ಈ ವಸ್ತುವನ್ನು ಪೂರ್ವ ದಿಕ್ಕಿನಲ್ಲಿ ಇಟ್ಟರೆ ಮನೆ ಸಮಸ್ಯೆಗಳು ಬಗೆಹರಿಯುತ್ತವೆ

ಕೆಲವೊಮ್ಮೆ ಕೆಲವು ವಿಚಾರಗಳಿಗೆ, ಅಧಿಕಾರಗಳಿಗೆ, ನಿಮಗೆ ಅರ್ಹತೆ ಇದ್ದರೂ ಸಹ ನಿಮ್ಮನ್ನು ಯಾರೂ ಗುರುತಿಸುವುದಿಲ್ಲ ಎಂದು ನೀವು ಕೊರಗುತ್ತಿದ್ದರೆ ನಿಮ್ಮ ಆಸನದ ಸ್ಥಳವನ್ನು ಕೊಂಚ ಬದಲಾಯಿಸ ಬೇಕಾಗಿರುತ್ತದೆ. ನೀವು ನಿಮ್ಮ ಕಛೇರಿಯಲ್ಲಿ ಉನ್ನತ ಅಧಿಕಾರಿಯಾಗಿದ್ದರು ಸಹ ನಿಮಗೆ ದೊರಕಬೇಕಾದ ಸ್ಥಾನ ಮಾನ ಮನ್ನಣೆ ದೊರೆಯದಿರುವುದು ನಿಮಗೆ ಹತಾಶೆಯನ್ನು ಉಂಟು ಮಾಡುವುದು ಸಹಜವಾಗಿರುತ್ತದೆ. ನಿಮ್ಮ ಸಹೋದ್ಯೋಗಿಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ, ಪಾರದರ್ಶಕತೆ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೂ ನಿಮಗೆ ನಿಮ್ಮ ಮೇಲ್ವರ್ಗದ ಅಧಿಕಾರಿಗಳು ನಿಮ್ಮನ್ನು ಕಡೆಗಣಿಸುತ್ತಿರುತ್ತಾರೆ.

ಇಂತಹ ಸಮಸ್ಯೆಗಳಿಂದ ನೀವು ಕಂಗೆಟ್ಟು ಕೂರುವ ಬದಲು ಸಮಸ್ಯೆಗೆ ಪರಿಹಾರ ಹುಡುಕುವುದಾದರೆ ಈ ಒಂದು ಸ್ಥಳ ಬದಲಾವಣೆಯಂತಹ ಕ್ರಮವನ್ನು ಅನುಸರಿಸಿ ನಿಮ್ಮ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳ ಬಹುದಾಗಿದೆ. ಹಾಗಾದರೆ ಈ ಸ್ಥಳ ಬದಲಾವಣೆಯನ್ನು ಯಾವ ದಿಕ್ಕಿಗೆ ಬದಲಾಯಿಸಬೇಕು ಯಾವ ಕಡೆಗೆ ಕೂರಬೇಕು ಎಂದಾದರೆ ನೀವು ಈಗ ಪ್ರಸ್ತುತವಾಗಿ ಕುಳಿತಿರುವ ಜಾಗವನ್ನು ಪೂರ್ವಭಿಮುಖವಾಗಿ ಬದಲಾಗಿಸಿ ಕೂರಬೇಕು ಇದು ನಿಮ್ಮ ಗೌರವ ಸ್ಥಾನ ಮಾನ, ಮನ್ನಣೆಗೆ ಪೂರಕವಾಗಿ ವಾತಾವರಣ ಸೃಷ್ಠಿ ಮಾಡುತ್ತದೆ ಎಂದು ಹಿರಿಯ ಜ್ಯೋತಿಷ್ಯ ಶಾಸ್ತ್ರಜ್ಞರು ತಿಳಿಸುತ್ತಾರೆ.

ಈ ರೀತಿಯ ಸ್ಥಳ ಬದಲಾವಣೆಯಿಂದಾಗಿ ಕೇವಲ ಉದ್ಯೋಗಸ್ಥರಿಗೆ ಅನುಕೂಲವಾಗದೇ ಸಣ್ಣ ಪುಟ್ಟ ವ್ಯಾಪಾರಸ್ಥರಿಗೂ ಕೂಡ ಇದು ಧನಲಾಭ ಆಗುತ್ತದೆ. ಕೆಲವರು ಬರುತ್ತಿರುವ ಸಂಬಳ ಸಾಕಾಗದೇ ಪ್ರವೃತ್ತಿಯಾಗಿ ಅಥವಾ ಅರೆಕಾಲಿಕ ವ್ಯವಹಾರವಾಗಿ ಬಿಸ್ಲೇರಿ ನೀರು ಸರಬರಾಜು, ಹಣ್ಣು ತರಕರಿ ಮಾರಾಟ ಹೀಗೆ ಒಂದಷ್ಟು ವ್ಯಾಪಾರದಲ್ಲಿ ನಷ್ಟ ಹೊಂದುತ್ತಿದ್ದರೆ, ನಿಮ್ಮ ಕ್ಯಾಶ್ ಕೌಂಟರ್ ಅನ್ನು ಪೂರ್ವ ದಿಕ್ಕಿನ ಅಭಿಮುಖವಾಗಿ ಇಟ್ಟು ವ್ಯಾಪಾರ ಮಾಡಿದರೆ ನಿಮ್ಮ ಎಲ್ಲಾ ವ್ಯವಹಾರಗಳು ಪ್ರಗತಿಯತ್ತ ಸಾಗುತ್ತವೆ ಎಂದು ತಿಳಿಸುತ್ತಾರೆ.

%d bloggers like this: