ಎಲ್ಲೇ ಎಂತಹ ಪೂಜೆ ಪುನಸ್ಕಾರ ಇದ್ದರೂ ‘ಓಂ’ ಪದ ಬಳಸುವುದೇಕೆ ತಿಳಿಯಿರಿ

ಹಿಂದೂ ಧರ್ಮದಲ್ಲಿನ ಹೆಚ್ಚು ವೇದ ಮಂತ್ರಗಳಲ್ಲಿ ಓಂ ಎಂಬ ಪದವನ್ನು ಬಳಸಲಾಗುತ್ತದೆ. ಈ ಓಂ ಎಂಬ ಪದವು ನಮ್ಮ ಸುತ್ತಮುತ್ತಲಿನ ವಾತವರಣದಲ್ಲಿ ಇರುವ ನಕರಾತ್ಮಕ ಶಕ್ತಿಯನ್ನು ಹೋಗಲಾಡಿಸಿ, ಸಕಾರಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ ಎಂದು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ. ನಮ್ಮ ಹಿಂದೂ ವೇದ ಮಂತ್ರಗಳಲ್ಲಿ ಪ್ರತಿಯೊಂದು ಮಂತ್ರವು ಸಹ ಓಂ ಎಂಬ ಅಕ್ಷರದಿಂದ ಆರಂಭವಾಗಿ ಸ್ವಾಹಃ ಎಂಬ ಅಕ್ಷರದಿಂದ ಕೊನೆಗೊಳ್ಳುತ್ತದೆ. ಇದಕ್ಕೆ ಪ್ರಮುಖವಾದ ಕಾರಣವೇನೆಂಬುದನ್ನು ತಿಳಿಯುವುದಾದರೆ, ನಮ್ಮ ಅನಾದಿಕಾಲದಿಂದಲೂ ಓಂ ಎಂಬ ಪದವು ಅತ್ಯಂತ ಶಕ್ತಿಯುತವಾದ ಪದ ಎಂದು ನಂಬಲಾಗಿದೆ. ಓಂ ಎಂಬ ಪದದಲ್ಲಿ ಮೂರು ಅಕ್ಷರಗಳನ್ನು ಕಾಣಬಹುದಾಗಿದೆ. ಓ, ಉ, ಅಂ ಎಂಬ ಮೂರು ಅಕ್ಷದಿಂದ ಕೂಡಿದೆ. ಈ ಮೂರು ಅಕ್ಷರಗಳು ಕ್ರಮವಾಗಿ ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರ ದೇವರಿಗೆ ಸಂಬಂಧಿಸಿದ್ದಾಗಿದೆ. ಧರ್ಮಶಾಸ್ತ್ರದ ಪ್ರಕಾರ ಭೂಮಿಯು ಮೂರು ವಿಧಗಳಿಂದ ನಿರ್ಮಾಣ ಪಟ್ಟಿದೆ ಎಂದು ಧರ್ಮಶಾಸ್ತ್ರದಲ್ಲಿ ತಿಳಿಸಲಾಗಿದೆ.

ಅವುಗಳೆಂದರೆ ಸತ್ವ, ರಜಸ ತಾಮಸ ಅಂದರೆ ಸತ್ವದಲ್ಲಿ ಇದು ಒಳ್ಳೆಯ ಗುಣವಾಗಿದ್ದು, ರಜಸದಲ್ಲಿ ಮನುಷ್ಯ ಮತ್ತು ರಾಜನ ಗುಣವನ್ನು ಹೊಂದಿದ್ದು, ತಮಸದಲ್ಲಿ ರಾಕ್ಷಸ ಗುಣವನ್ನು ಹೊಂದಿರುತ್ತದೆ. ಇಲ್ಲಿ ಕೆಲವು ಶಕ್ತಿಯ ಪ್ರಮಾಣದಲ್ಲಿ ಬದಲಾವಣೆ ಕಂಡು ಬರುತ್ತದೆ. ಈ ಸತ್ವ, ರಜಸ, ತಮಸ ಈ ಮೂರು ಗುಣಗಳನ್ನು ಸಮೀಕರಿಸಿ ಓಂ ಎಂದು ಕರೆಯಲಾಗಿದೆ. ಓಂ ಅಂದರೆ ಪವಿತ್ರವಾದ ಆರಂಭ ಎಂದು ಆರಂಭ ಮತ್ತು ಶಿವ ಮತ್ತು ಗಣಪತಿ ದೇವರ ಸಂಕೇತ ಎಂದು ಕರೆಯಲಾಗುತ್ತದೆ. ಓಂ ಅನ್ನು ಗಣಪತಿ ಚಿತ್ರದ ಆಕಾರದಲ್ಲಿ ಕಾಣಬಹುದಾಗಿದ್ದು, ಗಣಪತಿ ದೇವರನ್ನು ವಂದಿಸುವ ಕಾರಣದಿಂದಾಗಿ ಓಂ ಮಂತ್ರವನ್ನು ಉಚ್ಚಾರ ಮಾಡುತ್ತೇವೆ.

ಗಣಪತಿ ದೇವರ ಯಾವುದೇ ರೀತಿಯ ಮಂತ್ರೋಚ್ಚಾರ ಮಾಡುವಾಗ ಓಂ ಎಂಬ ಪದವನ್ನು ಕಡ್ಡಾಯವಾಗಿ ಬಳಸಲಾಗುತ್ತದೆ. ಮೊದಲ ಸಲ ಭೂಮಿ ಸೃಷ್ಟಿ ಗೊಂಡಾಗ, ಸೃಷ್ಠಿಯಾದ ಮೊದಲ ಪದ ಓಂ, ಅದೇ ರೀತಿ ಈ ಭೂಮಿಯು ಅಂತ್ಯಗೊಳ್ಳುವಾಗ ಓಂ ಎಂದು ಕೊನೆಗೊಳ್ಳುತ್ತದೆ ಧರ್ಮಶಾಸ್ತ್ರದಲ್ಲಿ ತಿಳಿಸಲಾಗಿದೆ. ಈ ಏಕಾಗ್ರತೆ ಸುಧಾರಣೆಯ ಸಲುವಾಗಿ ಓಂ ಎಂಬ ಮಂತ್ರವನ್ನು ಮಾನಸಿಕವಾಗಿ ಆರೋಗ್ಯವಾಗಿ ಸಕರಾತ್ಮಕತೆ ಹೆಚ್ಚಿಸಿಕೊಳ್ಳಲು ‘ಓಂ’ ಎಂಬ ಮಂತ್ರವನ್ನು ಸ್ಮರಿಸುತ್ತಾರೆ. ಇದರಿಂದಾಗಿ ರಾಜ ಯೋಗ ಮತ್ತು ಹಠ ಯೋಗ ವ್ಯಾಯಾಮ ಆರಂಭ ಮಾಡುವ ಮೊದಲು ಓಂ ಎಂಬ ಪದವನ್ನು ಬಳಸುತ್ತಾರೆ.

%d bloggers like this: