ಈ ರಾಜ್ಯದಲ್ಲಿ ಇಂದಿನಿಂದ ಶಾಲಾ ಕಾಲೇಜುಗಳು ಪ್ರಾರಂಭ

ದೇಶಾದ್ಯಂತ ಕೊರೋನ ವೈರಸ್ ಪ್ರಮಾಣ ಏರಿಕೆಯಲ್ಲಿ ಕಂಡುಬಂದರೂ ಅದರ ಜೊತೆಗೆ ಚೇತರಿಕೆಯ ಅಂಕಿ ಅಂಶಗಳು ಕೂಡ ಅದೇ ಪ್ರಮಾಣದಲ್ಲಿ ದ್ವಿಗುಣವಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳು ವಾಪಸ್ ಆಗುತ್ತಿದ್ದಾರೆ. ಹಾಗೇ ತಮಿಳುನಾಡಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದ್ದಂತೆ ಲಾಕ್ಡೌನ್ ನಲ್ಲಿ ಮತ್ತಷ್ಟು ಸಡಿಲ ಮಾಡಲಾಗುತ್ತಿದೆ. ಇದುವರೆಗೂ ವಿವಿಧ ಕ್ಷೇತ್ರಗಳಿಗೆ ರಿಯಾಯ್ತಿಯ ಮುಖಾಂತರ ಹಂತ ಹಂತವಾಗಿ ವ್ಯಾಪಾರ ವಹಿವಾಟುಗಳಿಗೆ ಅನುಕೂಲ ಮಾಡಿಕೊಟ್ಟಿತ್ತು. ಅದೇ ರೀತಿಯಾಗಿ ನವೆಂಬರ್ 16ರಿಂದ ಶಾಲಾಕಾಲೇಜುಗಳನ್ನು ಸಹ ಪುನರಾರಂಭಿಸಲು ಅಧಿಸೂಚನೆ ಹೊರಡಿಸಿದೆ. ಇದರ ಜೊತೆಗೆ ದೇವಸ್ಥಾನಗಳಿಗೂ ಸಾರ್ವಜನಿಕರಿಗೆ ಅವಕಾಶ ದೊರೆಯುವಂತೆ ನೀತಿ ನಿಯಮಗಳನ್ನು, ಕಟ್ಟುನಿಟ್ಟಾದ ಮಾರ್ಗಸೂಚಿಯನ್ನು ಆದೇಶದಲ್ಲಿ ಹೊರಡಿಸಲಾಗಿದೆ.

ಸಾರ್ವಜನಿಕ ಸಮಾರಂಭಗಳಲ್ಲಿ ಗರಿಷ್ಟ ನೂರು ಜನರು ಪಾಲ್ಗೊಳ್ಳ ಬಹುದು ಎಂದು ತಿಳಿಸಿದ್ದಾರೆ. ಮನರಂಜನಾ ಕ್ಷೇತ್ರಗಳಿಗೂ ಅವಕಾಶ ಮಾಡಿಕೊಟ್ಟಿದ್ದು ನವೆಂಬರ್ ಹತ್ತರಿಂದ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದೆ ಆದರೆ ಚಿತ್ರಮಂದಿರದಲ್ಲಿ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್, ಭೌತಿಕ ಅಂತರ ಕಾಪಾಡಬೇಕಿದೆ. ಮತ್ತು ಚಿತ್ರಮಂದಿರದ ಅರ್ಧಭಾಗದ ಸೀಟುಗಳು ಮಾತ್ರ ಭರ್ತಿಯಾಗಲು ಅವಕಾಶವಿದೆ. ವ್ಯಾಯಾಮ ಶಾಲೆಗಳಲ್ಲಿ, ಉದ್ಯಾವನಗಳಲ್ಲಿ ಐವತ್ತು ವಯಸ್ಸು ಒಳಗಿನವರೆಗೆ ಮಾತ್ರ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಆದೇಶದಲ್ಲಿ ಹೊರಡಿಸಿದ್ದಾರೆ.

%d bloggers like this: