ಎಲ್ಲರ ಬಾಯಲ್ಲೂ ಈ ಆಟಗಾರನ ಹೆಸರು, ಕೊಹ್ಲಿ ಅಲ್ಲ, ಈ ಆಟಗಾರ ಆಗ್ತಾರಂತೆ ಆರ್ಸಿಬಿ ತಂಡದ ನಾಯಕ

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 15ನೇ ಆವೃತ್ತಿಯಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡಕ್ಕೆ ಕ್ಯಾಪ್ಟನ್ ಯಾರು ಅಂತ ಗೊತ್ತಾ! ಜಗತ್ತಿನ ಪ್ರತಿಷ್ಟಿತ ದೇಶೀಯ ಕ್ರಿಕೆಟ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಕ್ರಿಕೆಟ್ ಪ್ರೇಮಿಗಳಿಗೆ ನೀಡುವಷ್ಟು ರೋಚಕತೆ ಬೇರೆ ಯಾವ ಪಂದ್ಯಗಳು ಕೂಡ ನೀಡುವುದಿಲ್ಲ. ಅದರಲ್ಲೂ ಕರ್ನಾಟಕ ರಾಜಧಾನಿ ಬೆಂಗಳೂರು ಪ್ರತಿನಿಧಿಸುವ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡಕ್ಕೆ ಇರುವ ಫ್ಯಾನ್ ಕ್ರೇಜ಼್ ಮಾತ್ರ ಐಪಿಎಲ್ ಕ್ರಿಕೆಟ್ ನಲ್ಲಿ ಯಾವ ತಂಡಕ್ಕೂ ಕೂಡ ಆ ಪ್ರಮಾಣದ ಅಭಿಮಾನ ಕಾಣುವುದಕ್ಕೆ ಸಾಧ್ಯವಿಲ್ಲ. ಆದರೆ ದುರಾದೃಷ್ಟವಶಾತ್ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಇದುವರೆಗೂ ಅಂದರೆ ನಡೆದಿರುವ 14 ಸೀಸನ್ ಗಳಲ್ಲೂ.

ಒಂದೇ ಒಂದು ಬಾರಿ ಕೂಡ ಈ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಫಿಯನ್ನ ಮುಡಿಗೇರಿಸಿಕೊಂಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಆರ್ಸಿಬಿ ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿ ಅವರು ತಮ್ಮ ತಂಡದ ಪರವಾಗಿ ತಮ್ಮ ಪ್ರಾಮಾಣಿಕ ಪ್ರಯತ್ನ ಮಾಡಿದರು ಕೂಡ ತಮ್ಮ ನಾಯಕತ್ವದ ಅವಧಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿಯನ್ನು ಎತ್ತಿ ಹಿಡಿಯುವಲ್ಲಿ ವಿಫಲರಾದರು. ಇದೇ ಕಾರಣದಿಂದ ನಾಯಕ ವಿರಾಟ್ ಕೊಹ್ಲಿ ಅವರ ನಾಯಕತ್ವದ ಬಗ್ಗೆ ಅಸಮಾಧಾನ ಕೇಳಿ ಬರುತ್ತಿತ್ತು. ಅದ್ಯಾಕೋ ವಿರಾಟ್ ಕೊಹ್ಲಿ ಅವರೇ ಸ್ವತಃ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 14ನೇ ಆವೃತ್ತಿಯಲ್ಲಿ ಸೋಲನ್ನು ಕಂಡ ನಂತರ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡುತ್ತಾರೆ. ಇದರ ಬಳಿಕ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳಿಗೆ ಭಾರಿ ಬೇಸರ ಕೂಡ ಆಗುತ್ತದೆ.

ಆದರೆ ಅನೇಕರು ಈ ಬಾರಿ ಕೊಹ್ಲಿ ಕ್ಯಾಪ್ಟನ್ಸಿ ಇಲ್ಲ ಅಂದ್ಮೇಲೆ ಈ ಬಾರಿಯಾದರೂ ಈ ಐಪಿಎಲ್ ಟ್ರೋಫಿ ಗೆಲ್ಲುತ್ತೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದೀಗ ವಿರಾಟ್ ಕೊಹ್ಲಿ ಅವರು ತ್ಯಜಿಸಿ ಖಾಲಿ ಉಳಿದಿರುವ ಆರ್ಸಿಬಿ ತಂಡದ ನಾಯಕತ್ವದ ಸ್ಥಾನಕ್ಕೆ ಈ ಸ್ಟಾರ್ ಕ್ರಿಕೆಟಿಗನ ಹೆಸರು ಮುನ್ನೆಲೆಗೆ ಬಂದಿದೆ. ಹೌದು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 15ನೇ ಆವೃತ್ತಿಯ ಇನ್ನು ಕೆಲವು ತಿಂಗಳಲ್ಲಿ ಆರಂಭ ಆಗಲಿದೆ. ಅದರಂತೆ ಐಪಿಎಲ್ ಹರಾಜು ಪ್ರಕ್ರಿಯೆ ಕೂಡ ಆಗಿದೆ. ವಿವಿಧ ಫ್ರಾಂಚೈಸಿ ತಂಡಗಳು ತಮ್ಮ ತಂಡಕ್ಕೆ ಬೇಕಾದ ಆಟಗಾರರನ್ನು ಖರೀದಿ ಕೂಡ ಮಾಡಿದ್ದಾರೆ. ಅದರಂತೆ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡ ನೂತನ ರಿಟೇನ್ ನಿಯಮದ ಅಡಿಯಲ್ಲಿ
ವಿರಾಟ್ ಕೊಹ್ಲಿ, ಗ್ಲೇನ್, ಮ್ಯಾಕ್ಸವೆಲ್, ಸಿರಾಜ್ ಅವರನ್ನ ಉಳಿಸಿಕೊಂಡಿದೆ.

ಅಚ್ಚರಿ ಅಂದರೆ ವಿರಾಟ್ ಕೊಹ್ಲಿ ಅವರಿಗೆ ಬರೋಬ್ಬರಿ ಹದಿನೈದು ಕೋಟಿ ನೀಡಿ ತಮ್ಮ ತಂಡದಲ್ಲಿ ಉಳಿಸಿಕೊಂಡಿದೆ ಆರ್ಸಿಬಿ. ಇದೀಗ ಕೆಕೆಆರ್ ತಂಡದ ದಿನೇಶ್ ಕಾರ್ತಿಕ್ ಅವರು ಆರ್ಸಿಬಿ ತಂಡದ ನಾಯಕರಾಗಿ ತಂಡವನ್ನು ಮುನ್ನೆಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ದಿನೇಶ್ ಕಾರ್ತಿಕ್ ಅವರು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಬಲ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಆರ್ಸಿಬಿ ತಂಡ 2022ರ ಐಪಿಎಲ್ ಹರಾಜಿನಲ್ಲಿ ದಿನೇಶ್ ಕಾರ್ತಿಕ್ ಅವರನ್ನ 5.5 ಕೋಟಿ ನೀಡಿ ಖರೀದಿ ಮಾಡಿದೆ.

ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ಆಗಿ ಇದುವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ 213 ಪಂದ್ಯಗಳನ್ನಾಡಿದ್ದಾರೆ. ಈ ಪಂದ್ಯಗಳ ಪೈಕಿ ದಿನೇಶ್ ಕಾರ್ತಿಕ್ 4046 ರನ್ ಕಲೆ ಹಾಕಿದ್ದಾರೆ. 2008ರಿಂದ ಸುದೀರ್ಘ ವರ್ಷಗಳ ಕಾಲ ಐಪಿಎಲ್ ಕ್ರಿಕೆಟ್ ನಲ್ಲಿ ಅನುಭವ ಹೊಂದಿರುವ ದಿನೇಶ್ ಕಾರ್ತಿಕ್ ಅವರು ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡಕ್ಕೆ ಕ್ಯಾಪ್ಟನ್ ಆದರೆ ಸೂಕ್ತ ಎಂಬ ವಿಚಾರ ಆರ್ಸಿಬಿ ತಂಡದಲ್ಲಿ ಚರ್ಚೆ ಆಗಿದೆ. ಮೂಲಗಳ ಪ್ರಕಾರ ದಿನೇಶ್ ಕಾರ್ತಿಕ್ ಅವರೇ ಐಪಿಎಲ್ 15ನೇ ಆವೃತ್ತಿಯಲ್ಲಿ ಆರ್ಸಿಬಿ ತಂಡದ ನಾಯಕ ಎಂದು ತಿಳಿದು ಬರುತ್ತಿದೆ. ಆದರೆ ಇದರ ಬಗ್ಗೆ ಇನ್ನೂ ಕೂಡ ಖಚಿತವಾದ ಮಾಹಿತಿ ಹೊರ ಬಿದ್ದಿಲ್ಲ.

%d bloggers like this: