬನ್ನು ಮಿಶ್ರಣಮಾಡಿ ಕಾಮಧೇನುವಿಗೆ ನೀಡುತ್ತಾ ಬಂದರೆ ಅನಾರೋಗ್ಯ ಸಮಸ್ಯೆಯಿಂದ ಮುಕ್ತಿಗೊಳ್ಳಬಹುದು. ಇನ್ನು ವ್ಯಾಪಾರ, ಉದ್ಯೋಗದಲ್ಲಿ ನಷ್ಟ ಹೊಂದಿದವರು ಹಸಿರು ಬಟ್ಟೆಯಲ್ಲಿ ಹನ್ನೊಂದು ಕಪ್ಪು ಅರಿಶಿನ ಕೊಂಬು, ಹನ್ನೊಂದು ಗೋಮತಿ ಚಕ್ರ, ಹನ್ನೊಂದು ಹಳದಿ ಬಣ್ಣದ ಕವಡೆಯನ್ನು ಸೇರಿಸಿ ನೀವು ಹಣಕಾಸು ಇಡುವ ಜಾಗ ಲಾಕರ್ ಅಥವಾ ಗಲ್ಲಾ ಪೆಟ್ಟಿಗೆಯ ಸ್ಥಳದಲ್ಲಿ ಇದನ್ನು ಇಟ್ಟು ಪೂಜೆ ಮಾಡಿದರೆ ನಿಮ್ಮ ಸಕಲ ದೋಷ ಸಮಸ್ಯೆಗಳು ಮುಕ್ತಿಗೊಂಡು ಜೀವನ ಮತ್ತೆ ಸುಖ ಸಂತೋಷದಿಂದ ಪ್ರಗತಿಯತ್ತ ಸಾಗುತ್ತದೆ.

%d bloggers like this: