ಎಲ್ಲಾ ಧಾರಾವಾಹಿಗಳನ್ನು ಹಿಂದೆ ಹಾಕಿ ಟಾಪ್ ಪಟ್ಟಿ ಸೇರಿದ ಹೊಸ ಕನ್ನಡ ಧಾರಾವಾಹಿ

ಧಾರಾವಾಹಿಗಳು ಜನರ ದಿನನಿತ್ಯದ ಭಾಗವಾಗಿವೆ. ರಿಯಾಲಿಟಿ ಶೋ ಗಳನ್ನೂ ಹಿಂದಿಕ್ಕಿ ಧಾರಾವಾಹಿಗಳು ಮುನ್ನುಗ್ಗುತ್ತಿವೆ. ಇದೆ ಕಾರಣಕ್ಕೆ ಕೆಲವೊಂದು ಬಾರಿ ವಾರಾಂತ್ಯದಲ್ಲೂ ಸೀರಿಯಲ್ ಗಳೇ ನಡೆಯುತ್ತಿರುತ್ತವೆ. ಯಾವ ಸಿನಿಮಾಗಳಿಗೂ ಕಡಿಮೆ ಇಲ್ಲವೆಂಬಂತೆ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಕಥೆ, ನಿರ್ದೇಶನ, ಆಕ್ಷನ್, ರೋಮ್ಯಾನ್ಸ್ ಎಲ್ಲವನ್ನು ಕೆಲವ ಸಿನಿಮಾಗಳಲ್ಲಿ ಮಾತ್ರವಲ್ಲದೇ ಧಾರವಾಹಿಗಳಲ್ಲೂ ನೋಡಬಹುದು. ಅಲ್ಲದೇ ಸೀರಿಯಲ್ ಗಳು ದೈನಂದಿನ ಘಟನೆಗಳಿಗೆ ಹೆಚ್ಚಿನ ಮಹತ್ವ ನೀಡುವುದರಿಂದ ಬಹುಬೇಗ ವೀಕ್ಷಕರಿಗೆ ಹತ್ತಿರವಾಗುತ್ತಿವೆ. ಸೀರಿಯಲ್ ಸ್ಟಾರ್ ಗಳು ಕೂಡ ಸಿನಿಮಾ ಸ್ಟಾರ್ ಗಳಂತೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚಿಗೆ ಸಿನಿಮಾರಂಗದ ಹಿರಿಯ ಕಲಾವಿದರು ಕೂಡ ಧಾರಾವಾಹಿಗಳತ್ತ ಮುಖ ಮಾಡುತ್ತಿದ್ದಾರೆ.

ಕಮಲಿ, ಸತ್ಯ, ಕೃಷ್ಣ ಸುಂದರಿ, ಹಿಟ್ಲರ್ ಕಲ್ಯಾಣ, ಪುಟ್ಟಕ್ಕನ ಮಕ್ಕಳು ಹೀಗೆ ಹಿಟ್ ಧಾರಾವಾಹಿಗಳನ್ನು ಜೀ ಕನ್ನಡದ ವಾಹಿನಿ ನೀಡುತ್ತಿದೆ. ಇನ್ನು ಕನ್ನಡತಿ, ರಾಮಾಚಾರಿ, ಗೀತಾ, ಗಿಣಿರಾಮ ಹೀಗೆ ಹಿಟ್ ಧಾರಾವಾಹಿಗಳನ್ನು ಕಲರ್ಸ್ ಕನ್ನಡ ವಾಹಿನಿ ನೀಡುತ್ತಿವೆ. ಕಿರುತೆರೆಯಲ್ಲಿ ಪ್ರಸಾರವಾಗುವ ಎಲ್ಲಾ ಧಾರವಾಹಿಗಳಲ್ಲಿ ಯಾವ ಧಾರಾವಾಹಿ ಅತಿ ಹೆಚ್ಚು ಟಿಆರ್ಪಿ ಹೊಂದಿರುತ್ತದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಈ ಟಿಆರ್ಪಿ ಎಂಬುದು ವಾರದಿಂದ ವಾರಕ್ಕೆ ಬದಲಾಗುತ್ತಲೇ ಇರುತ್ತದೆ. ಹೌದು ಜನರು ಸೀರಿಯಲ್ ಗಳನ್ನು ವೀಕ್ಷಣೆ ಮಾಡುವ ಆಧಾರದ ಮೇಲೆ ಪ್ರತಿಯೊಂದು ಸೀರಿಯಲ್ ಟಿಆರ್ಪಿ ದಿನೇದಿನೇ ಬದಲಾಗುತ್ತಲೇ ಇರುತ್ತದೆ.

ವೀಕ್ಷಕರ ವೀಕ್ಷಣೆಯ ಆಧಾರದಲ್ಲಿ ಪ್ರತಿ ವಾರ ಯಾವ ಧಾರಾವಾಹಿ ಯಾವ ಸ್ಥಾನವನ್ನು ಪಡೆದಿವೆ ಎಂಬುದನ್ನು ತಿಳಿಯಬಹುದು. ಪ್ರತಿವಾರವೂ ಸೀರಿಯಲ್ ಗಳ ಟಿಆರ್ ಪಿಯನ್ನು ಪ್ರಕಟ ಮಾಡಲಾಗುತ್ತದೆ. ಅದರಂತೆ ಈ ವಾರದ ಟಿಆರ್ಪಿ ರೇಟಿಂಗ್ ರಿಪೋರ್ಟ್ ಹೊರಬಂದಿದ್ದು, ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಸಾಮಾನ್ಯವಾಗಿ ಟಾಪ್5 ಸೀರಿಯಲ್ ಗಳ ಸ್ಥಾನವನ್ನು ಬಿಟ್ಟು ಉಳಿದ ಸ್ಥಾನಗಳಲ್ಲಿ ಪ್ರತಿವಾರ ಬದಲಾವಣೆಯಾಗುತ್ತಲೇ ಇರುತ್ತದೆ. ಆದರೆ ಇದೇ ಮೊದಲ ಬಾರಿಗೆ ಟಾಪ್5 ಧಾರಾವಾಹಿಗಳಲ್ಲಿ ಬದಲಾವಣೆಯಾಗುವುದು ಕಂಡುಬಂದಿದೆ. ಕಳೆದ ಎರಡು ವಾರಗಳಲ್ಲಿ ಟಾಪ್ ಐದನೇ ಸ್ಥಾನದಲ್ಲಿ ಆದ ಬದಲಾವಣೆಗಳು ಸಖತ್ ಸದ್ದು ಮಾಡಿದ್ದವು.

ಏಕೆಂದರೆ ಟಾಪ್ 5 ಸ್ಥಾನದಲ್ಲಿ ಯಾವಾಗಲೂ ಜೀ ಕನ್ನಡದ ಸೀರಿಯಲ್ಗಳು ಇರುತ್ತಿದ್ದವು. ಆದರೆ ಇದೇ ಮೊದಲ ಬಾರಿಗೆ ಕಿರುತೆರೆಗೆ ಹೊಸದಾಗಿ ಎಂಟ್ರಿಕೊಟ್ಟ ರಾಮಾಚಾರಿ ಸೀರಿಯಲ್ ಜೀ ಕನ್ನಡ ವಾಹಿನಿಯ ಫೇಮಸ್ ಧಾರಾವಾಹಿಯೊಂದನ್ನು ಹಿಂದಿಕ್ಕಿ ಐದನೇ ಸ್ಥಾನವನ್ನು ಪಡೆದುಕೊಂಡಿತ್ತು. ಹೌದು ಆರಂಭದಿಂದಲೂ ನಂಬರ್1 ಸ್ಥಾನದಲ್ಲಿದ್ದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸತ್ಯ ಧಾರವಾಹಿ ಇತ್ತೀಚಿಗೆ ಒಂದೊಂದೇ ಸ್ಥಾನ ಕೆಳಗಿಳಿಯುತ್ತಾ 5ನೇ ಸ್ಥಾನಕ್ಕೆ ಬಂದು ನಿಂತಿತ್ತು. ಆದರೆ ಇದೇ ಮೊದಲ ಬಾರಿಗೆ ಸತ್ಯ ಸೀರಿಯಲ್ ಟಾಪ್ ಐದರ ಲಿಸ್ಟ್ ನಿಂದ ಹೊರ ಬಿದ್ದಿದೆ. ಇದಕ್ಕೆ ಕಾರಣ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರವಾಹಿ. ಈ ಹಿಂದೆ ಇದೇ ವಾಹಿನಿಯಲ್ಲಿ ಪ್ರಸಾರವಾಗುವ ಪಾರು ಸೀರಿಯಲ್ ಕಳೆದವಾರ ಐದನೇ ಸ್ಥಾನವನ್ನು ಆಕ್ರಮಿಸಿಕೊಂಡಿತ್ತು.

ಆದರೆ ಈ ಬಾರಿ ಮತ್ತೇ ಸ್ಥಾನಗಳಲ್ಲಿ ಬದಲಾವಣೆ ಆಗಿದೆ. ಈ ವಾರ ಮೊದಲ ಮೂರು ಸ್ಥಾನಗಳಲ್ಲಿ ಎಂದಿನಂತೆ ಅನುಕ್ರಮವಾಗಿ ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ ಮತ್ತು ಹಿಟ್ಲರ್ ಕಲ್ಯಾಣ ಧಾರಾವಾಹಿಗಳಿವೆ. ನಾಲ್ಕನೇ ಸ್ಥಾನದಲ್ಲಿ ಜೊತೆಜೊತೆಯಲಿ ಧಾರಾವಾಹಿ ಇದೆ. ಇನ್ನು ಐದನೇ ಸ್ಥಾನದಲ್ಲಿದ್ದ ಕಲರ್ಸ್ ವಾಹಿನಿಯ ರಾಮಾಚಾರಿ ಧಾರಾವಾಹಿಯನ್ನು ಈ ಬಾರಿ ಮತ್ತೆ ಸತ್ಯ ಸೀರಿಯಲ್, ಹೊಸ ಟ್ವಿಸ್ಟ್ ಹಾಗೂ ಕಾರ್ತಿಕ್ ದಿವ್ಯಾ ಮದುವೆ ಪ್ರೇಕ್ಷಕರನ್ನು ತನ್ನತ್ತ ಸೆಳೆದು, 6.6 ಟಿವಿಆರ್ ಪಡೆದು ರಾಮಾಚಾರಿಯನ್ನು ದಾಟಿ ಮತ್ತೆ 5ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಈ ವಾರ ಪಾರು ಧಾರವಾಹಿ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಮತ್ತು ರಾಮಾಚಾರಿ ಏಳನೇ ಸ್ಥಾನದಲ್ಲಿದೆ.

%d bloggers like this: