ಎಳನೀರಿನಿಂದ ಬರಿ ಆರೋಗ್ಯ ಅಷ್ಟೇ ಅಲ್ಲ ಸೌಂದರ್ಯಕ್ಕೂ ಸಹಾಯಕ

ಎಲ್ಲರ ಆರೋಗ್ಯಗೆದ್ದ ನೈಸರ್ಗಿಕ ತಂಪು ಪಾನೀಯ ಎಳನೀರು, ಬೆಳಿಗ್ಗೆ ವಾಕಿಂಗ್ ಮುಗಿಸಿ ಮನೆಗೆ ಹೋಗುವವರಿಂದ, ಸಂಜೆ ಜಿಮ್ ಮಾಡಿ ಹೋಗುವವರೆಗೂ ಈ ಎಳನೀರು ಕುಡಿಯುವುದು ದಿನನಿತ್ಯದ ಕ್ರಮದಲ್ಲಿ ಸೇರಿಕೊಂಡಿದೆ. ಅಷ್ಟರಮಟ್ಟಿಗೆ ಎಳನೀರಿನ ಮಹತ್ವ, ಪ್ರಭಾವ ಜನರಲ್ಲಿ ಮೂಡಿದೆ. ಜೊತೆಗೆ ಆರೋಗ್ಯದ ಗುಟ್ಟು ಮತ್ತು ದೇಹ ಸೌಂದರ್ಯದ ರಹಸ್ಯವೂ ಕೂಡ ಆಗಿದೆ. ಈ ಎಳನೀರನ್ನು ಬೆಳಿಗ್ಗೆಯೇ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಮುಖದ ಕಾಂತಿಯನ್ನು ಮತ್ತು ಮುಖದ ಹೊಳಪನ್ನ ಹೆಚ್ಚಿಸುತ್ತದೆ. ಹಾಗಾದರೇ ಈ ಎಳನೀರಲ್ಲಿ ಯಾವರೀತಿಯ ಅಂಶಗಳು ಇರಬಹುದು ಎಂಬುದಕ್ಕೆ ಉತ್ತರಗಳು ಹೀಗಿವೆ, ಚರ್ಮದ ಸಮಸ್ಯೆಗಳಿಗೆ ಎಳನೀರು ತುಂಬಾ ಉಪಯುಕ್ತಕಾರಿಯಾಗಿದೆ, ಮುಖದಲ್ಲಿನ ಮೊಡವೆ, ಒಣಗುವಿಕೆಯನ್ನು ತಡೆಗಟ್ಟುತ್ತದೆ.

ಇದೊಂದು ರೀತಿಯಾಗಿ ಮಾಯಶ್ಚರೀಸ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ದೇಹತೂಕದ ಸಮತೋಲನವನ್ನು ಕಾಪಾಡುವಲ್ಲಿ ಎಳನೀರು ಪ್ರಯೋಜನಕಾರಿಯಾಗಿದೆ. ಪ್ರತಿನಿತ್ಯ ಎಳನೀರು ಕುಡಿಯುವುದರಿಂದ ದೇಹವನ್ನು ಸಧೃಡವಾಗಿಟ್ಟು ಕೊಳ್ಳಬಹುದು, ಜೊತೆಗೆ ಕೂದಲಿನ ಆರೈಕೆಗೆ ಸಹಕಾರಿಯಾಗಿದೆ ಈ ಎಳನೀರು. ಹಲವು ಸಲ ಗರ್ಭಿಣಿ ಮಹಿಳೆಯರಿಗೆ ವೈದ್ಯರು ಎಳನೀರನ್ನು ಕುಡಿಯುವಂತೆ ಸಲಹೆ ನೀಡುತ್ತಾರೆ.

ಕಾರಣ ಎಳನೀರಿನಲ್ಲಿ ಪೊಟ್ಯಾಷಿಯಂ ಅಂಶ ಹೆಚ್ಚಾಗಿರುತ್ತದೆ ಇದರಿಂದ ಮಾಂಸಖಂಡ, ಸ್ನಾಯುಗಳ ಸೆಳೆತ, ಎದೆಯುರಿಯಂತಹ ಸಮಸ್ಯೆಗಳಿಗೆ ಇದು ರಾಮಭಾಣವಾಗಿದೆ. ಅದಲ್ಲದೆ ಎಳನೀರಲ್ಲಿ ಎಲೆಕ್ಟ್ರೋ ಲೈಟ್ ಅಂಶ ಇರುವುದರಿಂದ ಕುಡಿತದ ಅಮಲನ್ನು ಇಳಿಸುವಂತಹ ಶಕ್ತಿಯಿರುತ್ತದೆ. ಹಾಗಾಗಿಯೇ ಕೆಲವರಿಗೆ ಕುಡಿದನಂತರ ಮಾರನೆಯ ದಿನ ತಲೆನೋವು ಬಂದಾಗ ಎಳನೀರು ಕುಡಿಯುವುದು, ಆದ್ದರಿಂದಲೇ ದೇಹದ ಆರೋಗ್ಯಕ್ಕೆ ಇಷ್ಟೆಲ್ಲಾ ಸಹಕಾರಿಯಾಗಿರುವ ಎಳನೀರನ್ನು ಸೇವಿಸುವಂತೆ ವೈದ್ಯರು ಸಹ ಸಲಹೆ ನೀಡುತ್ತಾರೆ.

%d bloggers like this: