ಈಗಿನ ಕಾಲದಲ್ಲಿ ಬಹುತೇಕ ಯುವಕ ಯುವತಿಯರು ಮತ್ತು ಮಧ್ಯವಯಸ್ಸಿನ ಎಲ್ಲಾ ಪುರುಷ ಸ್ತ್ರೀಯರಿಗೂ ಕಾಡುವ ಒಂದೇ ಸಮಸ್ಯೆಯೆಂದರೆ ಅದು ಬಿಳಿಯ ಕೂದಲು. ಹೌದು ಮೊದಲೆಲ್ಲಾ ವಯಸ್ಸಾದ ನಂತರ ತಲೆಯ ಕೂದಲು ನೆರಿಗೆ ಬರುತ್ತಿದ್ದವು. ಆದರೆ ಆಧುನಿಕ ಯುಗದಲ್ಲಿ ಉತ್ತಮವಿರದ ಗುಣಮಟ್ಟದ ಆಹಾರ ಸೇವನೆಯಿಂದಾಗಿ ನಮ್ಮ ಕೂದಲಿಗೆ ಬೇಕಾದ ಅಗತ್ಯ ಪೋಷಕಾಂಶಗಳು ಸಿಗದೆ ಸಣ್ಣ ವಯಸ್ಸಿನಲ್ಲಿಯೇ ಬಿಳಿಯಾಗಲು ಪ್ರಾರಂಭವಾಗುತ್ತದೆ. ಆಶ್ಚರ್ಯವೆಂದರೆ 12ವಯಸ್ಸಿನವರಲ್ಲೂ ಕೂಡ ನಾವು ಈಗ ಇದನ್ನು ನೋಡುತ್ತಿದ್ದೇವೆ. ಹಾಗಾಗಿ ಇದೊಂದು ಸಾರ್ವತ್ರಿಕ ಸಮಸ್ಯೆ ಎನ್ನಬಹುದು. ಆದರೆ ಬಹುತೇಕ ಜನರು ಇದಕ್ಕೆ ಪರಿಹಾರವೇ ಇಲ್ಲ ಎಂಬಂತೆ ಮಾತನಾಡುತ್ತಾರೆ ಮತ್ತು ಕೆಲವರು ಅಂಗಡಿಗಳಲ್ಲಿ ಸಿಗುವ ವಿವಿಧ ರಾಸಾಯನಿಕಗಳನ್ನು ಬಳಸಿಕೊಂಡು ತಾತ್ಕಾಲಿಕವಾಗಿ ಕೂದಲನ್ನು ಕಪ್ಪು ಅಥವಾ ಮೆಹಂದಿ ಬಣ್ಣಕ್ಕೆ ಪರಿವರ್ತಿಸಿಕೊಳ್ಳುತ್ತಾರೆ. ಆದರೆ ಅದು ಕೇವಲ ಇಪ್ಪತ್ತು ಮೂವತ್ತು ದಿನಗಳು ಮಾತ್ರ ಕೆಲಸಕ್ಕೆ ಬರುತ್ತದೆ. ಹಾಗಾಗಿ ನಾವು ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ನಮ್ಮ ಕೂದಲುಗಳನ್ನು ಮತ್ತೆ ಮೊದಲಿನ ಸ್ಥಿತಿಗೆ ತರಬಹುದು. ಹೌದು ಬಾದಾಮಿ ಎಣ್ಣೆಯೊಂದಿಗೆ ನೆಲ್ಲಿಕಾಯಿ ಎಣ್ಣೆಯನ್ನು ಬೆರೆಸಿ ಸ್ವಲ್ಪ ದಿನಗಳ ಕಾಲ ಸತತವಾಗಿ ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ. ಅಥವಾ ಪೇರಲೆ ಹಣ್ಣಿನ ಗಿಡದ ಎಲೆಗಳನ್ನು ತೆಗೆದುಕೊಂಡು ಸ್ವಲ್ಪಹೊತ್ತು ಒಣಗಿಸಿ ಪುಡಿ ಮಾಡಿ ಸ್ನಾನ ಮಾಡುವಾಗ ಶಾಂಪೂ ರೀತಿಯಲ್ಲಿ ಬಳಸಬೇಕು. ಇದರಿಂದ ಕೂಡ ಕೂದಲು ಕಪ್ಪಾಗಾಗುತ್ತಾ ಹೋಗುತ್ತವೆ.