ಪ್ರೀತಿಗೆ ಕಣ್ಣಿಲ್ಲ, ಪ್ರೀತಿ ಮೂಡಲು ಯಾವುದೇ ಸಮಯ ಸಂದರ್ಭ ಇರುವುದಿಲ್ಲ ಎಂಬೆಲ್ಲ ಹೇಳಿಕೆಗಳು ನಿಜ. ಆದರೆ ಮಾಡಲ್ಪಟ್ಟ ಎಲ್ಲಾ ಪ್ರೀತಿಗಳು ಯಶಸ್ಸು ಕಾಣುವುದಿಲ್ಲ ಎಂಬುದು ಕೂಡ ಅಷ್ಟೇ ಸತ್ಯ. ಹೌದು ಪ್ರೀತಿ ಯಾವಾಗ ಯಾರಿಗೆ ಯಾರ ಮೇಲೆ ಆಗುತ್ತದೆ ಎಂಬುದು ಹೇಳಲು ಸಾಧ್ಯ. ಪ್ರೀತಿಯೆಂದರೆ ಕೇವಲ ಕೆಲವು ತಿಂಗಳು ಅಥವಾ ಕೆಲವು ವರ್ಷಗಳು ಮಾಡಿ ಮುಗಿಸುವ ಅಂತಹ ಪಯಣ ಅಲ್ಲ ಅದೊಂದು ನಿರಂತರವಾದದ್ದು. ಆದರೆ ನಾವು ನಮ್ಮ ಸುತ್ತಮುತ್ತ ಯಶಸ್ವಿ ಪ್ರೀತಿಗಳಿಗಿಂತ ಫೇಲಾದ ಪ್ರೀತಿಗಳನ್ನೇ ನೋಡುತ್ತೇವೆ. ಹೌದು ಹದಿನೆಂಟು-ಇಪ್ಪತ್ತು ಅಥವಾ ಕಾಲೇಜುಗಳಲ್ಲಿ ಉಂಟಾಗುವ ಪ್ರೀತಿ ಎಷ್ಟು ಶುದ್ಧವಾಗಿರುತ್ತದೆ ಅಥವಾ ಸತ್ಯವಾಗಿರುತ್ತದೆ ಎಂಬುದು ಮುಖ್ಯವಲ್ಲ. ಆ ಪ್ರೀತಿ ಎಷ್ಟು ನಿರಂತರವಾಗಿರುತ್ತದೆ ಎಂಬುದು ಮುಖ್ಯವಾಗುತ್ತದೆ. ಕಾಲೇಜಿನಲ್ಲಿ ಹುಟ್ಟುವಂತಹ ಪ್ರೀತಿಗಳು ಕುದುರೆ ನಾಗಾಲೋಟದಲ್ಲಿ ಓಡುತ್ತಿರುತ್ತವೆ. ಯಾವುದೇ ಮುಂದಾಲೋಚನೆಯಿಲ್ಲದೆ ಆ ಸಮಯಕ್ಕೆ ತೋಚಿದ ಭಾವನೆಗಳ ಮೇಲೆ ಅವಲಂಬಿತವಾಗಿರುತ್ತವೆ. ಈ ತರಹದ ಪ್ರೀತಿ ಸತ್ಯವೇ ಆಗಿದ್ದರೂ ಕೂಡ ಹಲವಾರು ಕಾರಣಗಳಿಂದ ಯಶಸ್ವಿಯಾಗುವುದಿಲ್ಲ. ಅಲ್ಲದೆ ಕೆಲವರ ಪ್ರೀತಿಯಂತು ಕೇವಲ ಸಿನಿಮಾ ಪ್ರೇರಿತವಾಗಿರುತ್ತದೆ. ಈ ತರಹದ ಪ್ರೀತಿ ಇನ್ನೂ ಕೆಟ್ಟದ್ದು.
ಆದರೆ ನಾವು ಈಗ ಹೇಳಹೊರಟಿರುವುದು ಈ ವಯಸ್ಸಿಲ್ಲಿ ಮತ್ತು ಅದರ ನಂತರ ಆಗುವ ಪ್ರೀತಿ ಶಾಶ್ವತವಾಗಿರುತ್ತದೆ. ಅದು ಯಾವ ವಯಸ್ಸು ಎಂದರೆ 28 ವರ್ಷ ಮತ್ತು ಅದರ ಆಸುಪಾಸು. ಹೌದು ಹಲವಾರು ಪ್ರೀತಿ ಅನುಭವಿಗಳು ಹೇಳುವ ಮಾತಿದು. ಈ ವಯಸ್ಸಿನಲ್ಲಿ ಆಗುವ ಪ್ರೀತಿ ಫೇಲ್ ಆಗುವುದಕ್ಕಿಂತ ಯಶಸ್ವಿಯಾಗುವುದೇ ಹೆಚ್ಚು. ಅದಕ್ಕೆ ಹಲವಾರು ಕಾರಣಗಳಿವೆ. ಈ ವಯಸ್ಸು ಮುಟ್ಟುವುದರಲ್ಲಿ ಹುಡುಗ ಆಗಲಿ ಹುಡುಗಿ ಆಗಲಿ ಭೌದ್ಧಿಕವಾಗಿ ತುಂಬಾ ಎತ್ತರ ಮಟ್ಟದಲ್ಲಿ ಬೆಳೆದಿರುತ್ತಾರೆ. ಜೀವನ ಎಂದರೇನು ಅದರ ಕಷ್ಟಕಾರ್ಪಣ್ಯಗಳು, ನೋವು ನಲಿವುಗಳು, ಜವಾಬ್ದಾರಿ ಎಂದರೇನು ಎಲ್ಲವನ್ನು ತಿಳಿದುಕೊಂಡೆ ಈ ವಯಸ್ಸು ತಲುಪಿರುತ್ತಾರೆ. ಇಂತಹ ಸಮಯದಲ್ಲಿ ಹುಟ್ಟುವ ಪ್ರೀತಿ ತುಂಬಾ ದೃಢನಿರ್ಧಾರದಿಂದ ಮತ್ತು ಹಲವು ಸಮಯದ ದೀರ್ಘ ಆಲೋಚನೆಗಳಿಂದ ಹುಟ್ಟಿರುತ್ತದೆ. ಹುಡುಗನಿಗೆ ಆಗಲಿ ಹುಡುಗಿಗೆ ಆಗಲಿ ತಮ್ಮ ಬಾಳ ಸಂಗಾತಿ ಹೇಗಿರಬೇಕು ಎಂಬ ಸ್ಪಷ್ಟ ಪರಿಕಲ್ಪನೆ ಮೂಡಿರುತ್ತದೆ. ಜೊತೆಗೆ ಮದುವೆ ಆಗಲು ಸೂಕ್ತ ಸಮಯ ಕೂಡ ಇರುತ್ತದೆ. ಆದ್ದರಿಂದ ಪ್ರೀತಿ ಆದರೂ ಕೂಡ ಮದುವೆಯಾಗಲು ಹೆಚ್ಚು ಸಮಯದ ಅಂತರ ಇರುವುದಿಲ್ಲ ಹೀಗಾಗಿ ಈ ಪ್ರೀತಿಗಳು ಬಹುತೇಕವಾಗಿ ಯಶಸ್ಸು ಕಾಣುತ್ತವೆ.