ಲಂಡನ್ನಿನ ಕೆನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಏಕದಿನ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ದ ಹತ್ತು ವಿಕೆಟ್ ಗಳ ಭರ್ಜರಿ ಜಯವಾಗಿದೆ. ಈ ಭರ್ಜರಿ ಜಯಕ್ಕೆ ಜಸ್ ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರ ಕೊಡುಗೆ ಅಪಾರವಾದದ್ದು ಎಂದೇಳಬಹುದು. ಹೌದು ಇಂಗ್ಲೆಂಡ್ ವಿರುದ್ದದ ಏಕದಿನ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದರು ಕೂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇಂಗ್ಲೆಂಡ್ ತಂಡ ಮೊದಲ ಏಕದಿನದ ಪಂದ್ಯದಲ್ಲಿ 25.2 ಓವರ್ ಗಳಲ್ಲಿ 110ರನ್ ಕಲೆ ಹಾಕಿ ಎಲ್ಲಾ ವಿಕೆಟ್ ಗಳನ್ನು ಭಾರತದ ವೇಗಿ ಬೌಲರ್ ಗಳಿಗೆ ಶರಣಾಯಿತು. 111ರನ್ ಗಳ ಗುರಿ ಬೆನ್ನೆತ್ತಿದ ಭಾರತ ತಂಡ 18.4 ಓವರ್ ಗಳಲ್ಲಿಯೇ ವಿಕೆಟ್ ನಷ್ಟ ಇಲ್ಲದೇ 114 ರನ್ ಕಲೆ ಹಾಕಿತು. ರೋಹಿತ್ ಶರ್ಮಾ ಔಟ್ ಆಗದೇ 76 ರನ್ ಭಾರಿಸಿದರೆ, ಶಿಖರ್ ಧವನ್ ಔಟ್ ಆಗದೇ 31ರನ್ ಕಲೆ ಹಾಕಿದ್ರು. ಇಂಗ್ಲೆಂಡ್ ವಿರುದ್ದ ಮಂಗಳವಾರ ನಡೆದ ಏಕದಿನ ಪಂದ್ಯದಲ್ಲಿ ಭಾರತ ತಂಡ ಗೆಲ್ಲುವುದರ ಜೊತೆಗೆ ತಂಡದ ವೇಗದ ಬೌಲರ್ ಆಗಿರುವ ಮೊಹಮ್ಮದ್ ಶಮಿ ದಾಖಲೆಯೊಂದನ್ನ ಮಾಡಿದ್ದಾರೆ.

ಹೌದು ಮೊಹಮ್ಮದ್ ಶಮಿ ಆವರು ಇಂಗ್ಲೆಂಡ್ ತಂಡದ 3ವಿಕೆಟ್ ಕಬಳಿಸುವ ಮುಖಾಂತರ ಒನ್ ಡೇ ಟೆಸ್ಟ್ ನಲ್ಲಿ ಅತ್ಯಂತ ವೇಗದಲ್ಲಿ 150 ವಿಕೆಟ್ ಪಡೆದ ಭಾರತದ ಬೌಲರ್ ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ. ಮೊಹಮ್ಮದ್ ಶಮಿ ಎಂಭತ್ತು ಪಂದ್ಯಗಳಲ್ಲಿ 150 ವಿಕೆಟ್ ಗಳಿಸಿದ್ದಾರೆ. ಈ ಮೂಲಕ ಮೊಹಮ್ಮದ್ ಶಮಿ ಅವರು ಅಂತರಾಷ್ಟ್ರೀಯ ಕ್ರಿಕೆಟ್ ಏಕದಿನ ಪಂದ್ಯದಲ್ಲಿ 150 ವಿಕೆಟ್ ಪಡೆಯುವ ಮೂಲಕ ಐತಿಹಾಸಿದ ದಾಖಲೆ ಮಾಡಿದ್ದಾರೆ. ಇಂಗ್ಲೆಂಡ್ ತಂಡದ ಆಲ್ ರೌಂಡರ್ ಆಗಿರುವ ಬೆನ್ ಸ್ಟೋಕ್ ಅವರ ವಿಕೆಟ್ ತೆಗೆದ ನಂತರ ಭಾರತ ತಂಡ ಉತ್ಸಾಹ ಉಲ್ಲಾಸ ದುಪ್ಪಟ್ಟಾಯಿತು ಎಂದು ಹೇಳಬಹುದು. ಮಂಗಳವಾರ ನಡೆದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಏಳು ಓವರ್ ಗಳಲ್ಲಿ ಕೇವಲ ಮೂವತ್ತೊಂದು ರನ್ ನೀಡಿ ಮೂರು ವಿಕೆಟ್ ಪಡೆದಿದ್ದಾರೆ. ಇನ್ನು ಮೊಹಮ್ಮದ್ ಶಮಿ ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಅತೀ ವೇಗವಾಗಿ 150 ವಿಕೆಟ್ ಪಡೆದು ಐತಿಹಾಸಿಕ ಸಾಧನೆ ಮಾಡಿದ ಕಾರಣಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಗ್ರೇಟ್ ಎಂದು ಮೊಹಮ್ಮದ್ ಶಮಿ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.