ಎಲ್ಲರ ತಲೆಯಲ್ಲೂ ಗುನುಗುತ್ತಿದೆ ನಿಖಿಲ್ ಕುಮಾರಸ್ವಾಮಿ ಅವರ ಹೊಸ ಹಾಡು, ಪತ್ನಿ ಜೊತೆ ಹೆಜ್ಜೆ ಹಾಕಿದ ನಟ

ಸ್ಯಾಂಡಲ್ ವುಡ್ ಯುವರಾಜ ನಟ ನಿಖಿಲ್ ಕುಮಾರ್ ತಮ್ಮ ಮಡದಿ ರೇವತಿ ಅವರೊಟ್ಟಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ನಿಖಿಲ್ ಕುಮಾರ್ ಮತ್ತು ರೇವತಿ ದಂಪತಿಗಳಿಗೆ ಇತ್ತೀಚೆಗಷ್ಟೇ ಕೆಲವು ತಿಂಗಳುಗಳ ಹಿಂದೆ ಗಂಡು ಮಗು ಜನನವಾಗಿತ್ತು. ಇದು ದೊಡ್ಡ ಗೌಡರ ಕುಟುಂಬದಲ್ಲಿ ಸಂತೋಷ ದುಪ್ಪಟಾಗಿ ಮಾಜಿ ಸಿ.ಎಂ.ಎಚ್.ಡಿ.ಕುಮಾರ ಸ್ವಾಮಿ ಕುಟುಂಬ ಸಂಭ್ರಮಾಚರಣೆ ಕೂಡ ಮಾಡಿತ್ತು. ತಾಯಿಯಾಗಿರುವ ರೇವತಿ ನಿಖಿಲ್ ಕುಮಾರ್ ಇಷ್ಟು ದಿನಗಳ ಸಾರ್ವಜನಿಕವಾಗಿ ಅಂದರೆ ಸೋಶಿಯಲ್ ಮೀಡಿಯಾಗಳಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತಿರಲಿಲ್ಲ‌. ಇದಕ್ಕೂ ಮುನ್ನ ನಿಖಿಲ್ ಕುಮಾರ್ ಮತ್ತು ರೇವತಿ ದಂಪತಿಗಳು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಆಗಾಗ ತಮ್ಮ ಹೊಸ ಹೊಸ ಫೋಟೋಗಳನ್ನ ಅಪ್ಲೋಡ್ ಮಾಡುತ್ತಿದ್ದರು.

ಇದೀಗ ಬಹಳ ದಿನಗಳ ನಂತರ ನಟ ನಿಖಿಲ್ ಕುಮಾರ್ ಅವರು ತಮ್ಮ ಪತ್ನಿ ರೇವತಿ ಅವರ ಜೊತೆ ರೈಡರ್ ಸಿನಿಮಾದ ಡವಾ ಡವಾ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ದಂಪತಿಗಳಿಬ್ಬರು ಜೊತೆಗೂಡಿ ಸ್ಟೆಪ್ ಹಾಕಿರುವ ವೀಡಿಯೊಂದನ್ನ ನಿಖಿಲ್ ಕುಮಾರ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಅಪಾರ ಮೆಚ್ಚುಗೆ ಪಡೆದುಕೊಳ್ಳುವುದರ ಜೊತೆಗೆ ಸಖತ್ ವೈರಲ್ ಆಗಿದೆ. ಸಿನಿಮಾ ಮತ್ತು ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ನಟ ಮತ್ತು ರಾಜಕಾರಣಿ ನಿಖಿಲ್ ಕುಮಾರ್ ಅಭಿನಯದ ರೈಡರ್ ಸಿನಿಮಾ ಇದೇ ಡಿಸೆಂಬರ್ 24 ರಂದು ಕ್ರಿಸ್ ಮಸ್ ಹಬ್ಬಕ್ಕೆ ಅದ್ದೂರಿಯಾಗಿ ರಾಜ್ಯಾದ್ಯಂತ ಬಿಡುಗಡೆಗೆ ಸಿದ್ದವಾಗಿದೆ.

ಈಗಾಗಲೇ ರೈಡರ್ ಸಿನಿಮಾ ತಂಡ ಭರ್ಜರಿ ಪ್ರಚಾರ ಕಾರ್ಯವನ್ನು ಕೂಡ ಮಾಡುತ್ತಿದೆ. ವಿಜಯ್ ಕೊಂಡ ನಿರ್ದೇಶನದ ರೈಡರ್ ಸಿನಿಮಾದ ಹಾಡುಗಳು ಈಗಾಗಲೇ ಕನ್ನಡ ಸಿನಿ ಪ್ರೇಕ್ಷ ಕರಿಗೆ ಸಖತ್ ಮೋಡಿ ಮಾಡಿದೆ. ಇನ್ನು ನಿನ್ನೆ ತಾನೇ ಡಿಸೆಂಬರ್ 16 ರಂದು ರೈಡರ್ ಚಿತ್ರದ ಟ್ರೇಲರ್ ಕೂಡ ರಿವೀಲ್ ಆಗಿದೆ. ಮಾಸ್, ಲವ್, ಕಾಮಿಡಿ, ಎಮೋಶನ್ ದೃಶ್ಯ ಸನ್ನಿವೇಶಗಳನ್ನ ಒಳಗೊಂಡಿರುವ ಈ ರೈಡರ್ ಚಿತ್ರದ ಟ್ರೇಲರ್ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿದೆ. ಬ್ಯಾಸ್ಕೆಟ್ ಬಾಲ್ ಆಧಾರಿತ ಆಕ್ಷನ್ ಕಮ್ ಲವ್ ಡ್ರಾಮಾ ಕಥಾ ಹಂದರ ಹೊಂದಿರುವ ರೈಡರ್ ಚಿತ್ರದಲ್ಲಿ ನಿಖಿಲ್ ಕುಮಾರ್ ಸೂರ್ಯ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.

ಲಹರಿ ಮ್ಯುಸಿಕ್ ಟಿ ಸೀರಿಸ್ ಪ್ರೊಡಕ್ಷನ್ ಮತ್ತು ಶಿವನಂದಿ ಎಂಟರ್ಟೈನ್ ಮೆಂಟ್ಸ್ ಅಡಿಯಲ್ಲಿ ಸುನಿಲ್ ಗೌಡ ಬಂಡವಾಳ ಹೂಡಿದ್ದಾರೆ. ವಿಶೇಷ ಪಾತ್ರದಲ್ಲಿ ಕೆಜಿಎಫ್ ಸಿನಿಮಾ ಖ್ಯಾತಿಯ ನಟ ಗರುಡರಾಮ್ ಕೂಡ ನಟಿಸಿದ್ದು,ನಿಖಿಲ್ ಕುಮಾರ್ ಅವರಿಗೆ ಜೋಡಿಯಾಗಿ ನಟಿ ಕಾಶ್ಮೀರ ಪರ್ದೇಶಿ ನಟಿಸಿದ್ದಾರೆ. ತಾರಾ ಬಳಗದಲ್ಲಿ ಕಿಲಾಡಿ ಶೋ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ, ಕಿಲ್ಲರ್ ಮಂಜು. ದತ್ತಣ್ಣ, ಅಚ್ಯೂತ್ ಕುಮಾರ್,ಚಿಕ್ಕಣ್ಣ ಅಭಿನಯಿಸಿದ್ದಾರೆ. ಈ ರೈಡರ್ ಸಿನಿಮಾಗೆ ಮ್ಯಾಜಿ಼ಕಲ್ ಕಂಪೋಸರ್ ಅರ್ಜುನ್ ಜನ್ಯ ರಾಗ ಸಂಯೋಜನೆ ಮಾಡಿದ್ದು, ಶ್ರೀಶ ಕೂದುವಳ್ಳಿ ಅವರ ಕ್ಯಾಮೆರ ಕೈ ಚಳಕವಿದೆ.

%d bloggers like this: